ನೀವು ನಮಗೂ ಡಿಸಿಎಂ; ಬೆದರಿಸುವ ಕೆಲಸ ಮಾಡೋದು ಬೇಡ: ಡಿಕೆಶಿಗೆ ಶಾಸಕ ಜೀವರಾಜ್ ತಿರುಗೇಟು
ಸರ್ಕಾರದಿಂದ ತನಿಖೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ತನಿಖೆ ಚುನಾವಣಾ ಆಯೋಗ ಮಾಡಬೇಕು. ಡಿಕೆಶಿಯವರು ಬೆದರಿಸುವ ಕೆಲಸ ಮಾಡೋದು ಬೇಡ. ಅವರು ನಮಗೂ ಉಪಮುಖ್ಯಮಂತ್ರಿ ಎಂದು ಟಾಂಗ್ ಕೊಟ್ಟರು.

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಿರಿಯರು, ಕ್ರೈಮ್ ಆಗಿದೆ ಅಂತೆಲ್ಲ ಬೆದರಿಸಬಾರದು ಎಂದು ಶೃಂಗೇರಿ ಮರು ಎಣಿಕೆಯಲ್ಲಿ ಗೆದ್ದಿರುವ ಶಾಸಕ ಜೀವರಾಜ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದರ ಅವರು ಮತ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿದರು. ಸರ್ಕಾರದಿಂದ ತನಿಖೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ತನಿಖೆ ಚುನಾವಣಾ ಆಯೋಗ ಮಾಡಬೇಕು. ಡಿಕೆಶಿಯವರು ಬೆದರಿಸುವ ಕೆಲಸ ಮಾಡೋದು ಬೇಡ. ಅವರು ನಮಗೂ ಉಪಮುಖ್ಯಮಂತ್ರಿ ಎಂದು ಟಾಂಗ್ ಕೊಟ್ಟರು.
ಪೋಸ್ಟಲ್ ಬ್ಯಾಲೆಟ್‌ಗಳನ್ನು ಸೇಫಾಗಿ ಟ್ರಂಕ್‌ನಲ್ಲಿಟ್ಟಿರುತ್ತಾರೆ. ಡಿಕೆಶಿಯವರು ಯಾಕೆ ಈ ರೀತಿ ಮಾತಾಡ್ತಿದ್ದಾರೋ ಗೊತ್ತಿಲ್ಲ. 24 ಗಂಟೆ ಪೊಲೀಸ್ ಕಾವಲು ಹಾಕಿರುವ ಕಡೆ ನಾನು ಹೇಗೆ ಹೋಗಿ ಟ್ಯಾಂಪರಿಂಗ್ ಮಾಡಲು ಆಗುತ್ತದೆಯೇ? ಡಿಕೆಶಿಯವರು ಹಿರಿಯರು ಈಥರ ಮಾತಾಡಬಾರದು ಎಂದರು.
ಕಾಂಗ್ರೆಸ್‌ನವ್ರು ಮತ ಟ್ಯಾಂಪರಿಂಗ್ ಮಾಡಲಾಗಿದೆ ಅಂತ ಆರೋಪ ಮಾಡಿದ್ದಾರೆ. ದೂರು ಕೊಟ್ಟಿದ್ದಾರೆ, ಎಫ್ಐಆರ್ ಹಾಕಿದ್ದಾರೆ. 2023 ರಲ್ಲಿ ಶೃಂಗೇರಿ ಮತ ಎಣಿಕೆ ವಿಳಂಬ ಆಯ್ತು. ಕೊನೆಯಲ್ಲಿ ಪೋಸ್ಟಲ್ ಮತಗಳ ಎಣಿಕೆ ಮಾಡಿದ್ರು. ಕಾಂಗ್ರೆಸ್ ನವರು ಹಾಕಿರುವ ಎಫ್ಐಆರ್ ಕಾನೂನು ಬಾಹಿರ ಆಗಿದೆ ಎಂದು ಜೀವರಾಜ್ ತಿಳಿಸಿದ್ದಾರೆ.

Watch | ಜೀವರಾಜ್ ಗೆ ಎರಡು ವರ್ಷ ಅಧಿಕಾರ ಬಿಟ್ಟುಕೊಡಲಿ: ವಿಜಯೇಂದ್ರ; 'ಇದು ದೊಡ್ಡ ಸಂಚು': ಡಿ.ಕೆ ಶಿವಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


