ರಾಜಕೀಯ

''5 ತಿಂಗಳಿಂದ ಗೃಹಲಕ್ಷ್ಮಿ.. ಅನ್ನಭಾಗ್ಯದ ಹಣ ಇಲ್ಲ.. ಆದ್ರೆ ಶಾಸಕರ ರಿಕ್ಲೇನರ್`ಗಳು ಮಾತ್ರ ಆರ್ಡರ್ ಮಾಡಿದ ಕೂಡಲೇ ಬಂದ್ವು..''!

ವಿಧಾನಸೌಧದ ಮೊಗಸಾಲೆಯಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕಿರುನಿದ್ರೆ ಮಾಡುವ ಶಾಸಕರಿಗೆ ಈ ಬಾರಿ ರಿಕ್ಲೈನರ್ ಚೇರ್ ವ್ಯವಸ್ಥೆಯನ್ನು ಸ್ಪೀಕರ್ ಯು ಟಿ ಖಾದರ್ ಕಲ್ಪಿಸಿದ್ದಾರೆ.

''5 ತಿಂಗಳಿಂದ ಗೃಹಲಕ್ಷ್ಮಿ.. ಅನ್ನಭಾಗ್ಯದ ಹಣ ಇಲ್ಲ.. ಆದ್ರೆ ಶಾಸಕರ ರಿಕ್ಲೇನರ್`ಗಳು ಮಾತ್ರ ಆರ್ಡರ್ ಮಾಡಿದ ಕೂಡಲೇ ಬಂದ್ವು..''!
ಶಾಸಕರಿಗಾಗಿ ಬಂದಿರುವ ರಿಕ್ಲೇನರ್ ಗಳು
Published On :

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿಚಾರವಾಗಿ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹೌದು.. ವಿಧಾನ ಸಭೆ ಅಧಿವೇಶನ ಆರಂಭವಾಗಿದ್ದು, ವಿಧಾನಸೌಧದ ಮೊಗಸಾಲೆಯಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕಿರುನಿದ್ರೆ ಮಾಡುವ ಶಾಸಕರಿಗೆ ಈ ಬಾರಿ ರಿಕ್ಲೈನರ್ ಚೇರ್ ವ್ಯವಸ್ಥೆಯನ್ನು ಸ್ಪೀಕರ್ ಯು ಟಿ ಖಾದರ್ ಕಲ್ಪಿಸಿದ್ದಾರೆ. ಸದ್ಯ ಈ ಮಸಾಜ್ ಚೇರ್‌ಗಳನ್ನು ಶಾಸಕರಿಗೆ ಕಲ್ಪಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಹೊಸ ಹೊಸ ಯೋಜನೆಗಳಿಗೆ ಹಣ ನೀಡುತ್ತಿಲ್ಲ, ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸರಿಯಾಗಿ ಹಣ ನೀಡುತ್ತಿಲ್ಲ, ಶಾಸಕರಿಗೂ ಯಾವುದೇ ವಿಶೇಷ ಅನುದಾನ ನೀಡ್ತಾ ಇಲ್ಲ..ಇದರ ನಡುವೆ ಶಾಸಕರಿಗೆ ಐಶಾರಾಮಿ ರಿಕ್ಲೇನರ್ ಗಳಿಗೆ ಮಾತ್ರ ದುಡ್ಡಿತ್ತೇ ಎಂದು ವಿಪಕ್ಷಗಳು ಕಿಡಿಕಾರುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಇದೇ ವಿಚಾರವಾಗಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

'ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ 5 ತಿಂಗಳಿನಿಂದ ವಿಳಂಬವಾಗಿದೆ, ಅನ್ನಭಾಗ್ಯದ ಹಣ ಕೂಡ ಜನರ ಕೈ ಸೇರುತ್ತಿಲ್ಲ. ಆದರೆ ಶಾಸಕರಿಗೆ ಮಾತ್ರ ಐಶಾರಾಮಿ ರಿಕ್ಲೇನರ್ ಗಳು ಬಂದಿವೆ. ಆರ್ಡರ್ ಮಾಡಿದ್ರು.. ಡೆಲಿವರಿ ಆಯ್ತು.. ಅನಂದಿಸಲಾಗುತ್ತಿದೆ. ಐಷಾರಾಮಿ ವಿಷಯಕ್ಕೆ ಬಂದರೆ, ಅದು ಬ್ಲಿಂಕಿಟ್‌ನ ವೇಗ. ಬಡವರ ವಿಷಯಕ್ಕೆ ಬಂದರೆ, ಅದು ಶಾಶ್ವತವಾಗಿ 'ಔಟ್ ಫಾರ್ ಡೆಲಿವರಿ' ಆಗಿರುತ್ತದೆ ಎಂದು ನಿಖಿಲ್ ಕಮಾರಸ್ವಾಮಿ ಕಿಡಿಕಾರಿದ್ದಾರೆ.

ಲಾಕ್ ಗೆ 3 ಕೋಟಿ ರೂ ಖರ್ಚು?

ಕರ್ನಾಟಕ ವಿಧಾನಸಭೆ ಸ್ಪೀಕರ್ ಕಚೇರಿಯು ಶಾಸಕರ ಭವನದೊಳಗಿನ ಎಲ್ಲಾ ಶಾಸಕರ ಕೊಠಡಿಗಳಿಗೆ ಸ್ಮಾರ್ಟ್ ಲಾಕ್‌ಗಳನ್ನು ಅಳವಡಿಸಲು 3 ಕೋಟಿ ರೂ.ಗಳನ್ನು ಖರ್ಚು ಮಾಡುವ ಯೋಜನೆಯನ್ನು ಈ ಹಿಂದೆ ಪ್ರಸ್ತಾಪಿಸಿತ್ತು. ಇದು ಭದ್ರತೆ ಮತ್ತು ಪ್ರವೇಶಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಅಂತೆಯೇ ಸ್ಪೀಕರ್ ಯು.ಟಿ. ಖಾದರ್ ಅವರು ಶಾಸಕರ ಸೌಕರ್ಯವನ್ನು ಸುಧಾರಿಸಲು ವಿಧಾನಸಭೆಯಲ್ಲಿ ಮಸಾಜ್ ಕುರ್ಚಿಗಳ ಜೊತೆಗೆ ರೆಕ್ಲೈನರ್‌ಗಳನ್ನು ಅಳವಡಿಸಲು ಸೂಚಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.