ಪರಿಷತ್ ಚುನಾವಣೆಯಲ್ಲಿ ಗೆಲ್ಲಲು ದೆಹಲಿ ಬಿಜೆಪಿ ಮಾದರಿ ಅಳವಡಿಸಿಕೊಂಡಿರುವ ಡಿಕೆಶಿ: ಸತೀಶ್ ಜಾರಕಿಹೊಳಿ
ಚುನಾವಣೆಯಲ್ಲಿ ಕುದುರೆ ವ್ಯಾಪಾರ ಅಂತ ಹೇಳೋಕೆ ಸ್ಪಷ್ಟತೆ ಇಲ್ಲ. ಆದರೆ ಅವರು ಮತ ಹಾಕಿರೋದು ನಿಜ . ಸ್ನೇಹದ ಕಾರಣಕ್ಕಾಗಿ ಹಾಕಿರಬಹುದು ಅವರವರ ಬಾಂಧವ್ಯದ ಕಾರಣಕ್ಕಾಗಿ ಹಾಕಿರಬಹುದು. ಮೂರ್ನಾಲ್ಕು ಕಾರಣಗಳಿಂದ ಮತ ಹಾಕಿರುತ್ತಾರೆ .

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರ ದೆಹಲಿ ಮಾದರಿಯನ್ನೇ ಅಳವಡಿಕೆ ಮಾಡಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ವ್ಯಾಖ್ಯಾನಿಸಿದ್ದಾರೆ.
ದೆಹಲಿಯಲ್ಲಿ ಏನು ನಡೆಯುತ್ತಿದೆಯೋ ಅದೇ ಕರ್ನಾಟಕದಲ್ಲಿ ನಡೆಯುತ್ತಿದೆ. ದೆಹಲಿಯಲ್ಲಿ ಈಗಾಗಲೇ ಇದು ಪೀಕ್ಗೆ ಹೋಗಿದೆ, ಅದನ್ನೇ ಕರ್ನಾಟಕದಲ್ಲಿ ಮಾಡಲಾಗಿದೆ. ಬಿಜೆಪಿಯ ಮಾಡೆಲ್ ಅನ್ನು ನಮ್ಮ ಸಿಎಂ ಡಿಕೆ ಶಿವಕುಮಾರ್ ಅಳವಡಿಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮೊದಲ ಬಾರಿ ಬಿಜೆಪಿ ಮಾಡೆಲ್ನ್ನ ಅಳವಡಿಕೆ ಮಾಡಿದೆ ಎಂದರು.
ಚುನಾವಣೆಯಲ್ಲಿ ಕುದುರೆ ವ್ಯಾಪಾರ ಅಂತ ಹೇಳೋಕೆ ಸ್ಪಷ್ಟತೆ ಇಲ್ಲ. ಆದರೆ ಅವರು ಮತ ಹಾಕಿರೋದು ನಿಜ . ಸ್ನೇಹದ ಕಾರಣಕ್ಕಾಗಿ ಹಾಕಿರಬಹುದು ಅವರವರ ಬಾಂಧವ್ಯದ ಕಾರಣಕ್ಕಾಗಿ ಹಾಕಿರಬಹುದು. ಮೂರ್ನಾಲ್ಕು ಕಾರಣಗಳಿಂದ ಮತ ಹಾಕಿರುತ್ತಾರೆ .
ಬಿಜೆಪಿಯಿಂದ ಮತ ಹಾಕಿರೋದು ಅಲ್ಲಿನ ನಾಯಕತ್ವ, ವೈಮನಸ್ಸಿನ ವಿಚಾರಕ್ಕೆ. ಆ ಕಾರಣದಿಂದ ಮತ ಹಾಕಿದ್ದಾರೆ ಎಂದರು.
