'ವಾಶಿಂಗ್ ಪೌಡರ್ ನಿರ್ಮಾ, ನಿಮ್ಮಪ್ಪ ಮಾಡಿದ ಕರ್ಮಾ': BJP ಸೇರಿದರೆ 24 ಕ್ಯಾರೆಟ್ ಗೋಲ್ಡ್ ಆಗ್ತಾರೆ; ಚಡ್ಡಾ ಬಿಜೆಪಿಗೆ ಏಕೆ ಬೇಕಿತ್ತು?
ಇಷ್ಟು ದಿನ ಬಿಜೆಪಿಯನ್ನು ಬೈಯುತ್ತಿದ್ದ ರಾಘವ್ ಚಡ್ಡಾ, ಈಗ ಏಕಾಏಕಿ ಬಿಜೆಪಿಯಷ್ಟು ನೈತಿಕ ಮೌಲ್ಯವನ್ನು ಹೊಂದಿರುವ ಪಕ್ಷ ಬೇರೊಂದಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆಗಳು ಮತ್ತು ಅವರ ಪಕ್ಷಾಂತರ ನಿರ್ಧಾರ ಅನುಕೂಲಸಿಂಧು ರಾಜಕಾರಣಕ್ಕೆ ಜ್ವಲಂತ ಉದಾಹರಣೆ

ಧಾರವಾಡ: ಆಪ್ ಸಂಸದರು ಬಿಜೆಪಿ ಸೇರ್ಪಡೆ ಆಗಿದ್ದು ಆಪರೇಷನ್ ಕಮಲವಲ್ಲ. ಯಾರು ಏನೇ ಕರ್ಮಕಾಂಡ ಮಾಡಿದರೂ ಬಿಜೆಪಿ ಸೇರಿದರೆ ಸಾಕು 24 ಕ್ಯಾರೆಟ್ ಗೋಲ್ಡ್ ಆಗುತ್ತಾರೆ. ಇದು ಬಿಜೆಪಿ ತಂತ್ರ. ವಿಶ್ವಗುರು ಇವರ ಬಳಿ ಇದ್ದಾಗ ಆಪ್ ಸಂಸದರು ಇವರಿಗೆ ಯಾಕೆ ಬೇಕಿತ್ತು?" ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಂದು ವಾಶಿಂಗ್ ಮಶಿನ್ ಇದ್ದು, ಯಾರು ಎಷ್ಟೇ ಭ್ರಷ್ಟರಿದ್ದರೂ ಅದರಲ್ಲಿ ಹಾಕಿದರೆ ಅವರು ಶುದ್ಧರಾಗಿ 24 ಕ್ಯಾರೆಟ್ ಚಿನ್ನವಾಗುತ್ತಾರೆ, ಇತ್ತೀಚೆಗೆ ಆಮ್ ಆದ್ಮಿ ಪಕ್ಷದ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ ಸೇರಿದಕ್ಕೆ ವ್ಯಂಗ್ಯವಾಡಿದ್ದಾರೆ.
ವಾಶಿಂಗ್ ಪೌಡರ್ ನಿರ್ಮಾ, ನಿಮ್ಮಪ್ಪ ಮಾಡಿದ ಕರ್ಮಾ ಎಂದು ನಾವು ಚಿಕ್ಕವರಿದ್ದಾಗ ವಾಶಿಂಗ್ ಪೌಡರ್ ಬಗ್ಗೆ ಬರುವ ಜಾಹೀರಾತನ್ನು ತಮಾಷೆ ಮಾಡುತ್ತಿದ್ದೆವು. ಆ ರೀತಿ ಯಾರೇ ಭ್ರಷ್ಟಾಚಾರ ಮಾಡಿದರೂ ಬಿಜೆಪಿಗೆ ಬಂದ ಮೇಲೆ ಅವರು ಶುದ್ಧವಾಗುತ್ತಾರೆ.
ರಾಘವ್ ಚಡ್ಡಾ ಬಿಜೆಪಿಗೆ ಏಕೆ ಬೇಕಿತ್ತು? ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲು ಈ ತಂತ್ರಗಾರಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಇಷ್ಟು ದಿನ ಬಿಜೆಪಿಯನ್ನು ಬೈಯುತ್ತಿದ್ದ ರಾಘವ್ ಚಡ್ಡಾ, ಈಗ ಏಕಾಏಕಿ ಬಿಜೆಪಿಯಷ್ಟು ನೈತಿಕ ಮೌಲ್ಯವನ್ನು ಹೊಂದಿರುವ ಪಕ್ಷ ಬೇರೊಂದಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆಗಳು ಮತ್ತು ಅವರ ಪಕ್ಷಾಂತರ ನಿರ್ಧಾರ ಅನುಕೂಲಸಿಂಧು ರಾಜಕಾರಣಕ್ಕೆ ಜ್ವಲಂತ ಉದಾಹರಣೆ" ಎಂದು ಸಂತೋಷ್ ಲಾಡ್ ಹೇಳಿದರು.
ಪಂಚ ರಾಜ್ಯಗಳ ಚುನಾವಣೆಯ ವಿಚಾರವಾಗಿ ಮಾತನಾಡಿ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಯೊಂದಿಗೆ ನಾವು ಗೆಲ್ಲುತ್ತೇವೆ. ಕೇರಳದಲ್ಲಿ ಯುಡಿಎಫ್ ಮೈತ್ರಿ ಗೆಲ್ಲುತ್ತದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಸ್ಸಾಂನಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



