ನಾನೇನು ಕೇರಳದಲ್ಲಿ ಮೋಜು-ಮಸ್ತಿಗೆ ಹೋಗಿರಲಿಲ್ಲ; ನನ್ನ ಹಣೆಬರಹ ಬರೆಯಲು ಯಾರಿಂದಲೂ ಸಾಧ್ಯವಿಲ್ಲ: ಆಪ್ತರ ತಲೆದಂಡ- ಜಮೀರ್ ಕೆಂಡ!
ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಅಥವಾ ಕಳ್ಳಾಟ ಆಡಲು ಹೋಗಿರಲಿಲ್ಲ. ನಾನು ಪಾರ್ಟಿ ಕೆಲಸ ಮಾಡುವುದಕ್ಕೆ ಕೇರಳಕ್ಕೆ ಹೋಗಿದ್ದೆ. ನಾನೇನಾದರೂ ಸ್ವಿಚ್ ಆಫ್ ಮಾಡಿಕೊಂಡು ಹಾಲಿಡೇಸ್ ಹೋಗಿದ್ದರೆ ಅದು ತಪ್ಪು.

ಬೆಂಗಳೂರು: ನಾನೇನು ಕೇರಳಕ್ಕೆ ಮೋಜು-ಮಸ್ತಿ ಮಾಡಲು ಹೋಗಿರಲಿಲ್ಲ. ಎಐಸಿಸಿ ನಾಯಕ ಕೆ.ಸಿ. ವೇಣುಗೋಪಾಲ್ ಅವರ ಸೂಚನೆಯಂತೆ ಪಕ್ಷದ ಕೆಲಸಕ್ಕಾಗಿಯೇ ಅಲ್ಲಿಗೆ ಹೋಗಿದ್ದೆ. ನನ್ನ ಹಣೆಬರಹ ಬರೆಯಲು ಯಾರಿಂದಲೂ ಸಾಧ್ಯವಿಲ್ಲ, ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗಲ್ಲ ಎಂದು ಜಮೀರ್ ಗುಡುಗಿದ್ದಾರೆ.
ದಾವಣಗೆರೆ ಪ್ರಚಾರದಿಂದ ದೂರ ಉಳಿದು ಕೇರಳಕ್ಕೆ ತೆರಳಿದ್ದ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್, ನನ್ನ ವಿಚಾರ ಯಾವುದು ಚರ್ಚೆಗೆ ಬಂದಿಲ್ಲ, ಸಿಎಂ ಅವರೊಂದಿಗೆ ನಾನು ಒಂದು ಗಂಟೆ ಮಾತನಾಡಿದ್ದೇವೆ. ನಸೀರ್ ಅಹ್ಮದ್ ಅವರಿಗೆ ಹೀಗಾಗಿದ್ದು ಬೇಸರವಾಗಿದೆ.
ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಅಥವಾ ಕಳ್ಳಾಟ ಆಡಲು ಹೋಗಿರಲಿಲ್ಲ. ನಾನು ಪಾರ್ಟಿ ಕೆಲಸ ಮಾಡುವುದಕ್ಕೆ ಕೇರಳಕ್ಕೆ ಹೋಗಿದ್ದೆ. ನಾನೇನಾದರೂ ಸ್ವಿಚ್ ಆಫ್ ಮಾಡಿಕೊಂಡು ಹಾಲಿಡೇಸ್ ಹೋಗಿದ್ದರೆ ಅದು ತಪ್ಪು. ಹಗಲೂ ರಾತ್ರಿ ಬಿಸಿಲು ಎನ್ನದೇ ಕೆಲಸ ಮಾಡಿದ್ದೇನೆ. ದಿನಕ್ಕೆ 350 ಕಿಮೀ ಪ್ರಯಾಣ ಮಾಡಿ ಕೇರಳದಲ್ಲಿ ಪ್ರಚಾರ ಮಾಡಿದ್ದೇನೆ. ಹೈಕಮಾಂಡ್ ಕೆಲಸ ಮಾಡಲು ತಾನೇ ನಾನು ಹೋಗಿದ್ದು ಎಂದು ಖಡಕ್ ಉತ್ತರ ನೀಡಿದ್ದಾರೆ.
ಅಲ್ಲದೇ, ಕೇರಳದಲ್ಲಿ 7ನೇ ತಾರೀಖಿನ ತನಕ ಇರೋದಕ್ಕೆ ಹೇಳಿದ್ದರು. ಆದರೆ ಸಿಎಂ ಫೋನ್ ಮಾಡಿ ಪ್ರಚಾರ ಮಾಡು ಅಂದರು. ಅದಕ್ಕಾಗಿ ನಾನು ಬಾಗಲಕೋಟೆಗೆ ಬಂದೆ, ದಾವಣೆಗೆರೆಗೆ ಪ್ರಚಾರಕ್ಕೂ ಹೋಗಿದ್ದೆ. ಕರೆದರೆ ಮತ್ತೆ ಪ್ರಚಾರಕ್ಕೆ ಹೋಗುತ್ತಿದ್ದೆ. ಸಿಎಂ ಜೊತೆಗೆ ನಿನ್ನೆ ಚರ್ಚೆ ಮಾಡಿದ್ದೇನೆ. ಮುಂದಿನ ಟಾರ್ಗೆಟ್ ನಾನೇ ನಾನೇ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ.
ಸಿಎಂ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡಿದ್ದೇನೆ. ನಾಳೆ ಆದರೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭೇಟಿ ಮಾಡುತ್ತೇನೆ. ತಮಿಳುನಾಡು ಕೃಷ್ಣ ಗಿರಿ ಹೊಸೂರು ಎಲ್ಲ ಕಡೆ ಪ್ರಚಾರಕ್ಕೆ ಕರೆದಿದ್ದಾರೆ. ಅದಕ್ಕೂ ಪ್ಲ್ಯಾನ್ ಮಾಡುತ್ತಿದ್ದೇನೆ ಎಂದರು.
ನಸೀರ್ ಅಹಮದ್ ಪಾರ್ಟಿಯಲ್ಲಿ ತುಂಬಾ ಹಿರಿಯರು, ಅವರಿಗೆ ವಜಾ ಮಾಡಿದ್ದು ನನಗೂ ಬೇಸರವಾಗಿದೆ. ನನಗೂ ಬಹಳ ನೋವಾಗಿದೆ, ಹೀಗಾಗಿ ನಸೀರ್ ಅಹಮದ್ ಜೊತೆಗೆ ಸಮಾಧಾನ ಮಾಡಲು ಪ್ರಯತ್ನ ಮಾಡಿದ್ದೇನೆ.
ಬಹಳ ಸಣ್ಣವನು ನಾನು, ನಾನು ಪಕ್ಷದ ಸೇವಕ. ಯಾವತ್ತೂ ನಾನು ಜಾತಿ ರಾಜಕಾರಣ ಮಾಡಿಲ್ಲ. ಯಾರೂ ಕೂಡ ನನ್ನ ಹೆಸರು ಹೇಳಿ ಆರೋಪ ಮಾಡಿಲ್ಲ. ಆರೋಪ ಮಾಡುವುದಾದರೆ ಹೆಸರು ಹೇಳಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



