JDS ನಲ್ಲಿ ಇನ್ನು 10 ಬಾರಿ ಗೆದ್ದು ಬಂದಿದ್ದರೂ ನಾನು ಮಂತ್ರಿ ಆಗ್ತಿರ್ಲಿಲ್ಲ: ಕೆ.ಎಂ ಶಿವಲಿಂಗೇಗೌಡ
ನಿಮ್ಮ ಋಣವನ್ನು ಯಾವ ರೀತಿ ತೀರಿಸಬೇಕೋ ತಿಳಿಯುತ್ತಿಲ್ಲ. ನಿಮ್ಮ ಅಭಿಮಾನ, ಪ್ರೀತಿಗೆ ಮೂಕನಾಗಿದ್ದೇನೆ. ನೀವು ನೀಡಿರುವ ಸ್ವಾಗತ ನನಗೆ ಹೆಮ್ಮೆ ಎನಿಸುತ್ತಿದೆ ಎಂದರು.

ಅರಸೀಕೆರೆ: ಜೆಡಿಎಸ್ ಪಕ್ಷದಲ್ಲಿ ಇನ್ನು 10 ವರ್ಷ ಇದ್ದಿದ್ದರೂ ನಾನು ಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ನೂತನ ಸಚಿವ ಕೆಎಂ ಶಿವಲಿಂಗೇಗೌಡ ಹೇಳಿದ್ದಾರೆ.
ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ಅಭಿಮಾನಿಗಳಿಂದ ಸ್ವಾಗತ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸತತ ನಾಲ್ಕು ಬಾರಿ ಗೆಲುವು ನೀಡಿದ ಆರಸೀಕೆರೆ ತಾಲ್ಲೂಕಿನ ಜನತೆಯ ಆಶೀರ್ವಾದ ಹಾಗೂ ಹೋರಾಟದ ಫಲವಾಗಿ ಇಂದು ಸಚಿವ ಸ್ಥಾನ ದೊರೆತಿದೆ.
ನಿಮ್ಮ ಋಣವನ್ನು ಯಾವ ರೀತಿ ತೀರಿಸಬೇಕೋ ತಿಳಿಯುತ್ತಿಲ್ಲ. ನಿಮ್ಮ ಅಭಿಮಾನ, ಪ್ರೀತಿಗೆ ಮೂಕನಾಗಿದ್ದೇನೆ. ನೀವು ನೀಡಿರುವ ಸ್ವಾಗತ ನನಗೆ ಹೆಮ್ಮೆ ಎನಿಸುತ್ತಿದೆ ಎಂದರು.
80 ವರ್ಷಗಳಿಂದ ರಾಜ್ಯದಲ್ಲೇ ಆರಸೀಕೆರೆ ಕ್ಷೇತ್ರ ರಾಜಕೀಯವಾಗಿ ಹಿಂದುಳಿದಿತ್ತು. ಇಂದು ನಿಮ್ಮ ಆಶೀರ್ವಾದದಿಂದ ಸಚಿವ ಸ್ಥಾನ ದೊರೆತದಿದ್ದು, ಅರಸೀಕೆರೆ ಸರ್ವತೋಮುಖ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ. ರಾಜ್ಯದಲ್ಲೇ ಆರಸೀಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಸತತ ನಾಲ್ಕು ಬಾರಿ ಗೆಲುವು ನೀಡಿದ ಆರಸೀಕೆರೆ ತಾಲ್ಲೂಕಿನ ಜನತೆಯ ಆಶೀರ್ವಾದ ಹಾಗೂ ಹೋರಾಟದ ಫಲವಾಗಿ ಇಂದು ಸಚಿವ ಸ್ಥಾನ ದೊರೆತಿದೆ. ನಿಮ್ಮ ಋಣವನ್ನು ಯಾವ ರೀತಿ ತೀರಿಸಬೇಕೋ ತಿಳಿಯುತ್ತಿಲ್ಲ.
ನಿಮ್ಮ ಅಭಿಮಾನ, ಪ್ರೀತಿಗೆ ಮೂಕನಾಗಿದ್ದೇನೆ. ನೀವು ನೀಡಿರುವ ಸ್ವಾಗತ ನನಗೆ ಹೆಮ್ಮೆ ಎನಿಸುತ್ತಿದೆ ಎಂದರು. ಅರಸೀಕೆರೆ ಇತಿಹಾಸದಲ್ಲಿ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಕೊರಗಿತ್ತು. ಅದನ್ನು ದೂರ ಮಾಡಲು ಹಾಗೂ ಅರಸೀಕೆರೆ ಸರ್ವತೋಮುಖ ಅಭಿವೃದ್ಧಿಗಾಗಿ ಜೆಡಿಎಸ್‌ನಲ್ಲಿ ಸತತ ಗೆಲುವು ಸಾಧಿಸಿದರೂ ಇವೆಲ್ಲ ಸಾಧ್ಯವಿಲ್ಲ ಎಂದು ಮನಗಂಡು ಪಕ್ಷ ಬದಲಾವಣೆ ಅನಿರ್ವಾಯವಾಯಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



