ಹೊಸ ಮುಖಗಳ ನಿರೀಕ್ಷೆ ಹುಸಿ: ಡಿಕೆಶಿ ಸಂಪುಟದಲ್ಲಿ ಹಿರಿಯರ ಪ್ರಾಬಲ್ಯ; ಅನುಭವಿಗಳಿಗೆ ಮಣೆ ಹಾಕಿದ ಹೈಕಮಾಂಡ್..!
ಸಚಿವ ಸಂಪುಟದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (48), ರಿಜ್ವಾನ್ ಅರ್ಷದ್ (47) ಹಾಗೂ ಯತೀಂದ್ರ ಸಿದ್ದರಾಮಯ್ಯ (46) ಮಾತ್ರ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಚಿವರಾಗಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಯುವ ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದ್ದರೂ, ಅಂತಿಮವಾಗಿ ಅನುಭವಿಗಳಿಗೆ ಮತ್ತು ಹಿರಿಯ ನಾಯಕರಿಗೇ ಆದ್ಯತೆ ನೀಡಲಾಗಿದೆ. '
ಸಚಿವ ಸಂಪುಟದ ಸದಸ್ಯರ ಸರಾಸರಿ ವಯಸ್ಸು 55.69 ವರ್ಷವಾಗಿದ್ದು, ಬಹುತೇಕ ಸಚಿವರು 50 ವರ್ಷ ದಾಟಿದವರೇ ಆಗಿದ್ದಾರೆ.
ಸಚಿವ ಸಂಪುಟದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (48), ರಿಜ್ವಾನ್ ಅರ್ಷದ್ (47) ಹಾಗೂ ಯತೀಂದ್ರ ಸಿದ್ದರಾಮಯ್ಯ (46) ಮಾತ್ರ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಚಿವರಾಗಿದ್ದಾರೆ.
ಇನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ (78) ಸಚಿವ ಸಂಪುಟದ ಅತ್ಯಂತ ಹಿರಿಯ ಸಚಿವರಾಗಿದ್ದಾರೆ. ಅವರ ನಂತರ ಇಂಧನ ಸಚಿವ ಕೆ.ಜೆ. ಜಾರ್ಜ್ (77), ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (75), ರಾಮಲಿಂಗಾರೆಡ್ಡಿ (73), ಪುಟ್ಟರಂಗ ಶೆಟ್ಟಿ (72) ಹಾಗೂ ಬಸವರಾಜ ರಾಯರೆಡ್ಡಿ (70) ಹಿರಿಯ ಸಚಿವರ ಪಟ್ಟಿಯಲ್ಲಿದ್ದಾರೆ.
ಅರವತ್ತರ ಹರೆಯದ ಸಚಿವರು:
ಕೆ.ಎಂ. ಶಿವಲಿಂಗೇಗೌಡ (64), ರುದ್ರಪ್ಪ ಲಮಾಣಿ (64), ಈಶ್ವರ ಖಂಡ್ರೆ (64), ಸತೀಶ್ ಜಾರಕಿಹೊಳಿ (64), ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (64), ಪಿ.ಎಂ. ನರೇಂದ್ರಸ್ವಾಮಿ (63), ಟಿ. ರಘುಮೂರ್ತಿ (63), ಎಂ.ಬಿ. ಪಾಟೀಲ್ (62), ಎಚ್.ಸಿ. ಬಾಲಕೃಷ್ಣ (61), ಜಮೀರ್ ಅಹ್ಮದ್ ಖಾನ್ (60) ಹಾಗೂ ಮಧು ಬಂಗಾರಪ್ಪ (60).
ಐವತ್ತರ ಹರೆಯದ ಸಚಿವರು:
ಎಸ್.ಎಸ್. ಮಲ್ಲಿಕಾರ್ಜುನ (59), ಶರಣಪ್ರಕಾಶ ಪಾಟೀಲ್ (59), ಯು.ಟಿ. ಖಾದರ್ (57), ಕೆ.ಎಸ್. ಬಸಂತಪ್ಪ (57), ಲಕ್ಷ್ಮಣ ಸವದಿ (56), ಶಿವರಾಜ ತಂಗಡಗಿ (55), ಬಿ. ನಾಗೇಂದ್ರ (55), ವಿಜಯಾನಂದ ಕಾಶಪ್ಪನವರ್ (54), ಬೈರತಿ ಸುರೇಶ್ (54), ಕೃಷ್ಣ ಬೈರೇಗೌಡ (53), ಅಜಯ್ ಸಿಂಗ್ (52) ಹಾಗೂ ಸಂತೋಷ್ ಲಾಡ್ (52),
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