ಜೆಡಿಎಸ್ ನಿಂದಲೂ ನಾಲ್ಕು ಬಂದಿದೆ, ಕಾಂಗ್ರೆಸ್ ಬಿಜೆಪಿಯಿಂದಲೂ ಏಳು ಬಂದಿರಬಹುದು. ಎಲ್ಲಾ ಸ್ವಲ್ಪ ದಿನದ ಬಳಿಕ ಬಹಿರಂಗ ಆಗುತ್ತೆ. ಯಾಕೆ ಹಾಕಿದ್ರು ಏನಕ್ಕೆ ಹಾಕಿದ್ರು ಎಲ್ಲವೂ ಗೊತ್ತಾಗುತ್ತೆ ಎಂದು ತಿಳಿಸಿದರು. ನಮ್ಮ ಅಭ್ಯರ್ಥಿಗಳಿಗೆ ಇಷ್ಟು ಮತಗಳು ಬರಲಿವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಾಲ್ಕೈದು ಮತಗಳು ಬರ್ತಾವೆ ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಬಂದಿರುವುದು ಆತ್ಮಸಾಕ್ಷಿಯ ಮತಗಳು. ಅವರು ಬಿಜೆಪಿಗೆ ಬಂದ್ರೆ ಅವಕಾಶ ಕಲ್ಪಿಸಬಹುದು. ಅವಕಾಶ ಬಂದಾಗ ಪಕ್ಷ ಸಿದ್ದಾಂತ ಒಪ್ಪಿ ಬಂದ್ರೆ ಸರಿ. ಆದರೆ ಇದು ಕುದುರೆ ವ್ಯಾಪಾರ ಅಲ್ಲ ತಂತ್ರಗಾರಿಕೆ ಎಂದರು.
ದೆಹಲಿ ಮಾಡಲ್ ಕರ್ನಾಟಕದಲ್ಲಿ ಅನುಷ್ಠಾನ ಆಗಿದೆ. ಬಿಜೆಪಿಯಲ್ಲಿ ನಾಯಕತ್ವ ಗೊಂದಲವಿದೆ. ಮೊದಲಿನಿಂದ ಗೊಂದಲವಿದೆ. ಪಿವಿ ಮೋಹನ್ಗೆ 29 ಮತಗಳೇ ಅಲಾಟ್ ಮಾಡಲಾಗಿತ್ತು. ನಮ್ಮಲ್ಲಿ ಯಾವುದೇ ಮತಗಳು ಬೇರೆ ಕಡೆ ಹೋಗಿಲ್ಲ. ಹೋಗಿದ್ರು ಕೂಡ ನಮ್ಮಲ್ಲೇ ಇದೆ ಹೊರಗಡೆಗೆ ಹೋಗಿಲ್ಲ. ಈ ಬೆಳವಣಿಗೆ ಕಾಂಗ್ರೆಸ್ ಮುಂದೆ ಹೋಗಲು ಒಂದು ಅವಕಾಶ ಸಿಕ್ಕ ಹಾಗೆ ಆಗಿದೆ ಎಂದರು.
ಕಾಂಗ್ರೆಸ್ ಶಾಸಕರೊಬ್ಬರ ಅಡ್ಡ ಮತದಾನ ಅಥವಾ ಕಾಂಗ್ರೆಸ್ ಅಭ್ಯರ್ಥಿ ಪಿ.ವಿ. ಮೋಹನ್ ಅವರಿಗೆ ತಪ್ಪಾಗಿ ಮತ ಹಂಚಿಕೆ ಮಾಡಿರುವ ಬಗ್ಗೆ ವರದಿಗಳ ಕುರಿತು ಅವರು, "ನಮ್ಮ ಕಡೆಯಿಂದ ಏನೂ ಹೊರಬಿದ್ದಿಲ್ಲ; ಏನಾದರೂ ಸಂಭವಿಸಿದರೂ, ಅದು (ಪಕ್ಷದ) ಹೊರಗೆ ಹೋಗಿಲ್ಲ" ಎಂದು ಹೇಳಿದರು.
ಗಮನಾರ್ಹವಾಗಿ, ಮೋಹನ್ ಅವರಿಗೆ 30 ಕಾಂಗ್ರೆಸ್ ಶಾಸಕರ ಮತಗಳನ್ನು ಹಂಚಿಕೆ ಮಾಡಲಾಯಿತು ಆದರೆ 29 ಮತಗಳನ್ನು ಪಡೆದು ಗೆದ್ದರು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



