'ತುಕ್ಡೇ ತುಕ್ಡೇ ಗ್ಯಾಂಗ್ ಗುಲಾಮರು ಬಾಲ ಬಿಚ್ಚುತ್ತಿದ್ದಾರೆ; ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ನಿಂದ ದೇಶ ವಿಭಜನೆ ತಂತ್ರ'
ಈ ಹಿಂದೆ ಕಾಂಗ್ರೆಸ್ ಪಕ್ಷ ದೇಶವನ್ನೇ ತನ್ನ ಸ್ವಂತ ಆಸ್ತಿಯಂತೆ ನೋಡುತ್ತಿತ್ತು. ಈಗ ಕೊಳ್ಳೆ ಹೊಡೆಯಲು ಉಳಿದಿರುವುದು ರಾಜ್ಯ ಮಾತ್ರ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ.

ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಪಕ್ಷ ದೇಶವನ್ನೇ ತನ್ನ ಸ್ವಂತ ಆಸ್ತಿಯಂತೆ ನೋಡುತ್ತಿತ್ತು. ಈಗ ಕೊಳ್ಳೆ ಹೊಡೆಯಲು ಉಳಿದಿರುವುದು ರಾಜ್ಯ ಮಾತ್ರ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಇಲ್ಲಿಯೂ ತನಗೆ ಕೊಟ್ಟಿರುವುದು ಆಡಳಿತ ಮಾಡುವ ಜವಾಬ್ದಾರಿ ಎಂಬುದನ್ನೂ ಮರೆತು, ಜನರ ತೆರಿಗೆ ಹಣದಿಂದಲೇ ನಡೆಸುವ ಯೋಜನೆಗಳನ್ನು ಮುಂದಿಟ್ಟು ಜನರನ್ನೇ ಬ್ಲಾಕ್ಮೇಲ್ ಮಾಡುವ ಹತಾಶ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಲೇವಡಿ ಮಾಡಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷ ದೇಶವನ್ನೇ ತನ್ನ ಸ್ವಂತ ಆಸ್ತಿಯಂತೆ ನೋಡುತ್ತಿತ್ತು.
ಈಗ ಕೊಳ್ಳೆ ಹೊಡೆಯಲು ಉಳಿದಿರುವುದು ರಾಜ್ಯ ಮಾತ್ರ. ಇಲ್ಲಿಯೂ ತನಗೆ ಕೊಟ್ಟಿರುವುದು ಆಡಳಿತ ಮಾಡುವ ಜವಾಬ್ದಾರಿ ಎಂಬುದನ್ನೂ ಮರೆತು, ಜನರ ತೆರಿಗೆ ಹಣದಿಂದಲೇ ನಡೆಸುವ ಯೋಜನೆಗಳನ್ನು ಮುಂದಿಟ್ಟು ಜನರನ್ನೇ ಬ್ಲಾಕ್ಮೇಲ್ ಮಾಡುವ ಹತಾಶ ಪ್ರಯತ್ನಗಳನ್ನು… pic.twitter.com/WJfEjTovAb
— BJP Karnataka (@BJP4Karnataka) February 2, 2024 p>
ದೇಶ ಒಡೆಯಲು ಐಎನ್ ಸಿ ಕಾಂಗ್ರೆಸ್ ಇದುವರೆಗೂ ಮಾಡಿರುವ ಕುತಂತ್ರಗಳು :
ಜಿನ್ನಾ-ನೆಹರು ಕುತಂತ್ರದ ಫಲ ಪಾಕಿಸ್ಥಾನ ಸೃಷ್ಟಿ
ದೇಶ ಒಡೆಯಲು ನೆಹರು ಅವರಿಂದ 370ನೇ ವಿಧಿ ಗಿಫ್ಟ್
ಖಲಿಸ್ಥಾನಿ ಉಗ್ರ ಭಿಂದ್ರನ್ ವಾಲೆಗೆ ಇಂದಿರೆಯ ಬಲ
ಯಾತ್ರೆ ಮಾಡುತ್ತಾ ದೇಶ ವಿರೋಧಿಗಳನ್ನು ಒಂದುಗೂಡಿಸಿದ ರಾಹುಲ್
ಸಂಸದ ಡಿ. ಕೆ. ಸುರೇಶ್‌ರಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ
ಕಾಂಗ್ರೆಸ್ಸಿನ ತುಕ್ಡೇ ತುಕ್ಡೇ ಗ್ಯಾಂಗ್ ಗುಲಾಮರು ಲೋಕಸಭಾ ಚುನಾವಣೆ ಸಮೀಪ ಬರುತ್ತಿದ್ದಂತೆ, ಬಾಲ ಬಿಚ್ಚುತ್ತಿದ್ದಾರೆ. ಸೋತು ಸುಣ್ಣವಾಗಿರುವ ಕಾಂಗ್ರೆಸ್ ಈಗ ದೇಶ ವಿಭಜಿಸುವ ಕುತಂತ್ರಕ್ಕೆ ಇಳಿಯುತ್ತಿದೆ ಎಂದು ಬಿಜೆಪಿ ಕಿಡಿ ಕಾರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


