ತೊಡೆ ತಟ್ಟೋದು, ಪ್ರಚೋದನೆ ಕೊಡೋದು ತಪ್ಪು; ಪ್ರದೀಪ್ ಈಶ್ವರ್ ವಿರುದ್ಧ ದಾಳಿ ಪ್ರಯತ್ನ ಸರಿಯಲ್ಲ: ಪ್ರಿಯಾಂಕ್ ಖರ್ಗೆ
ಜೆಡಿಎಸ್‌ನವರಿಗೆ ಅಸ್ತಿತ್ವದ ಪ್ರಶ್ನೆ ಇದೆ. ಅದಕ್ಕೇ ಹೀಗೆಲ್ಲ ನಮ್ಮ ಮೇಲೆ ಟೀಕೆ ಮಾಡುತ್ತಿದ್ದಾರೆ. ಇದು ಇಷ್ಟು ದಿನ ಇರಲಿಲ್ಲ. ಡಿಕೆಶಿ ಅವ್ರು ಸಿಎಂ ಆದ ನಂತರ ಹೀಗೆಲ್ಲ ಮಾಡ್ತಿದ್ದಾರೆ ಎಂದರು.

ಬೆಂಗಳೂರು: ತೊಡೆ ತಟ್ಟೋದು, ಪ್ರಚೋದನೆ ಮಾಡುವುದು ಆರೋಗ್ಯಕರ ಸಮಾಜದ ಬೆಳವಣಿಗೆಗೆ ಉತ್ತಮವಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಮೇಲೆ ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಅಸಮಾಧಾನ ಹೊರಹಾಕಿದ್ದಾರೆ.
ಜೆಡಿಎಸ್‌ನವರಿಗೆ ಅಸ್ತಿತ್ವದ ಪ್ರಶ್ನೆ ಇದೆ. ಅದಕ್ಕೇ ಹೀಗೆಲ್ಲ ನಮ್ಮ ಮೇಲೆ ಟೀಕೆ ಮಾಡುತ್ತಿದ್ದಾರೆ. ಇದು ಇಷ್ಟು ದಿನ ಇರಲಿಲ್ಲ. ಡಿಕೆಶಿ ಅವ್ರು ಸಿಎಂ ಆದ ನಂತರ ಹೀಗೆಲ್ಲ ಮಾಡ್ತಿದ್ದಾರೆ. ಚಪ್ಪಲಿಯಲ್ಲಿ ಒಬ್ಬ ಶಾಸಕನಿಗೆ ಹೊಡೆಯಲು ಹೋಗೋದು ತಪ್ಪು. ಯಾರೇ ಇರಲಿ ಪ್ರಚೋದನೆ ಕೊಡೋದು ತಪ್ಪೇ. ಎಲ್ಲರೂ ಕಾನೂನು ಇತಿಮಿತಿಯಲ್ಲಿ ಇರಬೇಕು. ತೊಡೆ ತಟ್ಟೋದು, ಪ್ರಚೋದನೆ ಕೊಡೋದು ತಪ್ಪು. ಪ್ರದೀಪ್ ಈಶ್ವರ್ ವಿರುದ್ಧ ಜನರನ್ನು ಬಿಟ್ಟು ದಾಳಿ ಮಾಡಿಸೋ ಪ್ರಯತ್ನ ಸರಿಯಲ್ಲ ಎಂದರು.
ಬಿಜೆಪಿ ಅಡ್ಡ ಮತ ಪ್ರಕರಣದ ವರದಿ ಸಲ್ಲಿಕೆ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ ಅಡ್ಡಮತ ಆಗಿದೆ. ನಿರ್ಲಕ್ಷ್ಯದಿಂದ ಅಡ್ಡ ಮತ ಆಗಿದೆ ಅಂತ ಅವರ ವರದಿಯಲ್ಲಿ ಹೇಳಿದ್ದಾರೆ. ಯಾರ ನಿರ್ಲಕ್ಷ್ಯ? ಅವರ ಪಕ್ಷದ ನಾಯಕರ ನಿರ್ಲಕ್ಷ್ಯ ತಾನೇ? ಜವಾಬ್ದಾರಿ ತಗೊಂಡು ರಾಜೀನಾಮೆ ಕೊಡಲಿ ಬಿಜೆಪಿ ನಾಯಕರು ಎಂದರು.
ಗ್ಯಾರಂಟಿ ಗಿವ್ ಇಟ್ ಅಪ್ ಅಭಿಯಾನ ಬಗ್ಗೆ ಕೇಳಿದಾಗ, ಹಾಗೇನೂ ಮಾಡ್ತಿಲ್ಲ ನಾವು. ಸರ್ಕಾರಿ ನೌಕರರು ಗ್ಯಾರಂಟಿ ತಗೋತಿದ್ದಾರೆ, ಅದು ಸರಿಯಲ್ಲ. ಸರ್ಕಾರಿ ನೌಕರರು ಗ್ಯಾರಂಟಿ ಪಡೆಯೋದು ಬಿಡಲಿ. ಸಂಪುಟ ವಿಸ್ತರಣೆ ವಿಳಂಬ ಆಗ್ತಿಲ್ಲ. ದೆಹಲಿಯಲ್ಲಿ ಚರ್ಚೆ ನಡೀತಿದೆ. ಎಷ್ಟೊಂದು ಶಾಸಕರು ಸಮರ್ಥರಿದ್ದಾರೆ ನಮ್ಮಲ್ಲಿ? ಹೊಸಬರು, ಹಳಬರು ಎಲ್ಲರೂ ಸಚಿವ ಸ್ಥಾನ ಕೇಳ್ತಿದ್ದಾರೆ. ಸಾಧಕ-ಬಾಧಕ ನೋಡಿಕೊಂಡು ವಿಸ್ತರಣೆ ಮಾಡ್ತಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಜನ ತಮ್ಮ ಹೃದಯದಿಂದ ಕೆಳಗಿಳಿಸಲು ಆಗಲ್ಲ. ಒಳ್ಳೆಯ ಆಡಳಿತ ಕೊಟ್ಟಿದ್ದಾರೆ ಅವರು. ಸಿದ್ದರಾಮಯ್ಯ ಅವರ ಆಶೀರ್ವಾದ ಸರ್ಕಾರಕ್ಕೆ ಇದೆ. ಸಿದ್ದರಾಮಯ್ಯ ಸಾಹೇಬರಿಗೆ ಈ ಪೋಸ್ಟ್ ಬಗ್ಗೆ ಗೊತ್ತಿರಲ್ಲ. ಆ ಪೋಸ್ಟ್ ಸಿದ್ದರಾಮಯ್ಯ ಹೆಸರಲ್ಲಿ ಯಾರು ಹಾಕ್ತಾರೆ ಎಂದು ಗೊತ್ತಿರಲ್ವಾ ಭಾಷಣದಲ್ಲಿ ಸಿದ್ದರಾಮಯ್ಯನವರು ಹೀಗೆ ಹೇಳಿದ್ರಾ ಭಾಷಣದಲ್ಲಿ ಅವ್ರು ಹೇಳಿದ್ರೆ ನೋಡಬಹುದಿತ್ತು, ಅವ್ರು ಭಾಷಣದಲ್ಲಿ ಹಾಗೆ ಹೇಳಿಲ್ಲ ಎಂದು ಸಿದ್ದರಾಮಯ್ಯನವರ ಫೇಸ್ ಬುಕ್ ಪೋಸ್ಟ್ ಬಗ್ಗೆ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



