ಮೋದಿಗೆ ಅಮೆರಿಕದ ಆಹ್ವಾನವೇ ಇರಲಿಲ್ಲ, ಜೈಶಂಕರ್ ಹೋಗಿ ವ್ಯವಸ್ಥೆ ಮಾಡಿಸಿದ್ದಾರೆ: ಖರ್ಗೆ
ಪ್ರಧಾನಿ ಮೋದಿ ಅವರು ಬುಧವಾರದಿಂದ ಎರಡು ದಿನಗಳ ಕಾಲ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಅಧ್ಯಕ್ಷ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಕಲಬುರಗಿ: ಅಮೆರಿಕದಿಂದ ಗಡಿಪಾರು ಮಾಡಲಾದ ಭಾರತೀಯ ವಲಸಿಗರೊಂದಿಗೆ ಅಮೆರಿಕ ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ತಮ್ಮ 'ಹಳೆಯ ಸ್ನೇಹಿತ' ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿ, ಭಾರತೀಯರನ್ನು ಈ ರೀತಿ ವಾಪಸ್ ಕಳುಹಿಸಬೇಡಿ ಎಂದು ಹೇಳಬೇಕಿತ್ತು ಎಂದು ಬುಧವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಬುಧವಾರದಿಂದ ಎರಡು ದಿನಗಳ ಕಾಲ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
"ಮೋದಿಗೆ ಆರಂಭದಲ್ಲಿ ಅಮೆರಿಕಕ್ಕೆ ಆಹ್ವಾನ ಬಂದಿರಲಿಲ್ಲ. ಆದರೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಮೆರಿಕಕ್ಕೆ ಹೋಗಿ ವ್ಯವಸ್ಥೆ ಮಾಡಿದ್ದಾರೆ. ಅನಂತರವೇ ಮೋದಿಗೆ ಆಹ್ವಾನ ಬಂದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಾರೆ. ಸ್ನೇಹಿತನಾಗಿದ್ದರೆ ಭಾರತೀಯರನ್ನು ಸರಕು ಸಾಗಿಸುವ ವಿಮಾನದಲ್ಲಿ ಕಳುಹಿಸುತ್ತಿರಲಿಲ್ಲ. ಅವರಿಗೆ ಕೊನೆಯ ಪಕ್ಷ ನಾಗರಿಕ ವಿಮಾನವನ್ನು ಮಾಡಿಕೊಡಬೇಕಿತ್ತು ಅಥವಾ ನಮ್ಮ ವಿಮಾನವು ಅಲ್ಲಿಗೆ ತಲುಪುವವರೆಗೂ ಕಾಯಬೇಕಿತ್ತು ಎಂದರು.
ಭಾರತೀಯ ವಲಸಿಗರನ್ನು ಸರಕು ವಿಮಾನದಲ್ಲಿ ಭಾರತಕ್ಕೆ ಮರಳಿ ಕರೆತಂದು "ಕಸಕ್ಕಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ" ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ವಾಗ್ದಾಳಿ ನಡೆಸಿದರು.
ಈ ವಲಸಿಗರನ್ನು ಪ್ರಯಾಣಿಕ ವಿಮಾನದಲ್ಲಿ ಕಳುಹಿಸುವಂತೆ ಮೋದಿ ಟ್ರಂಪ್ ಅವರಿಗೆ ಹೇಳಲಿಲ್ಲ ಅಥವಾ ಭಾರತದಿಂದ ವಿಮಾನದ ವ್ಯವಸ್ಥೆ ಮಾಡಲಿಲ್ಲ. ಇದು ಅವರು ಆಪ್ತ ಸ್ನೇಹಿತ ಎಂದು ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಮೋದಿಯವರಿಗೆ ಸುಳ್ಳು ಹೇಳುವ ಛಾಳಿ ಇದೆ. ಟ್ರಂಪ್ ಈಗಾಗಲೇ ಹೆದರಿಸುತ್ತಿದ್ದಾರೆ. ಅವರಿಂದ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತೆ ಅಂತ ಹೇಗೆ ಹೇಳೋದು? ನಮ್ಮ ಎಂಜಿನಿಯರ್‌ಗಳು, ವೈದ್ಯರು ಹಾಗೂ ಕಂಪ್ಯೂಟರ್ ತಜ್ಞರಿಗೆ ನಿರ್ಬಂಧ ಹೇರುತ್ತಾರೆ'' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


