'ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? ಮದುವೆಯೇ ಆಗಿಲ್ಲ': ಪ್ರಧಾನಿ ಮೋದಿ ವಿರುದ್ದ ಏಕವಚನದಲ್ಲೇ ಬಿ.ಕೆ ಹರಿಪ್ರಸಾದ್ ವಾಗ್ದಾಳಿ
ಇಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು, ನಮ್ಮಲ್ಲಿ ಮಹಾಮಾನವರೊಬ್ಬರು ಪ್ರಧಾನಿ ಆಗಿ ಬಿಟ್ಟಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಶನಿವಾರ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, 'ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? ಮದುವೆಯೇ ಆಗಿಲ್ಲ ಎಂದು ಟೀಕಿಸಿದರು.
ಇಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು, ನಮ್ಮಲ್ಲಿ ಮಹಾಮಾನವರೊಬ್ಬರು ಪ್ರಧಾನಿ ಆಗಿ ಬಿಟ್ಟಿದ್ದಾರೆ. ಮನ್ ಕಿ ಬಾತ್ ಅಂತ ಮಾತನಾಡುತ್ತಾರೆ. 12 ವರ್ಷ ಆಯ್ತು, ಧಾರ್ಮಿಕತೆ ಬಗ್ಗೆ 12 ನಿಮಿಷ ಮಾತನಾಡಿದ್ದು ನೋಡಿದ್ದೀರಾ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಸಾರ್ವಜನಿಕ ಉದ್ಯಮಗಳು ಇವೆ. ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಕಾಂಗ್ರೆಸ್ ಸ್ಥಾಪನೆ ಮಾಡಿದೆ. ಆದರೆ ಮಹಾಮಾನವ ಪದೇ ಪದೇ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇವ್ರು 26 ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿದ್ದಾರೆ. ಯಾರು ಮಾಡಿದ್ದು ಎಂದು ಕೇಳಿ ನೋಡಿ ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದ ಹಿಡಿದು ನರಸಿಂಹರಾಯರವರೆಗೂ ಸಾರ್ವಜನಿಕ ಉದ್ಯಮ ಮಾಡಿದ್ದು ಕಾಂಗ್ರೆಸ್. ನಾನು ಗುಜರಾತ್‌ನಲ್ಲಿ 4.5 ವರ್ಷ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದೇನೆ. ಅಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ಮಾಡಲಿಲ್ಲ.ಈಗ ಏನಿದ್ರೂ ಅದಾನಿ, ಅಂಬಾನಿ ಒಂದಷ್ಟು ಜನ ಬಂಡವಾಳ ಶಾಹಿಗಳು ಇದ್ದಾರೆ. ಎಲ್ಲವನ್ನೂ ಖರೀದಿ ಮಾಡುತ್ತಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



