ಎಲ್ಲವೂ ಸರಾಗ!

ಉತ್ತಮ ಸಂಗೀತವನ್ನು ಆಲಿಸಿ 'ಲೈಂಗಿಕ ತೃಪ್ತಿ'ಯಷ್ಟೇ 'ಆನಂದ' ಅನುಭವಿಸಿ!
ಉತ್ತಮ ಸಂಗೀತವನ್ನು ಆಲಿಸಿ ಸುಖಕರ ನಿದ್ರೆ ಮಾಡಿ, ಮೆದುಳು ಕ್ರಿಯಾಶೀಲವಾಗಿಸಿ!
ಇಂಥದ್ದೊಂದು ಉಲ್ಲಾಸ ಭರಿತ ಅಂಶವನ್ನು ಹೊರಗೆಡವಿದ್ದು ಎರಡು ಪ್ರತ್ಯೇಕ ಸಂಶೋಧನೆಗಳು.
ಹೌದು. ಬರೀ ಹಾಡನ್ನು ಕೇಳಿದರೆ ಲೈಂಗಿಕ ತೃಪ್ತಿ ಹೇಗೆ ಸಿಗುತ್ತದೆ ಎಂದು ಬೈದುಕೊಳ್ಳಬೇಡಿ. 'ಅದನ್ನು' ಮಾಡದೇ ಸುಖ ಅನುಭವಿಸಿ ಎಂದು 'ಎಲ್ಲ'ವನ್ನೂ ಬಿಟ್ಟು ಈ ಸಂಶೋಧನೆ ಮಾಡಿದ್ದಾರೆ ಎಂದೂ ಮೂಗು ಮುರಿಯಬೇಡಿ. ಅವರ ಸಂಶೋಧನೆಯ ವಿವರ ಇಲ್ಲಿದೆ ನೋಡಿ.
ಕೆನಡಾದ ಸಂಶೋಧಕರು ಎಂಆರ್‌ಐ (ಂಛ್ಜಟಿಜಡ್ಝ್ಛಿ ಖಜಡ್ಟಟಿಛಟ್ಛಿಜ ಐಟಛ್ಜ್ಝಟ್ಜಿ) ಸ್ಕ್ಯಾನ್ ಮುಖಾಂತರ ಎಂದೂ ಕೇಳಿರದ ಹಾಡುಗಳನ್ನು ಕೇಳಿಸಿ ಈ ಸಂಶೋಧನಾ ವರದಿಯನ್ನು ತಯಾರಿಸಿದ್ದಾರೆ.
ಇವರ ಪ್ರಕಾರ ಹಾಡನ್ನು ಮೊದಲ ಬಾರಿ ಕೇಳಿದಾಗ ಮೆದುಳಿನ ಪ್ರತಿಫಲನ ಕೇಂದ್ರದಲ್ಲಿ ಸಂಚಲನ ಮೂಡಿಸುತ್ತದೆ. ಇದು ಎಲ್ಲ ರೀತಿಯಲ್ಲಿ ಚುರುಕು ಮಾಡಲು ಕಾರಣವಾಗುತ್ತದೆ ಎಂಬುದು ಸಾರಾಂಶ.
ಇದಕ್ಕಾಗಿ ಕೆಲವು ಆಯ್ದ ವ್ಯಕ್ತಿಗಳಿಗೆ ಎಂದೂ ಕೇಳಿರದ 60 ಹಾಡುಗಳನ್ನು ಕೇಳಿಸಲಾಯಿತು. ಇದನ್ನು ಸ್ಕ್ಯಾನಿಂಗ್ ಟೆಸ್ಟ್ ಮೂಲಕ ನಿಗಾವಹಿಸಲಾಯಿತು. ನಂತರದಲ್ಲಿ ಆ ವ್ಯಕ್ತಿಗಳ ಮೆದುಳಿನ ಪ್ರತಿಫಲನ ಕೇಂದ್ರದಲ್ಲಿ ಬದಲಾವಣೆ ಉಂಟಾಯಿತು. ಬಳಿಕ ಅವರು ಕೆಲವು ಟ್ಯೂನ್‌ಗಳಿಗಾಗಿ ಎಷ್ಟು ಹಣ ತೆರಲೂ ಸಿದ್ಧರಿದ್ದರು ಎಂಬ ಅಂಶವನ್ನು ಸಂಶೋಧನೆ ಮೂಲಕ ಕಂಡುಕೊಳ್ಳಲಾಯಿತು.
