'ಬ್ಲಾಕ್ ಮಾರ್ಕೆಟ್' ಕಳ್ಳನ ಮಕ್ಕಳಿಗೆ ಸಂಸ್ಕಾರ ಎಲ್ಲಿಂದ ಬರುತ್ತೆ; ಅಪ್ಪನಿಗೆ ಹುಟ್ಟಿದ್ರೆ ನನಗೆ ಬೂಟಿನಲ್ಲಿ ಹೊಡೆಯಲಿ: ಶಾಸಕ ಬಿ.ಪಿ ಹರೀಶ್
ಮಲ್ಲಿಕಾರ್ಜುನ್ ಭ್ರಷ್ಟಾಚಾರದ ಹಣದಲ್ಲಿ ಭ್ರಮೆಯಲ್ಲಿದ್ದಾನೆ. ಯಾರಿಗೆ ಏನು ಬೇಕಾದರೂ ಮಾತನಾಡಬಹುದು, ನಿಂದಿಸಬಹುದು ಅಂದುಕೊಂಡಿದ್ದಾನೆ. ಬೂಟಿನಲ್ಲಿ ಹೊಡೆಯುತ್ತೇನೆ ಅಂದಿದ್ದಾನೆ.

ದಾವಣಗೆರೆ: ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ನಡುವೆ ಜಗಳ ತಾರಕಕ್ಕೇರಿದ್ದು, ಸಾರ್ವಜನಿಕವಾಗಿ ಅವಾಚ್ಯ ಪದಗಳ ಬಳಿಸಿ ಬೈಯ್ಯುವ ಹಂತಕ್ಕೆ ಹೋಗಿದೆ. ಸಚಿವರು ಅವಾಚ್ಯ ಪದ ಬಳಕೆಯಿಂದ ಬೇಸರಗೊಂಡ ಶಾಸಕರು ಅಪ್ಪನಿಗೆ ಹುಟ್ಟಿದ್ರೆ ಬೂಟಿನಲ್ಲಿ ಹೊಡೆಯಲಿ ಎಂದು ಸವಾಲು ಹಾಕಿದ್ದಾರೆ.
ಭದ್ರಾ ನೀರಿನ ವಿಚಾರಕ್ಕೆ ರೈತರು ಕೇಳಿದ ಹಿನ್ನೆಲೆಯಲ್ಲಿ ಸಿಡಿಮಿಡಿಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಎಸ್ಸೆಸ್ ಮಲ್ಲಿಕಾರ್ಜುನ ಆಡಿದ ಪದಗಳು ಈಗ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಆಕ್ರೋಶ ಹೊರಹಾಕುವ ಮೂಲಕ ಇಬ್ಬರ ಮಧ್ಯೆ ಬೂದಿ ಮುಂಚಿದ ಕೆಂಡದಂತಿದ್ದ ಪರಿಸ್ಥಿತಿ ಮಂಗಳವಾರ ಸ್ಪೋಟಗೊಂಡಿದೆ.
ಹರಿಹರಕ್ಕೆ ತೆರಳಿದ್ದ ಸಚಿವ ಎಸ್‌ಎಸ್ ಮಲ್ಲಿಕಾರ್ಜುನಗೆ ಅಲ್ಲಿನ ಸ್ಥಳೀಯ ರೈತರು ಭದ್ರಾ ನೀರಿನ ವಿಚಾರದಲ್ಲಿ ಮನವಿ ಸಲ್ಲಿಕೆ ಮಾಡಿದರು. ಈ ವೇಳೆ ಶಾಸಕ ಬಿಪಿ ಹರೀಶ್ ಹೆಸರು ಉಲ್ಲೇಖಿಸಿದ್ದಕ್ಕೆ ಸಚಿವರು ಏಕಾಏಕಿ ಗರಂ ಆಗಿ ಅವಾಚ್ಯ ಶಬ್ಧ ಬಳಕೆ ಮಾಡಿ ಮೆಟ್ಟಿನಲ್ಲಿ ಹೊಡೆಯುತ್ತೀನಿ ಎಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹರಿಹರ ತಾಲ್ಲೂಕಿಗೆ ನೀರಿಲ್ಲ. ಹರೀಶಣ್ಣ (ಶಾಸಕರು) ಅವರನ್ನು ಕೇಳಿದರೆ ನಿಮ್ಮ (ಸಚಿವ) ಮೇಲೆ ಹೇಳುತ್ತಿದ್ದಾರೆ ಎನ್ನುತ್ತಿದ್ದಂತೆ ಎಸ್.