ಸಿ.ಟಿ ರವಿ ಬಿಡುಗಡೆ: ಸರ್ಕಾರದ ದಬ್ಬಾಳಿಕೆಗೆ ಕೋರ್ಟ್ ಮಂಗಳಾರತಿ ಎತ್ತಿದೆ, ಪ್ರಜಾಪ್ರಭುತ್ವ ಗೆದ್ದಿದೆ- BJP
ರಾಜ್ಯ ಉಚ್ಛ ನ್ಯಾಯಾಲಯ ಕಾಂಗ್ರೆಸ್ ಸರ್ಕಾರದ ಪೊಲೀಸ್ ದಬ್ಬಾಳಿಕೆಗೆ ಮಂಗಳಾರತಿ ಎತ್ತಿದೆ. ಪ್ರಜಾಪ್ರಭುತ್ವ ಗೆದ್ದಿದೆ, ಸಿಟಿ ರವಿ ಬಿಡುಗಡೆಗೆ ಆದೇಶ ಹೊರಡಿಸಿದೆ.

ಬೆಂಗಳೂರು: ಸಿ.ಟಿ.ರವಿ ಬಿಡುಗಡೆಗೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಸರ್ಕಾರದ ಪೊಲೀಸ್ ದಬ್ಬಾಳಿಕೆಗೆ ಮಂಗಳಾರತಿ ಎತ್ತಿದೆ. ಪ್ರಜಾಪ್ರಭುತ್ವ ಗೆದ್ದಿದೆ ಎಂದು ಬಿಜೆಪಿ ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಪರಿಷತ್ ಶಾಸಕ ಸಿಟಿ ರವಿ ಅವರ ಮೇಲೆ ನಡೆಸಿದ್ದ ಷಡ್ಯಂತ್ರಕ್ಕೆ ಹಿನ್ನಡೆಯಾಗಿದೆ. ಸಿ.ಟಿ.ರವಿಯವರನ್ನು ಅಕ್ರಮವಾಗಿ ಬಂಧಿಸಿದ್ದು ಅತ್ಯಂತ ತಪ್ಪು ನಿರ್ಧಾರವಾಗಿದ್ದು, ತತಕ್ಷಣವಾಗಿ ಅವರನ್ನು ಬಿಡುಗೊಡೆಗೊಳಿಸಿ ಎಂದು ಹೈಕೋರ್ಟ್ ಆದೇಶ ನೀಡಿರುವುದು ಅತ್ಯಂತ ಸ್ವಾಗತಾರ್ಹ. ಸಿಎಂ ಸಿದ್ದರಾಮಯ್ಯಸ, ಡಿಸಿಎಂ ಡಿಕೆ.ಶಿವಕುಮಾರ್ ಅವರೆ, ನಿಮ್ಮ ಕುತಂತ್ರಗಳಿಗೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ. ವಿಪಕ್ಷ ನಾಯಕರುಗಳ ಮೇಲಿನ ನಿಮ್ಮ ದ್ವೇಷ ಹಾಗೂ ಷಡ್ಯಂತ್ರದ ರಾಜಕಾರಣದ ಪಾಪದ ಕೊಡ ತುಂಬಿದ್ದು, ಕರ್ನಾಟಕದ ಜನತೆ ನಿಮ್ಮ ಸೊಕ್ಕಿನ ಆಡಳಿತಕ್ಕೆ ತಕ್ಕ ಪಾಠ ಕಲಿಸುವುದು ಖಚಿತ-ನಿಶ್ಚಿತ-ಖಂಡಿತ ಎಂದು ಹೇಳಿದೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಉಚ್ಛ ನ್ಯಾಯಾಲಯ ಕಾಂಗ್ರೆಸ್ ಸರ್ಕಾರದ ಪೊಲೀಸ್ ದಬ್ಬಾಳಿಕೆಗೆ ಮಂಗಳಾರತಿ ಎತ್ತಿದೆ. ಪ್ರಜಾಪ್ರಭುತ್ವ ಗೆದ್ದಿದೆ, ಸಿಟಿ ರವಿ ಬಿಡುಗಡೆಗೆ ಆದೇಶ ಹೊರಡಿಸಿದೆ. ಜನಪ್ರತಿನಿಧಿಗಳು