ರಾಜಕಾರಣದಲ್ಲಿ ಒಬ್ಬರನ್ನು ಹಿಂದಿಕ್ಕಿಯೇ ಮತ್ತೊಬ್ಬರು ಮುಂದೆ ಬರೋದು; ಸ್ಪೀಡ್ ಯಾಕೆ ಕಡಿಮೆ ಆಯ್ತು ಎಂದು ಅವರನ್ನೆ ಕೇಳಿ: ಜಾರಕಿಹೊಳಿ ಪಂಚ್?
ನಾವು ಅವರಿಗೆ ಓಡಬೇಕು ಎಂದು ಹೇಳುತ್ತೇವೆ. ರಾಜಕೀಯ ಎಂದರೆ ಓಟ ಇದ್ದಂತೆ, ಇಲ್ಲದಿದ್ದರೆ ಕೆಲಸ ಆಗಲ್ಲ. ಯಾರು ಸ್ಪರ್ಧೆ ಮಾಡುತ್ತಾರೆ ಅವರು ಉಳಿತಾರೆ. ಇಲ್ಲದಿದ್ದರೆ ಜನ ಮರೆಯುತ್ತಾರೆ ಎಂದು ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ನುಡಿದರು.

ಬೆಳಗಾವಿ: ರಾಜಕೀಯವಾಗಿ ಒಬ್ಬರನ್ನು ಹಿಂದಿಕ್ಕಿಯೇ ಮತ್ತೊಬ್ಬರು ಮುಂದೆ ಬರೋದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೇ ಎನ್ನುವ ಚರ್ಚೆ ಕುರಿತು ಮಾತನಾಡಿದ ಅವರು, ರಾಜಕೀಯವಾಗಿ ಒಬ್ಬರನ್ನು ಹಿಂದಿಕ್ಕಿಯೇ ಮತ್ತೊಬ್ಬರು ಮುಂದೆ ಬರುವುದು ಎಂದು ಹೇಳಿದ್ದಾರೆ. ಮೂಲೆಗುಂಪು ಎಲ್ಲ ಪಕ್ಷಗಳಲ್ಲಿಯೂ ಇರುತ್ತದೆ. ಅದು ರಾಜಕೀಯ ಸಿದ್ದಾಂತದ ಭಾಗ. ಅಲ್ಲದೆ, ಒಬ್ಬರನ್ನು ಹಿಂದೆ ಹಾಕಿಯೇ ಇನ್ನೊಬ್ಬರು ಮುಂದೆ ಬರುವುದು. ನಾವು ಅಷ್ಟೇ ವೇಗದಲ್ಲಿಯೇ ಓಡಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ವೇಗ ಏಕೆ ಕಡಿಮೆ ಆಯಿತು ಎಂದು ಅವರನ್ನೆ ಕೇಳಿ. ನಾವು ಅವರಿಗೆ ಓಡಬೇಕು ಎಂದು ಹೇಳುತ್ತೇವೆ. ರಾಜಕೀಯ ಎಂದರೆ ಓಟ ಇದ್ದಂತೆ, ಇಲ್ಲದಿದ್ದರೆ ಕೆಲಸ ಆಗಲ್ಲ. ಯಾರು ಸ್ಪರ್ಧೆ ಮಾಡುತ್ತಾರೆ ಅವರು ಉಳಿತಾರೆ. ಇಲ್ಲದಿದ್ದರೆ ಜನ ಮರೆಯುತ್ತಾರೆ ಎಂದು ಸತೀಶ್ ಜಾರಕಿಹೊಳಿ ಮಾರ್ಮಿಕವಾಗಿ ನುಡಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಫೋಟೋ ಹಾಕಬೇಕು ಎಂದು ಅಧಿಕೃತವಾಗಿ ಏನಿಲ್ಲ. ಬಿಡಿಎಯಿಂದ ಮಾಡಿದ್ರೆ ಅವರೇ ಸ್ಪಷ್ಟನೆ ಕೊಡಬೇಕಲ್ಲ, ನಾವು ಹೇಳೋಕೆ ಆಗಲ್ಲ. ಸೈಡ್ ಲೈನ್ ಎಲ್ಲಾ ಪಕ್ಷದಲ್ಲೂ ಇರುತ್ತೆ, ಅದು ರಾಜಕೀಯ ಸಿದ್ದಾಂತ. ಒಬ್ಬರನ್ನ ಹಿಂದೆ ಹಾಕಿಯೇ ಇನ್ನೊಬ್ಬರು ಮುಂದೆ ಬರೋದು. ನಾವು ಕೂಡ ಅಷ್ಟೇ ಸ್ಪೀಡ್ ನಲ್ಲಿ ಓಡಬೇಕು ಎಂದರು.
