ನನ್ನನ್ನೂ ವಾಷಿಂಗ್ ಮಷಿನ್‌ಗೆ ಹಾಕಿ ಕ್ಲೀನ್ ಮಾಡಿದ್ರು; ಬಿಜೆಪಿ ನಾಯಕರೆಲ್ಲಾ ಹರಿಶ್ಚಂದ್ರರು': ಶಾಸಕ ಶಿವರಾಮ ಹೆಬ್ಬಾರ್ ವ್ಯಂಗ್ಯ
ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ಸೇರಿಲ್ಲ, ಅವರನ್ನು ತಗೊಂಡು ಹೋಗಿ ಕೂರಿಸಿದ್ದಾರೆ. ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದಾಗ ಪತ್ರಿಕಾಗೋಷ್ಠಿ ಮಾಡಿಸಿದಂತೆ ಇದು ಎಂದರು.

ಕಾರವಾರ: ಯಾರೆಲ್ಲಾ ಬಿಜೆಪಿಗೆ ಹೋಗುತ್ತಾರೋ ಅವರನ್ನು ವಾಷಿಂಗ್ ಮಿಷನ್‌ಗೆ ಹಾಕಿದರೆ ಎಲ್ಲವೂ ಕ್ಲೀನ್ ಆಗುತ್ತದೆ. ನನ್ನನ್ನೂ ವಾಷಿಂಗ್ ಮಷಿನ್‌ನಲ್ಲಿ ಹಾಕಿದ್ದರು ಎಂದು ಬಿಜೆಪಿ ಉಚ್ಚಾಟಿತ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ವ್ಯಂಗ್ಯವಾಡಿದರು .
ಸೋಮವಾರ ಕೇಂದ್ರ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮೊದಲ ಬಾರಿಗೆ ಮುಕ್ತವಾಗಿ ಪಾಲ್ಗೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿಬಿಐ, ಇಡಿ ಹಾಗೂ ಚುನಾವಣಾ ಆಯೋಗ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ನೀತಿಯು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ಸೇರಿಲ್ಲ, ಅವರನ್ನು ತಗೊಂಡು ಹೋಗಿ ಕೂರಿಸಿದ್ದಾರೆ. ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದಾಗ ಪತ್ರಿಕಾಗೋಷ್ಠಿ ಮಾಡಿಸಿದಂತೆ ಇದು ಎಂದರು.
ಸಿಬಿಐ, ಇಡಿ, ಚುನಾವಣಾ ಆಯೋಗವನ್ನು ಬಿಜೆಪಿಯು ಜೇಬಲ್ಲಿಇಟ್ಟುಕೊಂಡು ಕೆಲಸ ಮಾಡಿಕೊಂಡು ಹೋದರೆ ಎಲ್ಲವೂ ಕಾಂಗ್ರೆಸ್ ಮೇಲೆಯೇ ದಬ್ಬಾಳಿಕೆಯಾಗುತ್ತದೆ. ಸತೀಶ್ ಸೈಲ್, ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಮೇಲೆ ರೇಡ್‌ಗಳು ನಡೆಯುತ್ತವೆ. ಬಿಜೆಪಿಗರು ಎಲ್ಲರೂ ದೇಶದಲ್ಲಿ ಹರಿಶ್ಚಂದ್ರರು, ಕಾಂಗ್ರೆಸ್‌ನವರು ಮಾತ್ರ ಕಳ್ಳರು ಎನ್ನುವ ರೀತಿಯಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನಾನು ನಿಮಗೆ ಆಶ್ಚರ್ಯವನ್ನುಂಟು ಮಾಡಿರಬಹುದು. ಆದರೆ ನನಗೇನೂ ಆಶ್ಚರ್ಯವಾಗಿಲ್ಲ. ಇಂದು ನಾನು ಸ್ವತಂತ್ರ ಹಕ್ಕಿ," ಎಂದು ಹೆಬ್ಬಾರ್ ಹೇಳಿದರು. ರಾಜಕೀಯ ಪಕ್ಷವೊಂದರಿಂದ ಉಚ್ಚಾಟನೆಗೊಂಡ ನಂತರ, ವಿವಿಧ ಸಂದರ್ಭಗಳಲ್ಲಿ ಯಾವುದು ಸರಿಯೆಂದು ತಮಗೆ ಅನ್ನಿಸುತ್ತದೆಯೋ ಅದನ್ನು ನಿರ್ಧರಿಸುವ ಸ್ವಾತಂತ್ರ್ಯ ತಮಗಿದೆ ಎಂದು ಅವರು ತಿಳಿಸಿದರು. ಜನರು ನನಗೆ ಅಧಿಕಾರ ನೀಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿರುವ ರೀತಿ ಪ್ರಜಾಪ್ರಭುತ್ವದ ಹತ್ಯೆಯಾಗಿದೆ," ಎಂದು ಹೆಬ್ಬಾರ್ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



