ವಿಜ್ಞಾನ-ತಂತ್ರಜ್ಞಾನ

ಕ್ಯೂರಿಯಾಸಿಟಿಗೆ ಒಂದು ವರ್ಷ

ಕ್ಯೂರಿಯಾಸಿಟಿಗೆ ಒಂದು ವರ್ಷ
Published On :

06-08- 2012...
ಚಂದ್ರನ ಮೇಲೆ ಕ್ಯೂರಿಯಾಸಿಟಿ ನೌಕೆ ಕಾಲಿಟ್ಟ ದಿನ. ಚಂದಿರನಲ್ಲಿ ಜೀವ ಜಗತ್ತು ಇದೆಯೇ ಎಂಬ ಬೃಹದಾಕಾರದ ಪ್ರಶ್ನೆಯನ್ನು ಒಡಲಲ್ಲಿಟ್ಟುಕೊಂಡು ಇಳಿದಿರುವ ಈ ನೌಕೆ ಮೊನ್ನೆಗೆ (ಆ.6) ಒಂದು ವರ್ಷ ಪೂರೈಸಿದೆ.
ಚಂದ್ರನ ಮೇಲಿನ ಕಲ್ಲು, ಬಂಡೆ, ನದಿಯಾಕಾರದ ಚಿತ್ರ, ಹೂವಿನಂಥ ಚಿತ್ರಗಳನ್ನು ಭೂಮಿಗೆ ಕಳುಹಿಸಿ ಖಗೋಳಶಾಸ್ತ್ರಜ್ಞರಲ್ಲಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕ್ಯೂರಿಯಾಸಿಟಿ ನೌಕೆಯಿಂದ ಬಹಳಷ್ಟು ಪ್ರಯೋಜನವಾಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಕೇವಲ ಚಂದ್ರನಷ್ಟೇ ಅಲ್ಲ, ಕ್ಷುದ್ರಗ್ರಹಗಳಲ್ಲೂ ಜೀವಿಗಳಿರಬಹುದೇ ಎಂಬ ಪ್ರಶ್ನೆಗೂ ಇದೇ ನೌಕೆಯಿಂದ ಉತ್ತರ ಸಿಗುವ ಸಾಧ್ಯತೆಗಳಿವೆ. ಈ ನೌಕೆ ಒಂದು ವರ್ಷದಲ್ಲಿ ಕಳುಹಿಸಿರುವ ಚಿತ್ರಗಳು, ಮಾಹಿತಿ ಅಗಾಧ. ಅಂದರೆ 190 ಗಿಗಾಬೈಟ್ಸ್ ಮಾಹಿತಿ, 36,700 ಚಿತ್ರಗಳು, 35,000 ತಂಬ್‌ನೈಲ್ ಇಮೇಜ್‌ಗಳನ್ನು ಕಳುಹಿಸಿದೆ.
ಅಲ್ಲದೆ 75000 ಲೇಸರ್ ಶಾಟ್‌ಗಳನ್ನು ಬಿಡುವ ಮೂಲಕ ಚಂದ್ರನ ಒಡಲಾಳದಲ್ಲಿನ ದಾಖಲೆಗಳನ್ನೂ ಹೆಕ್ಕಿ ತೆಗೆದಿದೆ. ಎರಡು ಕಲ್ಲುಗಳನ್ನು ಕೊರೆದಿರುವ ಇದು, ಒಂದೂವರೆ ಮೈಲಿಯಷ್ಟು ಸಂಚರಿಸಿದೆ.
ಒಂದು ಕಾರಿನಷ್ಟು ಗಾತ್ರವಿರುವ ಈ ನೌಕೆಯು ಕಳೆದ ನಾಲ್ಕು ವಾರಗಳಲ್ಲಿ 764 ಯಾರ್ಡ್ಸ್‌ಗಳಷ್ಟು ಸಂಚರಿಸಿದೆ. ಅಲ್ಲದೆ, ಈ 6 ತಿಂಗಳಲ್ಲಿ ಚಂದ್ರನಲ್ಲಿನ ಪರ್ವತದ ಕೆಳಗೆ ಅಧ್ಯಯನ ಮಾಡಿದೆ.


-  ಮಂಜುನಾಥ ಎಸ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.