ಓಡಿ ಟ್ರೈನ್ ಹತ್ತಿದ ಹಾಗೆ ರಾಜಕಾರಣದಲ್ಲಿ ನಾವು ಓಡಬೇಕು. ಮನೆಯಲ್ಲಿ ಕೂತರೆ ಟ್ರೈನ್ ಹತ್ತಿ ಹೋಗೋರು ಹೋಗ್ತಾರೆ. ನಾವು ಓಡಿ ಹೋಗಿ ಟ್ರೈನ್ ಹತ್ತಬೇಕು. ನಾನು ಬಹಳ ದೊಡ್ಡ ಲೀಡರ್ ಅಂದ್ರೆ ರಾಜಕೀಯ ಕೇಳಲ್ಲ, ಬದಲಾವಣೆ ಆಗುತ್ತಾ ಹೋಗುತ್ತೆ. ನಾನು 20 ವರ್ಷದಲ್ಲಿ ನೋಡಿರುವಂತಹ ಲೀಡರ್ ಗಳು ಈಗ ಯಾರು ಇಲ್ಲ. ಅವರು ಓಡಿ ಹೋಗಿ ಟ್ರೈನ್ ಹತ್ತಿದ್ರೆ, ಇನ್ನು ಇರ್ತಿದ್ರು ಎಂದರು.
ನಾನು ಲೀಡರ್ ಆಗಬೇಕು ಅನ್ನೋ ಛಲ ಎಲ್ಲರಿಗೂ ಇದ್ದೇ ಇರುತ್ತೆ . ಬೆಂಗಳೂರಿನಲ್ಲಿ ಟ್ರೈನ್ ಮಿಸ್ ಆದ್ರೆ ತುಮಕೂರಿನ ತನಕ ಗಾಡಿ ತೆಗೆದುಕೊಂಡು ಹೋಗಿ ಹತ್ತಬೇಕು. ಒಟ್ಟು ಟ್ರೈನ್ ಹತ್ತಿ ಹಿಡಿಯಲೇ ಬೇಕು, ಹಾಗೆ ರಾಜಕಾರಣ. ನಾವು ಎಷ್ಟು ಪ್ರಯತ್ನ ಮಾಡ್ತೀವಿ ಅಷ್ಟು ಪಕ್ಷ ಮತ್ತು ಜನ ನಮ್ಮ ಜೊತೆ ಇರ್ತಾರೆ. ಇದು ರಾಜಕೀಯ ವ್ಯವಸ್ಥೆ ಎಂದರು.
ಇದು ಬಿಜೆಪಿಯಲ್ಲೂ ಇದೆ ಜೆಡಿಎಸ್ ನಲ್ಲೂ ಇದೆ. ನಮ್ಮಲ್ಲೂ ಕೂಡ ಇದೇ ರೀತಿ ಇದೆ. ಸಿದ್ದರಾಮಯ್ಯನವರ ಸ್ಪೀಡ್ ಯಾಕೆ ಕಮ್ಮಿ ಆಯ್ತು ಅಂತ ಅವರನ್ನೇ ಕೇಳಿ. ನಾವು ಅವರಿಗೆ ಓಡಬೇಕು ಅಂತ ಹೇಳ್ತಿವಿ. ರಾಜಕೀಯ ಅಂದ್ರೆ ಓಡಬೇಕು ಓಡದಿದ್ರೆ ಕೆಲಸ ಆಗಲ್ಲ. ಯಾರು ಫೈಟ್ ಮಾಡ್ತಾರೆ ಅವರು ಉಳಿತಾರೆ. ಫೈಟ್ ಮಾಡ್ಲಿಲ್ಲ ಅಂದ್ರೆ ಜನ ಕೂಡ ಮರೆಯುತ್ತಾರೆ ಎಂದರು. ಒಬ್ಬೊಬ್ಬರಿಗೆ ಒಂದೊಂದು ಸ್ಟೈಲ್ ಇದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೊಂದು ಸ್ಟೈಲ್, ಯಡಿಯೂರಪ್ಪನವರಿಗೆ ಒಂದು ಸ್ಟೈಲ್ ಇದೆ. ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಒಂದು ಸ್ಟೈಲ್ ಇದೆ. ಒಬ್ಬೊಬ್ಬರಿಗೆ ಒಂದೊಂದು ಶೈಲಿ ಇದೆ ಎಂದರು.
ನಾವು ಫ್ರೆಂಟ್ ಲೈನ್‌ನಲ್ಲಿ ನಿಲ್ಲಲಿಲ್ಲ ಅಂದ್ರೆ ಜನ ಹೊಸ ನಾಯಕನ ಆಯ್ಕೆ ಮಾಡಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಸುಮಾರು 20 ವರ್ಷದಿಂದ ಇದ್ದಾರೆ. ಅವರಿಗೂ ಜವಾಬ್ದಾರಿ ಇದೆ ಮಾಡ್ತಾರೆ. ಅವರಿಗೆ ಅವರದ್ದೇ ಆದ ಶಕ್ತಿ ಇದೆ ಹಾಗೂ ಅಭಿಮಾನಿಗಳಿದ್ದಾರೆ. ಅವರು ಅವರದ್ದೇ ಸ್ಟೈಲ್ ನಲ್ಲಿ ರಾಜಕಾರಣ ಮಾಡ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



