'ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ'
ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ ಬಿಸಿ ಪಾಟೀಲ್ ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ ಹೊಂದಿಲ್ಲ, ಮೋದಿಯವರಿಗೆ 26 ವರ್ಷವಿದ್ದಾಗಲೂ ಕ್ಯಾಮರಾ ಪ್ರೇಮಿಯಾಗಿದ್ದರೆ?

ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ First rank ಪಡೆಯಲು ಪೈಪೋಟಿಗೆ ಬಿದ್ದಿರುವಂತಿದೆ, ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಐಎನ್ ಸಿ ಕರ್ನಾಟಕ, ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ ಬಿಸಿ ಪಾಟೀಲ್ ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ ಹೊಂದಿಲ್ಲ, ಮೋದಿಯವರಿಗೆ 26 ವರ್ಷವಿದ್ದಾಗಲೂ ಕ್ಯಾಮರಾ ಪ್ರೇಮಿಯಾಗಿದ್ದರೆ? ಎಂದು ಪ್ರಶ್ನಿಸಿದೆ.
1976ರಲ್ಲಿ ಕಲರ್ ಕ್ಯಾಮರಾ ಅಸ್ತಿತ್ವದಲ್ಲಿತ್ತಾ? ಇರಬಹುದೇನೋ ಏಕೆಂದರೆ 1988ರಲ್ಲೇ ಡಿಜಿಟಲ್ ಕ್ಯಾಮೆರಾ ಬಳಸಿದವರಲ್ಲವೇ ಮೋದಿ! ಬಿಜೆಪಿ ಮೋದಿಯ ಬಗ್ಗೆ ಹೇಗೆ ಫೇಕ್ ನರೇಟಿವ್ ಗಳನ್ನು ಕಟ್ಟುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ! ಅಂದಹಾಗೆ, ಸುಳ್ಳು ಹೇಳುವ ಕಲೆಯನ್ನು ಮೋದಿಯವರಿಂದಲೇ ಕಲಿತಿರಾ ಪಾಟೀಲರೇ? ಎಂದು ಕುಹಕವಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


