ರಾಜಕೀಯ

'ಸೌಜನ್ಯಕ್ಕಾದರೂ ಬಿಜೆಪಿಯವ್ರು ಕರೆ ಮಾಡಿಲ್ಲ, ಅವರ ಉದ್ದೇಶ ಜೆಡಿಎಸ್ ಸೋಲಿಸೋದು': ಹೆಬ್ಬಾರ್-ಸೋಮಶೇಖರ್; ಹೆಚ್ಚುವರಿ ವೋಟ್ JDS ಗೆ ಹಾಕಿದ್ದೇವೆ ಎಂದ ಅಶೋಕ್

ನಮ್ಮ ಎಲ್ಲಾ ಶಾಸಕರು ಮತ ಚಲಾಯಿಸಿದ್ದು ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಹಾಕಿದ್ದೇವೆ ಎಂದು ಅಶೋಕ್ ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಏಳನೇ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ.

'ಸೌಜನ್ಯಕ್ಕಾದರೂ ಬಿಜೆಪಿಯವ್ರು ಕರೆ ಮಾಡಿಲ್ಲ, ಅವರ ಉದ್ದೇಶ ಜೆಡಿಎಸ್ ಸೋಲಿಸೋದು': ಹೆಬ್ಬಾರ್-ಸೋಮಶೇಖರ್; ಹೆಚ್ಚುವರಿ ವೋಟ್ JDS ಗೆ ಹಾಕಿದ್ದೇವೆ ಎಂದ ಅಶೋಕ್
ಮತ ಚಲಾಯಿಸಿದ ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್
Published On :

ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಇಂದು ಮೇಲ್ಮನೆ ಚುನಾವಣೆ ಕಣ ರಂಗೇರಿದೆ. ವಿಧಾನಸೌಧ ಕಾರಿಡಾರಿನಲ್ಲಿ ಇಂದು ಉಚ್ಛಾಟಿತ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ಕಾಣಿಸಿಕೊಂಡರು.

ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಇಂದು ವಿಧಾನ ಸೌಧದಲ್ಲಿ ಮತನಾದನ ಮುಂದುವರಿದಿದೆ. ವಿಧಾನಸಭೆ ಸದಸ್ಯರು ಮೇಲ್ಮನೆ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಇದಾಗಿದ್ದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಎಲ್ಲಾ ಸದಸ್ಯರು ಮತ ಚಲಾಯಿಸಿದರು.

ನಮ್ಮ ಎಲ್ಲಾ ಶಾಸಕರು ಮತ ಚಲಾಯಿಸಿದ್ದು ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಹಾಕಿದ್ದೇವೆ ಎಂದು ಅಶೋಕ್ ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಏಳನೇ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ.

ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವರಾಂ ಹೆಬ್ಬಾರ್, ಕನಿಷ್ಠ ಪಕ್ಷ ಒಂದು ಮಾತಾದರೂ ಬಿಜೆಪಿ ಕೇಳಬೇಕಿತ್ತಲ್ಲ. ಅವರು ಕೇಳದೆ ನಾವು ಏನು ಮಾಡಬೇಕು. ಮತದಾನ ಗೌಪ್ಯವಾಗಿದ್ದು, ನಮ್ಮ ಆತ್ಮಸಾಕ್ಷಿಗೆ ಮತ ಹಾಕುತ್ತೇನೆ ಎಂದು ಶಿವರಾಂ ಹೆಬ್ಬಾರ್ ಹೇಳಿದರು. ಇನ್ನು ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್, ನಮಗೆ ಡಿಕೆ ಶಿವಕುಮಾರ್ ಅವರು ಕರೆ ಮಾಡಿದ್ದರು. ಬಿಡದಿಗೆ ನಾನು ಮತ್ತು ಶಿವರಾಂ ಹೆಬ್ಬಾರ್ ಹೋಗಿದ್ವಿ. ಬಿಜೆಪಿಯವರು ನಮಗೆ ಮತ ಕೇಳಿಲ್ಲ. ನಮಗೆ ಸ್ವಾಭಿಮಾನವಿದ್ದು, ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ ಎಂದರು.

ಬಿಜೆಪಿ ಇಷ್ಟು ವರ್ಷಗಳ ಬಳಿಕವೂ ಬುದ್ದಿ ಕಲಿತಿಲ್ಲ. ಹೀಗಾಗಿ ನಮಗೆ ಸ್ವಾಭಿಮಾನ ಇದೆಯಲ್ಲ. ಬಿಜೆಪಿಗೆ ಜೆಡಿಎಸ್ ಗೆಲ್ಲೋದು ಬೇಕಿಲ್ಲ. ಜೆಡಿಎಸ್-ಬಿಜೆಪಿ ಮುಂದೇನಾಗುತ್ತೆ ಎಂದು ಕಾದು ನೋಡಿ ಎಂದರು.

ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು

ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ಬಿ.ಎಸ್‌.ಶಿವಣ್ಣ, ವಿನಯ್‌ ಕಾರ್ತಿಕ್ ಪ್ರಕಾಶ್‌. ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್‌ ಪಾಟೀಲ್‌. ಜೆಡಿಎಸ್‌ನಿಂದ ಗೋವಿಂದರಾಜು ಇಂದಿನ ಚುನಾವಣಾ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.