ಎಂಬುದನ್ನೂ ಲೆಕ್ಕಿಸದೇ ನೀತಿ-ನಿಯಮಗಳನ್ನು ಮೀರಿ ಪೊಲೀಸ್ ಬಲ ಬಳಸಿಕೊಂಡು, ಸರ್ವಾಧಿಕಾರಿ ಆಡಳಿತ ನೆನಪಿಸುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ನಿನ್ನೆಯಿಂದ ಇಂದಿನವರೆಗೂ ಮಾನ್ಯ ಸಿ. ಟಿ. ರವಿ ಅವರನ್ನು ನಿಯಮ ಮೀರಿ ಬಂಧಿಸುವ ಮೂಲಕ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಕಾಂಗ್ರೆಸ್ ಸರ್ಕಾರ ಇಂದಿನ ಪೀಳಿಗೆಗೆ ನೆನಪು ಮಾಡಿಕೊಟ್ಟಿದೆ.
ಗೂಂಡಾಗಳನ್ನು ಪೋಷಿಸಿಕೊಂಡು ಸರ್ಕಾರ ನಡೆಸುವುದು, ಪೊಲೀಸರನ್ನು ಬಳಸಿಕೊಂಡು ಯಾರನ್ನು ಬೇಕಾದರೂ ಬಂಧಿಸುತ್ತೇವೆಂದು ದ್ವೇಷ ಸಾರಲು ಹೊರಟಿದ್ದ ಈ ಸರ್ಕಾರಕ್ಕೆ ಪಾಠ ಹೇಳುವ ರೀತಿಯಲ್ಲಿ ಉಚ್ಚ ನ್ಯಾಯಾಲಯ ಸಕಾಲದಲ್ಲಿ ಮದ್ಯ ಪ್ರವೇಶಿಸಿ ಸಂವಿಧಾನ ಹಾಗೂ ಈ ನೆಲದ ಕಾನೂನಿನ ಘನತೆಯನ್ನು ತಿಳಿಸಿಕೊಟ್ಟಿದೆ. ನ್ಯಾಯಾಲಯದ ಈ ತೀರ್ಪನ್ನು ಕರ್ನಾಟಕದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಾಸಕ ಸಿ.ಟಿ ರವಿಯವರನ್ನು ಅಭಿನಂದಿಸುತ್ತೇನೆ.
ಪ್ರಜಾಪ್ರಭುತ್ವ ದಮನಮಾಡಿ ದಬ್ಬಾಳಿಕೆ, ಕ್ರೌರ್ಯ ತುಂಬಿಕೊಂಡ ವರ್ತನೆಗಳು ಹಾಗೂ ಭ್ರಷ್ಟಾಚಾರದ ಹಗರಣಗಳನ್ನು ಮೈಗೆ ಮೆತ್ತಿಕೊಂಡಿರುವ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಜೆಪಿ ವಿರಮಿಸದೇ ತನ್ನ ಹೋರಾಟ ಮುನುವರೆಸಲಿದೆ. ಪ್ರಜಾಪ್ರಭುತ್ವ ದೇಗುಲದಲ್ಲಿ ನಡೆದ ಪರಮ ದೌರ್ಜನ್ಯದ ಈ ಘಟನೆಯನ್ನು, ದೇಶದ ಗಮನ ಸೆಳೆಯುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಣಾಮಕಾರಿ ಪಾತ್ರ ವಹಿಸಿದ ಮಾಧ್ಯಮಗಳನ್ನು ಈ ಸಂದರ್ಭದಲ್ಲಿ ಮನಃ ಪೂರ್ವಕವಾಗಿ ಅಭಿನಂದಿಸುವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



