'ದುರಹಂಕಾರದ ಪರಮಾವಧಿ, ನೀವೇನು ಶಬರಿಯಲ್ಲ': ಕಚ್ಚಿ ತಿಂದ ಸೇಬು ಜನರತ್ತ ಎಸೆದ ಸಿಎಂ ಡಿಕೆಶಿ ವಿರುದ್ಧ BJP ಕೆಂಡ
ಯಾರಾದರೂ ಬೇರೆಯವರು ಕಚ್ಚಿದ ಸೇಬನ್ನು ನೀವು ತಿನ್ನುತ್ತೀರಾ?. ನೀವು ಶಬರಿಯಲ್ಲ. ನಿಮ್ಮನ್ನು ಕರ್ನಾಟಕದ ಜನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರ ಕನಕಪುರದ ಹಾರೋಹಳ್ಳಿಯಲ್ಲಿ ನಡೆದ ರ್‍ಯಾಲಿಯಲ್ಲಿ ಸೇಬು ಹಣ್ಣನ್ನು ಕಚ್ಚಿ ತಿಂದು, ಉಳಿದ ಹಣ್ಣನ್ನು ಕಾರ್ಯಕರ್ತರತ್ತ ಎಸೆದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
'ಮಿಸ್ಟರ್ ಸಿಎಂ ಡಿಕೆ ಶಿವಕುಮಾರ್ ಅವರೇ ನೀವೇನು ರಾಜನಾಗಿದ್ದೀರಾ?, ಯಾರಾದರೂ ಬೇರೆಯವರು ಕಚ್ಚಿದ ಸೇಬನ್ನು ನೀವು ತಿನ್ನುತ್ತೀರಾ?. ನೀವು ಶಬರಿಯಲ್ಲ. ನಿಮ್ಮನ್ನು ಕರ್ನಾಟಕದ ಜನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಶಬರಿ ತನ್ನ ರಾಮನಿಗೆ ಭಕ್ತಿಯಿಂದ ಕಚ್ಚಿದ ಹಣ್ಣನ್ನು ನೀಡುತ್ತಾಳೆ. ಆದರೆ ಡಿಕೆ ಶಿವಕುಮಾರ್ ಅವರೇ ನೀವು ಮಾಡುತ್ತಿರುವುದು ರಾಜ ಮಹಾರಾಜರ ತರಹದ ನಡವಳಿಕೆ. ಇದು ದುರಹಂಕಾರದ ಪರಮಾವಧಿ ಎಂದು ಬಿಜೆಪಿ ಕೆಂಡಕಾರಿದೆ.
ಶಬರಿಯು ಹಣ್ಣು ಹುಳಿಯಿದೆಯೇ ಎಂದು ಪರಿಶೀಲಿಸಿ ರಾಮನಿಗೆ ಹಣ್ಣು ಕಚ್ಚಿ ಕೊಟ್ಟಂತೆ ಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಬೆಂಬಲಿಗರು ತಮಗಾಗಿ ಮಾಡಿಸಿ ತಂದಿದ್ದ ಹಣ್ಣಿನ ಹಾರದಿಂದ ಸೇಬನ್ನು ಕಿತ್ತು ಕಚ್ಚಿ ರ್‍ಯಾಲಿಯಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಬೆಂಬಲಿಗರತ್ತ ಎಸೆದ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇಷ್ಟೇ ಅಲ್ಲದೆ, ಈ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



