ಕ್ಲಿಕ್.. ವಚನ ಸಂಚಯ
ವೆಬ್ ಸೈಟ್ ಓಪನ್ ಮಾಡಿದ ಕೂಡಲೇ ನಿಮಗೆ ಬೇಕಾದ ಎಲ್ಲಾ ವಚನಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಿ ತೆಗೆಯಬಹುದು. ವಚನಕಾರರ ಹೆಸರು...

Published On :
ಹನ್ನೆರಡು ಮತ್ತು ಹದಿಮೂರನೇ ಶತಮಾನದ ವಚನಗಳನ್ನೋದಬೇಕೆ? ಹಾಗಾದರೆ www.vachana.sanchaya.net ವೆಬ್ ಸೈಟಿನ ಒಳಹೊಕ್ಕು ನೋಡಿ.
ಇಲ್ಲಿ ಸುಮಾರು 259 ವಚನಕಾರರ 20930ಕ್ಕೂ ಅಧಿಕ ವಚನಗಳು ಸಿಗುತ್ತವೆ. ಈ ವಚನ ಸಂಚಯದಲ್ಲಿ 2,09,876ಕ್ಕೂ ಅಧಿಕ ಪದಗಳಿವೆ.
ವೆಬ್ ಸೈಟ್ ಓಪನ್ ಮಾಡಿದ ಕೂಡಲೇ ನಿಮಗೆ ಬೇಕಾದ ಎಲ್ಲಾ ವಚನಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಿ ತೆಗೆಯಬಹುದು. ವಚನಕಾರರ ಹೆಸರು ಮತ್ತು ವಚನಗಳ ಆರಂಭಿಕ ಪದಗಳನ್ನು ವರ್ಣಮಾಲೆಯ ಅಕ್ಷರಗಳನ್ನು ಕ್ಲಿಕ್ಕಿಸಿದರೆ ಹೊಸ ಲಿಂಕ್ ತೆರೆಯುತ್ತದೆ. ಈ ಮೂಲಕ ನೇರವಾಗಿ ಅಲ್ಲಿ ವಚನವನ್ನು ಓದಬಹುದಾಗಿದೆ.
ವಚನ ಸಂಚಯದ ರೂವಾರಿಗಳು
ಓ.ಎಲ್. ನಾಗಭೂಷಣಸ್ವಾಮಿ ಮತ್ತು ವಸುಧೇಂದ್ರ ಅವರ ಮಾರ್ಗದರ್ಶನದಲ್ಲಿ ಓಂ ಶಿವಪ್ರಕಾಶ್ ಎಚ್.ಎಲ್(ಕಾರ್ಮಾಟೆಕ್ ಐಟಿ ಸಲ್ಯೂಷನ್ಸ್ ಕಂಪೆನಿಯಲ್ಲಿ ತಂತ್ರಜ್ಞಾನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ), ಅವರ ಪತ್ನಿ ಪವಿತ್ರಾ (ಟ್ರೆಂಡ್ ಮೈಕ್ರೊ ಕಂಪೆನಿಯ ಉದ್ಯೋಗಿ) ಮತ್ತು ದೇವರಾಜ್ (ಕಾರ್ಮಾಟೆಕ್ ಕಂಪೆನಿಯಲ್ಲಿ ಡೆವಲಪಿಂಗ್ ವಿಭಾಗದ ಉದ್ಯೋಗಿ) ವಚನ ಸಂಚಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಚನ ಸಂಚಯದ ತರನೇ ಕನ್ನಡದ ಕೃತಿಗಳೂ ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ವಚನ ಸಂಚಯದಂತೆ ದಾಸ ಸಂಚಯವೂ ಇದೆ. ಸರ್ವಜ್ಞ ಸಂಚಯದ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಎಲ್ಲ ವಚನಗಳು ಆನ್ ಲೈನ್ ನಲ್ಲಿ ಸಿಗಬೇಕೆಂಬುದು ನಮ್ಮ ಉದ್ದೇಶ.
- ಓಂಶಿವಪ್ರಕಾಶ್ .ಹೆಚ್.ಎಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


