ರಾಜಕೀಯ

'ಕೊತ್ವಾಲ್‌ ಬ್ರದರ್ಸ್' 'ಆ ದಿನಗಳ' ಗೂಂಡಾಗಿರಿ ಮುಂದುವರಿಕೆ: ವಿಡಿಯೋ ಬಿಡುಗಡೆ ಮಾಡಿದ BJP

ರೈತನಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ವಿರುದ್ದ ಮತ್ತೆ ಬಿಜೆಪಿ ಕಿಡಿಕಾರಿದ್ದು, "ಗುಲಾಮಿ ಕೊತ್ವಾಲ್‌ ಗ್ಯಾಂಗ್‌" ಎಂದು ಆಕ್ರೋಶ ವ್ಯಕ್ತಪಡಿಸಿದೆ.

'ಕೊತ್ವಾಲ್‌ ಬ್ರದರ್ಸ್' 'ಆ ದಿನಗಳ' ಗೂಂಡಾಗಿರಿ ಮುಂದುವರಿಕೆ: ವಿಡಿಯೋ ಬಿಡುಗಡೆ ಮಾಡಿದ BJP
ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್
Published On :

ಬೆಂಗಳೂರು: ರೈತನಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ವಿರುದ್ದ ಮತ್ತೆ ಬಿಜೆಪಿ ಕಿಡಿಕಾರಿದ್ದು, "ಗುಲಾಮಿ ಕೊತ್ವಾಲ್‌ ಗ್ಯಾಂಗ್‌" ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕುಣಿಗಲ್ ತಾಲೂಕಿನ ರೈತ ಪ್ರೇಮ್ ಕುಮಾರ್ ಅವರನ್ನು ಹೆದರಿಸಿ ತಮಗೆ ಬೇಕಾದಂತೆ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಈ ಕುರಿತಂತೆ ರೈತ ಪ್ರೇಮ್ ಕುಮಾರ್ ಮಾತನಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ ಡಿಕೆ ಸೋದರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

'ತೋಟವನ್ನು ಸುಟ್ಟುವರು ನಾವು, ನಿನ್ನನ್ನೂ ಸುಟ್ಟು ಹಾಕುವುದು ಕಷ್ಟವೇ ಎಂದು ಧಮ್ಕಿ ಹಾಕಿ ಈಗ ಕುಣಿಗಲ್ ತಾಲೂಕಿನ ರೈತ ಪ್ರೇಮ್ ಕುಮಾರ್ ಅವರನ್ನು ಹೆದರಿಸಿ ತಮಗೆ ಬೇಕಾದಂತೆ ವಿಡಿಯೋ ಮಾಡಿಸಿಕೊಂಡಿದ್ದಾರೆ ಕೊತ್ವಾಲ್ ಬ್ರದರ್ಸ್. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಗಂಡೆದೆ ಇದ್ದರೆ ನೇರವಾಗಿ ಹೋರಾಡಿ. ಅದು ಬಿಟ್ಟು ಸೋಲುವ ಪುಕ್ಕಲತನದಲ್ಲಿ ಹೇಡಿಯಂತೆ ಪೊಲೀಸರನ್ನು ಬಳಸಿಕೊಂಡು ಅಮಾಯಕ ರೈತರನ್ನು ಬೆದರಿಸಬೇಡಿ.

ಅಧಿಕಾರವಿದೆ, ರೌಡಿಗಳ ಬಳಗವಿದೆ, ಹಣವಿದೆ ಎಂದು ಚುನಾವಣೆ ಗೆಲ್ಲಲು ಯಾವ ಮಟ್ಟಕ್ಕಾದರೂ ಇಳಿಯಲಿದ್ದೇವೆ ಎಂದು "ಗುಲಾಮಿ ಕೊತ್ವಾಲ್‌ ಗ್ಯಾಂಗ್‌" ತೋರಿಸಿಕೊಟ್ಟಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ, 'ಕಲೆಕ್ಷನ್‌ ಏಜೆಂಟ್‌ ರಣದೀಪ್ ಸುರ್ಜೇವಾಲಾ ಅವರ ಮಹಿಳೆಯ ಕುರಿತ ಅಶ್ಲೀಲ ಹೇಳಿಕೆಗೆ ಅವರನ್ನು ಚುನಾವಣಾ ಆಯೋಗ ಚುನಾವಣಾ ಪ್ರಚಾರದಿಂದ ಬ್ಯಾನ್ ಮಾಡಿದೆ. ಇಷ್ಟಾದರೂ ಕಾಂಗ್ರೆಸ್‌ ಮೌನವಾಗಿದೆ. ಇದುವರೆಗೂ ಕ್ಷಮೆ ಕೇಳಿಲ್ಲ.

ಪದೇ ಪದೆ ಕಾಂಗ್ರೆಸ್ಸಿಗರು ಮಹಿಳೆಯರನ್ನು ಅವಮಾನಿಸುತ್ತಿದ್ದರೂ, ಯುವರಾಜ ರಾಹುಲ್ ಗಾಂಧಿ ಅವರು ಕೈ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿರಲಿ, ಈ ಬಗ್ಗೆ ಮಾತೇ ಆಡುತ್ತಿಲ್ಲ. ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರೇ, ರಾಜ್ಯದಲ್ಲಿ ಭಾಷಣ ಮಾಡಲು ನಿಮಗೆ ಯಾವ ಯೋಗ್ಯತೆ ಇದೆ?

ನಾಡಿನ ಸ್ವಾಭಿಮಾನಿ ಮಹಿಳೆಯರು ನಿಮ್ಮನ್ನು ಕೇಳುತ್ತಿದ್ದಾರೆ ಉತ್ತರಿಸಿ. ಸುರ್ಜೇವಾಲಾ ಅವರ ಹೇಳಿಕೆಯನ್ನು ನೀವು ಬೆಂಬಲಿಸುತ್ತಿರೋ? ಸ್ತ್ರೀಯನ್ನು ಕೀಳಾಗಿ ಕಾಣುವುದೇ ಕಾಂಗ್ರೆಸ್ಸಿನ ಗ್ಯಾರಂಟಿಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.