ರಾಜಕೀಯ

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಧಿಕೃತ ಪಟ್ಟಿಗೆ ರಾಜ್ಯಪಾಲರಿಂದ ಸಹಿ; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಈ ಮುಂಚೆ ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು.

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಧಿಕೃತ ಪಟ್ಟಿಗೆ ರಾಜ್ಯಪಾಲರಿಂದ ಸಹಿ; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ
ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ
Published On :

ಬೆಂಗಳೂರು: ಕೊನೆಗೂ ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಬುಧವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಅಧಿಕೃತ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಹಿ ಹಾಕಿದ್ದಾರೆ.

ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಅವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಈ ಮುಂಚೆ ಮುನಿಯಪ್ಪ ಅವರಿಗೆ ಆಹಾರ ಖಾತೆಯನ್ನು ನೀಡಲಾಗಿತ್ತು. ಆದರೆ ಈ ಬಾರಿ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ. ಮುನಿಯಪ್ಪ ಅವರು ಸಮಾಜಕಲ್ಯಾಣ ಖಾತೆ ಬೇಕೇಂದು ಪಟ್ಟು ಹಿಡಿದಿದ್ದರು ಮತ್ತು ಖುದ್ದು ರಾಹುಲ್ ಗಾಂಧಿ ಭೇಟಿ ಮಾಡಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದರು.

ಇನ್ನು ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಆದರೆ ಇದೀಗ ಅವರಿಗೆ ಅರಣ್ಯ ಖಾತೆಯನ್ನು ನೀಡಲಾಗಿದೆ.

ಯಾರಿಗೆ ಯಾವ ಖಾತೆ?

ಲಕ್ಷ್ಮಣ ಸವದಿ- ಸಹಕಾರ ಇಲಾಖೆ

ರಾಮಲಿಂಗರೆಡ್ಡಿ-ಅರಣ್ಯ (ಈ ಹಿಂದೆ ಜಲ ಸಂಪನ್ಮೂಲ)

ಕೆ.ಹೆಚ್.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ

ಸಂತೋಷ್ ಲಾಡ್- ಕಾರ್ಮಿಕ ಇಲಾಖೆ

ಯು.ಟಿ.ಖಾದರ್-ಆರೋಗ್ಯ ಮತ್ತು ಕಲ್ಯಾಣ ಇಲಾಖೆ, ವಕ್ಫ್

ಶಿವರಾಜ್ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ

ಬಸವರಾಜ ರಾಯರೆಡ್ಡಿ-ಉನ್ನತ ಶಿಕ್ಷಣ

ಎಚ್‌.ಸಿ.ಬಾಲಕೃಷ್ಣ-ಪೌರಾಡಳಿತ

ಕೆ.ಎಸ್‌.ಬಸವಂತಪ್ಪ-ಮುಜರಾಯಿ, ಮೀನುಗಾರಿಕೆ

ಎನ್‌.ಚಲುವರಾಯಸ್ವಾಮಿ- ಜಲಸಂಪನ್ಮೂಲ ಇಲಾಖೆ

ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಎಸ್‌.ಎಸ್‌.ಮಲ್ಲಿಕಾರ್ಜುನ್‌- ಗಣಿ ಮತ್ತು ಭೂವಿಜ್ಞಾನ ಇಲಾಖೆ

ಬಿ.ನಾಗೇಂದ್ರ-ಯೋಜನೆ & ಸಾಂಖ್ಯಿಕ ಇಲಾಖೆ

ಪಿ.ಎಂ.ನರೇಂದ್ರಸ್ವಾಮಿ-ಕೃಷಿ ಇಲಾಖೆ

ಸಿ.ಪುಟ್ಟರಂಗಶೆಟ್ಟಿ-ಪಶು ಸಂಗೋಪನಾ ಇಲಾಖೆ, ರೇಷ್ಮೆ

ಟಿ.ರಘುಮೂರ್ತಿ-ಪರಿಶಿಷ್ಟ ಪಂಗಡ ಕಲ್ಯಾಣ ಖಾತೆ

ರಿಜ್ವಾನ್‌ ಅರ್ಷದ್‌-ಆಹಾರ & ನಾಗರಿಕ ಪೂರೈಕೆ ಇಲಾಖೆ

ರುದ್ರಪ್ಪ ಲಮಾಣಿ- ಸಕ್ಕರೆ ಮತ್ತು ಜವಳಿ

ಶಿವಲಿಂಗೇಗೌಡ-ಅಬಕಾರಿ ಖಾತೆ

ವಿಜಯಾನಂದ ಕಾಶಪ್ಪನವರ್‌-ಸಣ್ಣ ಕೈಗಾರಿಕೆ

ಜಮೀರ್‌ ಅಹ್ಮದ್‌ ಖಾನ್-ವಸತಿ

ಅಜಯ್ ಸಿಂಗ್-ಸಣ್ಣ ನೀರಾವರಿ, ಐಟಿ ಬಿಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.