ರಾಜಕೀಯ

ಪವರ್​ಫುಲ್ ಮ್ಯಾನ್ ಯತೀಂದ್ರ ನಮ್ಮ ಹೈಕಮಾಂಡ್ -ಗಣಿಗ ರವಿ: ಖರ್ಗೆ ಒಗ್ಗಟ್ಟಿನ ಪಾಠಕ್ಕೂ ಡೋಂಟ್ ಕೇರ್; ಕಾಂಗ್ರೆಸ್ ಬಣ ಬಡಿದಾಟ ಹೆಚ್ಚಳ!

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಡಿ.ಕೆ.ಶಿವಕುಮಾರ್​ಗೆ ರಾಜಕೀಯ ತಂತ್ರಗಾರಿಕೆ, ‌ಚಾಣಾಕ್ಷತನ ಇದೆ. ಯಾವಾಗ ಯಾವ ಪಾನ್ ಮೂವ್​ ಮಾಡಿದ್ರೆ ಗೇಮ್ ಗೆಲ್ಲಬಹುದೆಂದು ಗೊತ್ತಿದೆ.

ಪವರ್​ಫುಲ್ ಮ್ಯಾನ್ ಯತೀಂದ್ರ ನಮ್ಮ ಹೈಕಮಾಂಡ್ -ಗಣಿಗ ರವಿ: ಖರ್ಗೆ ಒಗ್ಗಟ್ಟಿನ ಪಾಠಕ್ಕೂ ಡೋಂಟ್ ಕೇರ್; ಕಾಂಗ್ರೆಸ್ ಬಣ ಬಡಿದಾಟ ಹೆಚ್ಚಳ!
ಯತೀಂದ್ರ, ರವಿ ಗಣಿಗ ಮತ್ತು ಮಲ್ಲಿಕಾರ್ಜು ಖರ್ಗೆ
Published On :

ಮಂಡ್ಯ: ​ನಾಯಕತ್ವ ವಿಚಾರವಾಗಿ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಹೈಕಮಾಂಡ್​​ ಸೂಚನೆಯ ಬಳಿಕವೂ ರಾಜ್ಯ ಕಾಂಗ್ರೆಸ್​​ನಲ್ಲಿ ಬಣಗಳ ನಡುವಿನ ಸಂಘರ್ಷ ಮುಂದುವರಿದಿದೆ.

ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಎಂದಿದ್ದಾರೆ. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು, ಆದ್ರೆ ಹೈಕಮಾಂಡ್​ಗೆ‌ ನಾವು ನೋಟಿಸ್ ಕೊಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ನಮ್ಮ ಹೈಕಮಾಂಡ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರೇ ಹೇಳಿದ್ದಾರೆ. ಹೀಗಾಗಿ ನಾನೂ ಅದನ್ನೇ ಹೇಳುತ್ತೇನೆ, ಯತೀಂದ್ರ ನಮ್ಮ ಹೈಕಮಾಂಡ್ ಅನ್ನೋದನ್ನ ನೂರಕ್ಕೆ ನೂರರಷ್ಟು ಒಪ್ಪಿಕೊಳ್ತೇವೆ. ಯಾರೂ ಸ್ಟೇಟ್​ಮೆಂಟ್ ಕೊಡಬೇಡಿ ಎಂದು ನಾಲ್ಕು ಬಾರಿ ಹೇಳಿದ್ರು.

ಆದ್ರೂ ಸ್ಟೇಟ್​ಮೆಂಟ್ ಕೊಡ್ತಿದ್ದಾರೆ ಅಂದ್ರೆ‌ ಅವರೇ ಸುಪ್ರೀಂ. ಖರ್ಗೆಗಿಂತ ಜಾಸ್ತಿನಾ, ಡಿಕೆಗಿಂತ ಕಡಿಮೆನಾ ಎಂದು ಹೇಳಲು ಆಗಲ್ಲ. ಬೇಡ ಅಂದ್ರೂ ಮಾತನಾಡುತ್ತಿದ್ದಾರೆ ಅಂದ್ರೆ ಪವರ್​ಫುಲ್ ಮ್ಯಾನ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯತೀಂದ್ರ ವಿರುದ್ಧ ಗಣಿಗ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಡಿ.ಕೆ.ಶಿವಕುಮಾರ್​ಗೆ ರಾಜಕೀಯ ತಂತ್ರಗಾರಿಕೆ, ‌ಚಾಣಾಕ್ಷತನ ಇದೆ. ಯಾವಾಗ ಯಾವ ಪಾನ್ ಮೂವ್​ ಮಾಡಿದ್ರೆ ಗೇಮ್ ಗೆಲ್ಲಬಹುದೆಂದು ಗೊತ್ತಿದೆ. ಬುದ್ಧಿವಂತಿಕೆ ಇರುವುದಕ್ಕೆ ಸೈಲೆಂಟಾಗಿ ಕಾಯಿನ್ ಮೂವ್ ಮಾಡ್ತಿದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು, ಆಟ ಬಿಡಲು ಆಗಲ್ಲ. ನಮ್ಮದು ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠ ಭಾರತ ಟೀಂ. ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಡಿ.ಕೆ.ಶಿವಕುಮಾರ್​ಗೆ ಇದ್ದು, ಪ್ರಶ್ನೆಗಳಿಗೆ ಅತೀ ಶೀಘ್ರದಲ್ಲೇ ಉತ್ತರ ಬರಲಿದೆ ಎಂದಿದ್ದಾರೆ.

ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ನಾವೆಲ್ಲಾ ಜೊತೆಯಾಗಿ, ಒಗ್ಗಟ್ಟಾಗಿ ಹೋಗಬೇಕು ಎಂದು ಪಾಠ ಮಾಡಿದ್ದರು. ಭೀಮಣ್ಣ ಖಂಡ್ರೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿದ್ದರು. ಆದ್ರೆ ಪಕ್ಷ ಬಿಟ್ಟು ಹೋದ್ರು ಅವರ ತತ್ವ, ಸಿದ್ಧಾಂತ ಒಂದೇಯಾಗಿತ್ತು.

ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬಸವಣ್ಣನ ವಚನ ಹೇಳುವ ಮೂಲಕ ಸಂದೇಶ ನೀಡಿದ್ದರು. ಆದ್ರೆ ಸದ್ಯ ರಾಜ್ಯ ಕಾಂಗ್ರೆಸ್​​ ನಾಯಕರು ಹೈಕಮಾಂಡ್​​ ಸೂಚನೆಯನ್ನೂ ಮೀರಿ ಮಾತಾಡುತ್ತಿರೋದು ಬಣ ಬಡಿದಾಟವನ್ನು ಇಮ್ಮಡಿಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.