ಅಂದರೆ ಇಲ್ಲಿ ವ್ಯಕ್ತಿಗಳು ಸಂಗೀತ ಸುಖಕ್ಕಾಗಿ ಹೆಚ್ಚು ಹಣ ನೀಡಲೂ ಸಿದ್ಧರಿದ್ದಾರೆ ಎಂಬ ಅಂಶ ಪತ್ತೆಯಾದಂತಾಗಿದೆ. ಇದರಿಂದಾಗಿ ಮಾಂಟ್ರಿಯಲ್ ನರವಿಜ್ಞಾನ ಇನ್ಸ್‌ಟಿಟ್ಯೂಟ್ ಮತ್ತು ವೈಜ್ಞಾನಿಕ ಅಧ್ಯಯನ ಕೇಂದ್ರದ ಡಾ. ವ್ಯಾಲೋರಿ ಸ್ಯಾಲಿಂಪೂರ್ ಸಂಗೀತ ಆಲಿಕೆಯಿಂದ ಲೈಂಗಿಕ ತೃಪ್ತಿ ಕೊಡುತ್ತದೆ. ಹಾಗೂ ನಾವು ಇಷ್ಟಪಡುವ ಆಹಾರವನ್ನು ಸೇವಿದಷ್ಟೇ ಖುಷಿ ಕೊಡುತ್ತದೆ ಎಂಬ ಷರಾ ಬರೆದಿದ್ದಾರೆ.
ಇದೀಗ ನಿದ್ದೆಯ ಸಮಯ!
ನಿದ್ರೆ ಮಾಡೋದು ಅಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ! ಆದ್ರೆ ಕೆಲವೊಮ್ಮೆ ಅದೇ ಕಷ್ಟವಾಗಿ ಬಿಡುತ್ತದೆ. ಎಷ್ಟೇ ಕಷ್ಟಪಟ್ಟರೂ ನಿದ್ದೆ ಬರೋದೇ ಇಲ್ಲ. ಹಾಸಿಗೆಯ ಯಾವ ಕಡೆ ಮಗ್ಗಲು ಬದಲಿಸಿದರೂ... ಊಹ್ಞೂಂ ನಿದ್ದೆ ಬಂದಿಲ್ಲ... ನಂಗೆ ನಿದ್ದೆ ಬಂದಿಲ್ಲ ಎಂಬ ಹಾಡು ಹಾಡಬೇಕಾಗುತ್ತದೆ.
ಆದ್ರೆ ಉತ್ತಮ ನಿದ್ರೆ ಮಾಡೋದು ಹೇಗೆ? ನೀವು ಏನು ಮಾಡಿದರೆ ನಿದ್ರೆ ಮತ್ತನ್ನು ಅನುಭವಿಸಬಹುದು ಎಂಬ ಅಂಶವನ್ನು ಜರ್ಮನಿಯ ಸಂಶೋಧಕರ ತಂಡವೊಂದು ನಿದ್ರೆ ಬಿಟ್ಟು ಕಂಡುಕೊಂಡಿದೆ. ಇದಕ್ಕೆ ಅವರು ಹೇಳುವ ಉತ್ತರವೂ ಅದೇ... ಸಂಗೀತ (ಹಾಡನ್ನು)ವನ್ನು ಆಲಿಸಿ.
ಹಾಡನ್ನು ಕೇಳುತ್ತಾ ಮಲಗಿದರೆ ಒಳ್ಳೆ ನಿದ್ರೆ ಜತೆಗೆ ಮೆದುಳಿನಲ್ಲಿ ಚುರುಕುತನ ಮೂಡಿಸುತ್ತದೆ. ಅಲ್ಲದೇ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ ಎಂದೂ ಸಂಶೋಧನೆ ಹೇಳಿದೆ. ಇದಕ್ಕಾಗಿ ಹಲವರನ್ನು ಆಯ್ದುಕೊಂಡು ಅವರಿಗೆ ಹಾಡನ್ನು ಕೇಳಿಸಿ ಈ ವರದಿ ತಯಾರಿಸಿದೆ.
ಉತ್ತಮಸಂಗೀತ ಆಲಿಸುವುದರಿಂದ, ರಿದಮ್ ಆದ ಹಾಡು ಕೇಳುವುದರಿಂದ, ಒಂದು ನಿಗದಿತ ಧ್ವನಿಯಲ್ಲಿ ಆಸ್ವಾದಿಸುವುದರಿಂದ ಮನುಷ್ಯನ ಮನಸ್ಸು ಪ್ರಫುಲ್ಲವಾಗುತ್ತದೆ. ಇದು ಒಳ್ಳೆಯ ನಿದ್ರೆಗೆ ಸಹಕಾರವಾಗುತ್ತದೆ. ಸಂಗೀತದಲ್ಲಿರುವ ಧ್ವನಿ ತರಂಗಗಳು ಮನುಷ್ಯನ ನೆನಪಿನ ಶಕ್ತಿ ಹಾಗೂ ನಿದ್ರೆಯ ಗುಣಮಟ್ಟವನ್ನು ವೃದ್ಧಿಸುತ್ತದೆಯಂತೆ.
ಮತ್ತೆ, ಇನ್ನೇಕೆ ತಡ? ಮ್ಯೂಸಿಕ್ ಟ್ರ್ಯಾಕ್ ಆನ್ ಮಾಡಿ...
-ಶ್ರೀನಿವಾಸ್ ಎ. ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


