ಸಂಪುಟ ವಿಸ್ತರಣೆ ಸರ್ಕಸ್ ನಂತರ ಖಾತೆ ಹಂಚಿಕೆ ಕಸರತ್ತು; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಕಸರತ್ತು ಆರಂಭವಾಗಿದ್ದು, ಯಾವ ಸಚಿವರಿಗೆ ಯಾವ ಇಲಾಖೆಯ ಜವಾಬ್ದಾರಿ ನೀಡಲಾಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.

ಬೆಂಗಳೂರು: ಬಹುನಿರೀಕ್ಷಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೋಮವಾರ ವಿಸ್ತರಣೆಯಾಗಿದ್ದು, 19 ಕಾಂಗ್ರೆಸ್ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಎಲ್ಲರ ಗಮನ ಖಾತೆ ಹಂಚಿಕೆಯತ್ತ ನೆಟ್ಟಿದೆ.
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಕಸರತ್ತು ಆರಂಭವಾಗಿದ್ದು, ಯಾವ ಸಚಿವರಿಗೆ ಯಾವ ಇಲಾಖೆಯ ಜವಾಬ್ದಾರಿ ನೀಡಲಾಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.
ನಿನ್ನೆ 19 ಸಚಿವರ ಪ್ರಮಾಣವಚನದೊಂದಿಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಒಟ್ಟು 33 ಸಚಿವರಿದ್ದಾರೆ. ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಕೂಡ ಚರ್ಚೆ ನಡೆದಿದ್ದು, ಯಾರಿಗೆ ಯಾವ ಖಾತೆ ನೀಡಲಾಗುತ್ತದೆ ಎಂಬ ಬಗ್ಗೆ ಸಂಭಾವ್ಯ ಪಟ್ಟಿ ಇಲ್ಲಿದೆ.
ನೂತನ ಸಚಿವರ ಸಂಭಾವ್ಯ ಖಾತೆಗಳು
ಪಿ.ಎಂ. ನರೇಂದ್ರಸ್ವಾಮಿ - ಸಮಾಜ ಕಲ್ಯಾಣ ಇಲಾಖೆ
ಬಸವರಾಜ ರಾಯರೆಡ್ಡಿ - ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ, ಪ್ರವಾಸೋದ್ಯಮ
ಪುಟ್ಟರಂಗಶೆಟ್ಟಿ- ಪಶುಸಂಗೋಪನೆ ಹಾಗೂ ರೇಷ್ಮೆ
ಎಸ್.ಎಸ್. ಮಲ್ಲಿಕಾರ್ಜುನ - ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ
ಎನ್ ಚಲುಬರಾಯಸ್ವಾಮಿ- ಕೃಷಿ
ಕೆ ಎಂ ಶಿವಲಿಂಗೇಗೌಡ- ವಸತಿ
ಲಕ್ಷ್ಮಣ ಸವದಿ -ಸಹಕಾರ ಹಾಗೂ ಸಕ್ಕರೆ
ಮಧು ಬಂಗಾರಪ್ಪ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಜಮೀರ್ ಅಹಮದ್ ಖಾನ್-ವಕ್ಫ್ ,ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
ಕೆ ಎನ್ ಬಸವಂತಪ್ಪ- ಪೌರಾಡಳಿತ
ವಿಜಯಾನಂದ ಕಾಶಪ್ಪನವರ್-ಕೈಮಗ್ಗ, ಜವಳಿ ಇಲಾಖೆ, ಕೃಷಿ ಮಾರುಕಟ್ಟೆ
ಅಜಯ್ ಸಿಂಗ್-ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳು
ರುದ್ರಪ್ಪ ಲಮಾಣಿ-ಅಬಕಾರಿ ಇಲಾಖೆ
ಎಚ್ ಸಿ ಬಾಲಕೃಷ್ಣ-ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
ರಿಜ್ವಾನ್ ಅರ್ಷದ್- ಉನ್ನತ ಶಿಕ್ಷಣ ಇಲಾಖೆ
ಬಿ.ನಾಗೇಂದ್ರ,-ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ
ಸಂತೋಷ್ ಎಸ್ .ಲಾಡ್- ಕಾರ್ಮಿಕ ಇಲಾಖೆ
ಶಿವರಾಜ ತಂಗಡಗಿ- ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ
ಟಿ. ರಘುಮೂರ್ತಿ-ಪರಿಶಿಷ್ಟ ವರ್ಗಗಳ ಕಲ್ಯಾಣ
ಈ 19 ಸಚಿವರಿಗೂ ಖಾತೆ ಹಂಚಿಕೆ ಬಗ್ಗೆ ಮಹತ್ವದ ಸಭೆ ನಡೆದಿದ್ದು, ಶೀಫ್ರವೇ ಅಧಿಕೃತ ಪಟ್ಟಿ ಹೊರಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



