ನೂತನ ಸಚಿವರಿಗೆ ಸರ್ಕಾರಿ ನಿವಾಸ, ಕಾರು ಹಂಚಿಕೆ ಮಾಡಿ ಆದೇಶ; ನಿಮ್ಮ ಜಿಲ್ಲೆಯ ಮಿನಿಸ್ಟರ್ ಮನೆ ಎಲ್ಲಿದೆ? ಇಲ್ಲಿದೆ ವಿವರ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು(ಡಿಪಿಎಆರ್) ಸಚಿವರುಗಳು ಹಾಗೂ ಜನಪ್ರತಿನಿಧಿಗಳಿಗೆ ಅಧಿಕೃತ ಸರ್ಕಾರಿ ವಾಹನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಪ್ರಮುಖ 10 ಸಚಿವರಿಗೆ ಬೆಂಗಳೂರು ನಗರದಲ್ಲಿ ಅಧಿಕೃತ ಸರ್ಕಾರಿ ನಿವಾಸ(ಬಂಗಲೆ) ಹಾಗೂ 19 ನೂತನ ಸಚಿವರಿಗೆ ಅಧಿಕೃತ ಸರ್ಕಾರಿ ಕಾರು ಹಂಚಿಕೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು(ಡಿಪಿಎಆರ್) ಸಚಿವರುಗಳು ಹಾಗೂ ಜನಪ್ರತಿನಿಧಿಗಳಿಗೆ ಅಧಿಕೃತ ಸರ್ಕಾರಿ ವಾಹನಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಕುಮಾರ ಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನ ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ 10 ಸಚಿವರಿಗೆ ಸರ್ಕಾರಿ ಅಧಿಕೃತ ನಿವಾಸಗಳನ್ನು ಹಂಚಿಕೆ ಮಾಡಲಾಗಿದೆ.
ಸಚಿವರಿಗೆ ಸರ್ಕಾರಿ ನಿವಾಸ ಹಂಚಿಕೆ
ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿಗಳು) - ಸದಾಶಿವನಗರ, RMV 2ನೇ ಹಂತ, ಬೆಂಗಳೂರು
ಎನ್. ಚೆಲುವರಾಯಸ್ವಾಮಿ - ನಂ.3, ಕುಮಾರ ಕೃಷ್ಣ ದಕ್ಷಿಣಿ, ಬೆಂಗಳೂರು
ಬಿ.ಝೆಡ್. ಜಮೀರ್ ಅಹಮದ್ ಖಾನ್ - ನಂ.30, ಸ್ಯಾಂಕಿ ರಸ್ತೆ, ಬೆಂಗಳೂರು
ಶಿವರಾಜ್ ಎಸ್. ತಂಗಡಗಿ - ನಂ. ಬಿ-2, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಲಕ್ಷ್ಮಣ ಸವದಿ - ನಂ.3, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಸಂತೋಷ್ ಲಾಡ್ - ನಂ.3, ಸದಾ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು
ಪಿ.ಎಂ. ನರೇಂದ್ರ ಸ್ವಾಮಿ - ನಂ.5, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಬೈರತಿ ಸುರೇಶ್ - ನಂ.2, ಕೇಶವ್ ರಸ್ತೆ, ಬೆಂಗಳೂರು
ಕೆ.ಎನ್. ಶಿವಲಿಂಗೇಗೌಡ - ನಂ.1, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಬಸವಂತಪ್ಪ - ನಂ.ಬಿ-6, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



