ಕಟ್ಟಾ ಕಾಂಗ್ರೆಸ್ಸಿಗರೆಲ್ಲರೂ ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ: ಮಹಾದೇವಪ್ಪಗೆ ಡಿ.ಕೆ ಸುರೇಶ್ ತಿರುಗೇಟು!
ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ, ಯಜಮಾನನಿಗೆ ಋಣ ತೀರಿಸುತ್ತೆ, ನಮ್ಮನ್ನ ಕಾಪಾಡುತ್ತೆ ಎಂಬ ವಿಶ್ವಾಸದಲ್ಲಿ ಮಾಲೀಕ ನಾಯಿಗೆ ಊಟ ಹಾಕುತ್ತಾರೆ ಎಂದಿದ್ದಾರೆ.

ಬೆಂಗಳೂರು: ಕಟ್ಟಾ ಕಾಂಗ್ರೆಸ್ಸಿಗರೆಲ್ಲರೂ ನಿಯತ್ತಿನ ನಾಯಿಗಳೇ ಹೊರತು ಬೀದಿ ನಾಯಿಗಳಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಸಚಿವ ಎಚ್.ಸಿ ಮಹಾದೇವಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಸುರೇಶ್, ಬೀದಿ ನಾಯಿಗಳನ್ನು ಯಾರಿಗೆ ಹೋಲಿಸಿದ್ದಾರೋ ಗೊತ್ತಿಲ್ಲ, ಬೀದಿ ನಾಯಿಯೇ ಆಗಲಿ, ಸಾಕು ನಾಯಿಯೇ ಆಗಲಿ, ನಿಯತ್ತಾಗಿರುತ್ತದೆ. ಅದು ಮಾಲೀಕನ ಋಣ ತೀರಿಸುತ್ತದೆ. ನಿಯತ್ತಿಗೆ ನಾಯಿಯೇ ಪ್ರಸಿದ್ಧಿ.
ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ, ಯಜಮಾನನಿಗೆ ಋಣ ತೀರಿಸುತ್ತೆ, ನಮ್ಮನ್ನ ಕಾಪಾಡುತ್ತೆ ಎಂಬ ವಿಶ್ವಾಸದಲ್ಲಿ ಮಾಲೀಕ ನಾಯಿಗೆ ಊಟ ಹಾಕುತ್ತಾರೆ ಎಂದಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಶಿವಗಂಗಾ ಬಸವರಾಜ್, ಶಾಸಕರನ್ನು ಬೀದಿ ನಾಯಿಗೆ ಹೋಲಿಸಿದ್ದಾರೆ, ಆದರೆ ಅವರು ಕೂಡ ಶಾಸಕರಲ್ಲವೇ, ಹಾಗಿದ್ದರೇ ಅವರು ಕೂಡ..... ಅದೇ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಹಿರಿಯರಾದ ಅವರ ಬಾಯಲ್ಲಿ ಇಂತ ಪದಗಳು ಬರಬಾರದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



