ವಿಜ್ಞಾನ-ತಂತ್ರಜ್ಞಾನ

ಹೃದಯಕ್ಕೂ ವಾಸನೆ ಗೊತ್ತಾಗುತ್ತೆ!

Published On :

ನಾವು ಅಂದುಕೊಂಡ ಹಾಗೆ ನಮ್ಮ ಮೂಗಿಗಷ್ಟೇ ವಾಸನೆ ಗೊತ್ತಾಗುತ್ತೆ. ದೇಹದ ಇತರೆ ಅಂಗಗಳಿಗೆ ವಾಸನೆ ಗ್ರಹಿಸುವ ಶಕ್ತಿ ಇರೋದಿಲ್ಲ. ಆದರೆ ಇರೋ ಸತ್ಯವೇ ಬೇರೆಯಂತೆ. ನಮ್ಮ ಮೂಗಿನಂತೆ ಹೃದಯ, ರಕ್ತ ಮತ್ತು ಶ್ವಾಸಕೋಶಕ್ಕೂ ವಾಸನೆ ಗೊತ್ತಾಗುತ್ತಂತೆ.
ಹೀಗಂತ ಇತ್ತೀಚಿನ ಒಂದು ಸಂಶೋಧನೆ ಹೇಳಿದೆ. ನಾವು ಸೇವಿಸುವ ಆಹಾರದಲ್ಲಿನ ಕೆಲ ರಾಸಾಯನಿಕಗಳು ನಮ್ಮ ಮೂಗನ್ನು ಪ್ರವೇಶಿಸಿದಾಗ ಅದು ನೇರವಾಗಿ ಮೆದುಳಿಗೆ ಕಳುಹಿಸುತ್ತದಂತೆ. ಮೆದುಳು ಅದು ಯಾವುದರ ವಾಸನೆ ಎಂದು ಹೇಳುತ್ತೆ. ಮೂಗು ಮಾಡುವ ಇದೇ ಕೆಲಸವನ್ನು ದೇಹದ ಇತರೆ ಅಂಗಗಳು ಮಾಡುತ್ತವೆ ಎಂಬುದು ಸಂಶೋಧನೆ ಹೇಳಿದ ಹೊಸ ಸುದ್ದಿ. ಆದರೆ, ಯಾವ ರೀತಿ ಗ್ರಹಿಸುತ್ತವೆ ಎಂಬುದರ ಬಗ್ಗೆ ಇನ್ನೂ ಆಳವಾದ ಸಂಶೋಧನೆಯಾಗಬೇಕಿದೆ. ಉದಾಹರಣೆಗೆ, ವೀರ್ಯಾಣುಗಳಲ್ಲಿ ವಾಸನೆ ಗ್ರಾಹಿಗಳು ಇರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಈ ವಾಸನೆ ಗ್ರಾಹಿಗಳು ಹೃದಯ, ರಕ್ತ ಮತ್ತು ಶ್ವಾಸಕೋಶದಲ್ಲೂ ಇರುತ್ತವೆ ಎಂಬುದು ಸಂಶೋಧಕರ ಹೇಳಿಕೆ. ಈ ವಾಸನೆ ಗ್ರಾಹಿಗಳಿಂದಲೇ ಈ ಮೂರು ಅಂಗಗಳೂ ವಾಸನೆ ಗ್ರಹಿಸುವ ಕೆಲಸ ಮಾಡುತ್ತವೆ ಎಂದು ವಾದಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.