ಎಸ್. ಮಲ್ಲಿಕಾರ್ಜುನ್ ಕೆರಳಿದರು. ಅವನೊಬ್ಬ (ಹರೀಶ್) ಕಳ್ಳ.. ಎಂದು ಮಾತು ಆರಂಭಿಸಿದ ಸಚಿವರು ಅವಾಚ್ಯವಾಗಿ ನಿಂದಿಸಿದ್ದಾರೆ. ಸಹೋದರನಿಗೆ ಮಾತ್ರ ಅಣ್ಣ ಎಂಬ ಪ್ರೀತಿ ತೋರಿ. ಆ ವ್ಯಕ್ತಿಗೆ ಅಣ್ಣ ಎಂಬುದಾಗಿ ಕರೆಯಬೇಡಿ ಎಂದು ಏಕವಚನದಲ್ಲಿ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನೂ ಮಲ್ಲಿಕಾರ್ಜುನ ಮಾತಿಗೆ ಕೆಂಡಾಮಂಡಲವಾಗಿರುವ ಹರೀಶ್, ಮಲ್ಲಿಕಾರ್ಜುನ್ ಭ್ರಷ್ಟಾಚಾರದ ಹಣದಲ್ಲಿ ಭ್ರಮೆಯಲ್ಲಿದ್ದಾನೆ. ಯಾರಿಗೆ ಏನು ಬೇಕಾದರೂ ಮಾತನಾಡಬಹುದು, ನಿಂದಿಸಬಹುದು ಅಂದುಕೊಂಡಿದ್ದಾನೆ. ಬೂಟಿನಲ್ಲಿ ಹೊಡೆಯುತ್ತೇನೆ ಅಂದಿದ್ದಾನೆ. ಅವರ ಅಪ್ಪ ಶಾಮನೂರು ಶಿವಶಂಕರಪ್ಪ ಹುಟ್ಟಿಬಂದರೂ ನಮ್ಮ ಮನೆತನದವರಿಗೆ ಯಾರಿಗೂ ಏನು ಮಾಡುವುದಕ್ಕೆ ಆಗಲ್ಲ.
ನಾವು ಜನರ ಮಧ್ಯೆ ಇದ್ದು, ಜನರಿಗೋಸ್ಕರ ಹೋರಾಟ ಮಾಡುತ್ತಿದ್ದೇವೆ. ಆದರೆ, ಸಚಿವರು ಅವರ ಮನೆತನ ಬೆಳೆಸಲು ಹೋರಾಟ ಮಾಡುತ್ತಿದ್ದಾರೆ. ಅವನು ಯಾರು ನನಗೆ ಬೂಟಿನಲ್ಲಿ ಹೊಡೆಯೋಕೆ. ಅದು ಸಾಧ್ಯವಿಲ್ಲ. ನನಗೆ 22 ವರ್ಷ ಇದ್ದಾಗ ದಾವಣಗೆರೆ ನಗರಸಭೆ ಸದಸ್ಯನಾಗಿದ್ದೆ. 40 ವರ್ಷಗಳ ರಾಜಕೀಯ ಅನುಭವ ಇದೆ. ಇಂತಹ ದುಷ್ಟಶಕ್ತಿಗಳನ್ನು ಸಾಕಷ್ಟು ಮಂದಿನ ಮಟ್ಟಹಾಕಿದ್ದೇನೆ ಎಂದರು.
ರೈತನೊಬ್ಬ ಹರೀಶಣ್ಣ ಎಂದು ಸಚಿವರ ಮುಂದೆ ಹೇಳಿದ್ದೇ ಅವರ ಕೋಪಕ್ಕೆ ಕಾರಣವಾಯಿತು. ಅವರ ಮನಸ್ಥಿತಿ ಹೇಗಿದೆ ಅಂದರೆ, ಅವರ ಅಪ್ಪ ಇದ್ದಾಗ ಶಂಕರಣ್ಣ ಅನ್ನಬೇಕು. ಇತನಿಗೆ ಮಲ್ಲಣ್ಣ ಅನ್ನಬೇಕು. ಬೇರೆಯಾರಿಗೂ ಅಣ್ಣಾ ಅನ್ನಬಾರದು" ಎಂದು ಸಚಿವರ ವಿರುದ್ಧ ಬಿಪಿ ಹರೀಶ್ ಕಿಡಿಕಾರಿದರು. ಅವರ ರೀತಿ ಬ್ಲಾಕ್ ಮಾರ್ಕೆಟ್ ಮಾಡಿದ ಕಳ್ಳನ ಮಕ್ಕಳಿಗೆ ಸಂಸ್ಕಾರ ಎಲ್ಲಿಂದ ಬರುತ್ತೆ. ಅವರ ತಂದೆ ಸ್ನೇಹಿತರ ಸಮಾಧಿ ಮಾಡಿ ಆಸ್ತಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



