ಜಾತಿ ಗಣತಿ ವರದಿ: ಬೊಮ್ಮಾಯಿ, ಯಡಿಯೂರಪ್ಪ ತಿರಸ್ಕಾರ ಮಾಡಬಹುದಿತ್ತು- ಲಕ್ಷ್ಮೀ ಹೆಬ್ಬಾಳ್ಕರ್
'ಆಯೋಗದ ಅಧ್ಯಕ್ಷ, ಸದಸ್ಯ ನೇಮಕ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ. ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ. ಜಾತಿ ಗಣತಿಯನ್ನು ಅಧ್ಯಯನ ಮಾಡಿದ್ದು ಬಿಜೆಪಿ.

ಬೆಳಗಾವಿ: ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಜಾತಿ ಗಣತಿ ವರದಿಯನ್ನು ಬೊಮ್ಮಾಯಿ, ಯಡಿಯೂರಪ್ಪ ತಿರಸ್ಕಾರ ಮಾಡಬಹುದಿತ್ತು?ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾನುವಾರ ಹೇಳಿದರು.
ಬಿಎಸ್ ವೈ, ಬೊಮ್ಮಾಯಿಗೆ ಟಾಂಗ್:
ಜಾತಿ ಗಣತಿ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, ಆಯೋಗದ ಅಧ್ಯಕ್ಷ, ಸದಸ್ಯ ನೇಮಕ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ. ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ. ಜಾತಿ ಗಣತಿಯನ್ನು ಅಧ್ಯಯನ ಮಾಡಿದ್ದು ಬಿಜೆಪಿ. ಬೊಮ್ಮಾಯಿ, ಯಡಿಯೂರಪ್ಪ ಅವರೇ ವರದಿ ತಿರಸ್ಕಾರ ಮಾಡಬಹುದಿತ್ತು? ಆದರೆ ಹಾಗೆ ಮಾಡದೆ ಈಗ ಬರೀ ಅವೈಜ್ಞಾನಿಕ ಅವೈಜ್ಞಾನಿಕ ಎನ್ನುತ್ತಾರೆ. ಲೋಪದೋಷ ಇದ್ದರೆ ಒಪ್ಪಿಕೊಳೋಣ. ಎಲ್ಲಿ ಲೋಪವಾಗಿದೆ ಎಂದು ಸ್ಪಷ್ಟವಾಗಿಲ್ಲ ಎಂದರು.
ಯಾವುದೇ ವಾದ- ವಿವಾದ ನಡೆದಿಲ್ಲ:
ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸಂಪುಟದಲ್ಲಿ ಯಾರು ವಿರೋಧ ಮಾಡಿಲ್ಲ. ಚರ್ಚೆಯ ಅಪೂರ್ಣವಾಗಿದೆ. ನಾನೇ ಕ್ಯಾಬಿನೆಟ್ ಸಭೆಯಲ್ಲಿದೆ. ಚರ್ಚೆಯಲ್ಲಿ ಎಲ್ಲರೂ ಭಾಗಿಯಾಗಿದ್ದೇವೆ. ಅವೈಜ್ಞಾನಿಕ ಎನ್ನುವ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಶಿವಾನಂದ ಪಾಟೀಲ್ ಹಾಗೂ ಎಂ ಬಿ ಪಾಟೀಲ್ ನಡುವೆ ವಾದ ವಿವಾದ ನಡೆದಿಲ್ಲ ಎಂದು ತಿಳಿಸಿದರು.
ಉಹಾಪೋಹಗಳಿಗೆ ಎಡೆಮಾಡಿಕೊಡುದು ಬೇಡ. ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಯಾವುದೇ ಸಮಾಜಕ್ಕೆ ಹಾನಿಯಾಗಬಾರದು ಎಂಬ ರೀತಿಯಲ್ಲಿ ತೀರ್ಮಾನಿಸಲಾಗಿದೆ. ಎಲ್ಲರಿಗೂ ನ್ಯಾಯ ಕೊಡಿಸಬೇಕು ಎಂಬುದು ನಮ್ಮ ಉದ್ದೇಶ. ಮುಂದುವರಿದ ಹಾಗೂ ಹಿಂದುಳಿದ ಸಮುದಾಯಕ್ಕೆ ತೊಂದರೆಯಾಗಬಾರದು ಎಂಬ ರೀತಿಯಲ್ಲಿ ಚರ್ಚೆ ಆಗಿದೆ ಎಂದು ತಿಳಿಸಿದರು.
ಕಾರು ಅಪಘಾತದ ಆರೋಪಿ ಬಂಧನ: ಇನ್ನೂ ಕಾರು ಅಪಘಾತ ಪ್ರಕರಣದ ಆರೋಪಿ ಬಂಧನ ವಿಚಾರ ಕುರಿತು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ನಿದ್ದೆಗಣಲ್ಲಿ ಇದ್ದೆ ಬಂದು ಅಪಘಾತ ಮಾಡಿದ್ದಾರೆ. ಮೂರು ತಿಂಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೂರು ತಿಂಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಬಂಧನ ಬಗ್ಗೆ ಅನುಮಾನವಿತ್ತು. ಕಲರ್ ಮ್ಯಾಚ್ ಮಾಡಲು ಎಫ್ ಎಸ್ ಎಲ್ ಮೊರೆ ಸಹ ಹೋಗಿದ್ರು. ಹಿಟ್ ಅಂಡ್ ರನ್ ಕೇಸ್ ಬಹುತೇಕ ಪತ್ತೆ ಆಗಲ್ಲ. ಅಪಘಾದ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


