ಕಾಂತಿಯ ಪರಿಣಾಮ
ಹಾಗೊಂದು ಮಾತಿದೆ. 'ಮುಖ ನೋಡಿ ಮಣೆ ಹಾಕಬೇಡ, ಗುಣ ನೋಡಿ ಅಳೆಯಮ್ಮ...'. ಈ ಡೈಲಾಗ್ ತುಂಬಾ ಹಳೆಯದು. ಈಗ ಮುಖ ನೋಡಿಯೇ ವ್ಯಕ್ತಿಗಳನ್ನು ಅಳೆಯುವ ಸಾಧನವೊಂದು ಬಂದರೂ ಅಚ್ಚರಿಯಿಲ್ಲ.
ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಫುಜಿಟ್ಸು ಕಂಪನಿನ ಸಂಶೋಧನಾ ಕೇಂದ್ರದಲ್ಲಿ ಇಂಥ ಸಾಧನವೊಂದನ್ನು ಕಂಡುಹಿಡಿಲಾಗಿದೆಯಂತೆ. ಅದರ ಪ್ರಕಾರ ನೀವು ಮುಖನೋಡಿಯೇ ಮಣೆಹಾಕಬಹುದಂತೆ!
ನಮ್ಮ ಮುಖದ ಕಾಂತಿ ಮತ್ತು ನಮ್ಮ ನಾಡಿಮಿಡಿತಕ್ಕೂ ಸಂಬಂಧವಿದೆಯಂತೆ. ಇದನ್ನು ಆಧರಿಸಿಯೇ ಹೊಸ ತಂತ್ರಜ್ಞಾನ ರೂಪಿಸಲಾಗಿದೆಯಂತೆ. ಮುಖದ ಕಾಂತಿ ಮತ್ತು ಅದರಲ್ಲಾಗುವ ಬದಲಾವಣೆ ಆಧರಿಸಿ ವ್ಯಕ್ತಿಯ ಆರೋಗ್ಯದಲ್ಲಾಗುತ್ತಿರುವ, ಆಗಬಹುದಾದ ಬದಲಾವಣೆಗಳನ್ನು ಗುರುತಿಸುವುದು ಈ ತಂತ್ರಜ್ಞಾನದ ಮುಖ್ಯ ಉದ್ದೇಶ.
ಇದೇ ತಂತ್ರಜ್ಞಾನವನ್ನು ಬಳಸಿ ಉಗ್ರಗಾಮಿಗಳನ್ನು ಅವರು ದುಷ್ಕೃತ್ಯ ಮಾಡುವ ಮೊದಲೇ ಅವರನ್ನು ಪತ್ತೆ ಮಾಡಬಹುದು ಎನ್ನಲಾಗುತ್ತಿದೆ. ಈ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಭದ್ರತಾ ಕ್ಯಾಮೆರಾ ಹೀಗೆ ಯಾವುದೇ ಸಾಮಾನ್ಯ ಕ್ಯಾಮೆರಾ ಸಹಾಯದಿಂದ ಮುಖದ ಕಾಂತಿ ಮತ್ತು ಅದರಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸಬಲ್ಲದು.
ವ್ಯಕ್ತಿಯ ಮುಖ ಮತ್ತು ಅದರ ಕಾಂತಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸಲು ಈ ತಂತ್ರಜ್ಞಾನಕ್ಕೆ ಕೇವಲ 5 ಸೆಕೆಂಡ್ ಸಾಕಂತೆ!
ಆದ್ದರಿಂದ ಅತ್ಯಂತ ಶೀಘ್ರವಾಗಿ ಪತ್ತೆ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ಹದಗೆಡುವ ಅಥವಾ ಆತನಲ್ಲಾಗುತ್ತಿರುವ ಬದಲಾವಣೆಗಳನ್ನು ಅತ್ಯಂತ ಶೀಘ್ರವಾಗಿ ಪತ್ತೆ ಮಾಡಬಹುದು ಎನ್ನಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂಬುದು ಖಚಿತವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

