ಬಿಜೆಪಿಯಲ್ಲಿನ ಎಲ್ಲಾ ಸಮಸ್ಯೆಗಳು ಒಂದು ತಿಂಗಳಲ್ಲಿ ಬಗೆಹರಿಯಲಿದೆ: ವಿಪಕ್ಷ ನಾಯಕ ಆರ್.ಅಶೋಕ
ಒಂದು ತಿಂಗಳಲ್ಲಿ ಬಿಜೆಪಿಯಲ್ಲಿನ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದ್ದು, ಲೋಕಸಭೆ ಚುನಾವಣೆಯನ್ನು ಪಕ್ಷ ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಭಾನುವಾರ ಹೇಳಿದರು.

ಬೆಂಗಳೂರು: ಒಂದು ತಿಂಗಳಲ್ಲಿ ಬಿಜೆಪಿಯಲ್ಲಿನ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದ್ದು, ಲೋಕಸಭೆ ಚುನಾವಣೆಯನ್ನು ಪಕ್ಷ ಒಗ್ಗಟ್ಟಿನಿಂದ ಹೋರಾಟ ನಡೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ.ಸೋಮಣ್ಣ ಅವರೊಂದಿಗೆ ಈಗಾಗಲೇ ಮಾತನಾಡಿದ್ದು, ಮಾತುಕತೆ ಸೋಮಣ್ಣ ಅವರು ಚುನಾವಣಾ ಸೋಲಿನ ನೋವನ್ನು ಹಂಚಿಕೊಂಡಿದ್ದಾರೆ, ಜನವರಿ 4ರಂದು ಮತ್ತೊಮ್ಮೆ ಭೇಟಿ ಮಾಡುತ್ತೇನೆಂದು ಹೇಳಿದರು.
ಕೋವಿಡ್ ವೇಳೆ ಬಿಜೆಪಿ ಹಗರಣ ನಡೆಸಿದೆ ಎಂಬ ಪಕ್ಷದ ಶಾಸಕ ಬಸನಗೌಡ ಯತ್ನಾಳ್ ಅವರು ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸೋಲು, ಹತಾಶರಾದ ಸಮಯದಲ್ಲಿ ಇಂತಹ ಹೇಳಿಕೆಗಳು ಸಹಜ ಎಂದು ತಿಳಿಸಿದರು.
“ಯಶಸ್ಸನ ವೇಳೆ ಹಲವರು ನಮ್ಮೊಂದಿಗಿರುತ್ತಾರೆ. ಆದರೆ, ಸೋಲಿನ ಸಮಯದಲ್ಲಿ ಯಾರೂ ಮುಂದೆ ಬರುವುದಿಲ್ಲ. ಯತ್ನಾಳ್ ಅವರ ಹೇಳಿಕೆಯನ್ನು ಕೇಂದ್ರ ನಾಯಕರು ಗಮನಿಸಿದ್ದಾರೆಂದರು.
ಕಳೆದ 30 ವರ್ಷಗಳಿಂದ ರಾಮಮಂದಿರ ಬಿಜೆಪಿಯ ಪ್ರಣಾಳಿಕೆಯಲ್ಲಿದೆ. ಅದರಂತೆ ಪಕ್ಷವು ಮಂದಿರವನ್ನು ನಿರ್ಮಿಸಿದೆ. ರಾಮ ಮಂದಿರ ಮಾತ್ರವಲ್ಲ, ರಾಮರಾಜ್ಯ ಸ್ಥಾಪನೆಗೂ ನಮ್ಮ ಆಶಯವಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


