'ಗ್ರಾಹಕರ ಮೇಲೆ ಹೊರೆ': ಸಿನಿಮಾ ಟಿಕೆಟ್‌ಗಳ ಮೇಲಿನ ಶೇ 2ರಷ್ಟು ಸೆಸ್ ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರಕ್ಕೆ MAI ಆಗ್ರಹ
ಎಲ್ಲ ಪರೋಕ್ಷ ತೆರಿಗೆಗಳನ್ನು ಒಂದೇ ವ್ಯವಸ್ಥೆಯಡಿ ತರಲು ಮತ್ತು ಉತ್ಪಾದನೆ ಅಥವಾ ಮಾರಾಟದ ಪ್ರತಿ ಹಂತದಲ್ಲೂ 'ತೆರಿಗೆಯ ಮೇಲೆ ತೆರಿಗೆ' ಪಾವತಿಸುವುದನ್ನು ತಡೆಯಲು ಜಿಎಸ್‌ಟಿ (GST)ಯನ್ನು ಜಾರಿಗೆ ತರಲಾಯಿತು.

ಬೆಂಗಳೂರು: ಸೆಪ್ಟೆಂಬರ್ 30 ರಿಂದ ರಾಜ್ಯದಲ್ಲಿನ ಸಿನಿಮಾ ಟಿಕೆಟ್‌ಗಳ ಮೇಲೆ ಗರಿಷ್ಠ ಶೇ 2 ರಷ್ಟು ಹೆಚ್ಚುವರಿ ಸೆಸ್ ವಿಧಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ 'ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ' (MAI) ಗುರುವಾರ ಕಳವಳ ವ್ಯಕ್ತಪಡಿಸಿದೆ.
ಚಿತ್ರಮಂದಿರಗಳಲ್ಲಿನ ಮನರಂಜನೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮತ್ತು ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಆಕರ್ಷಿಸಲು ಉದ್ಯಮವು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಸಿನಿಮಾ ಟಿಕೆಟ್‌ಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ ಗ್ರಾಹಕರಿಗೆ ಸಿನಿಮಾ ವೀಕ್ಷಣೆಯ ವೆಚ್ಚ ನೇರವಾಗಿ ಹೆಚ್ಚಾಗಲಿದೆ ಎಂದು ತನ್ನ ಹೇಳಿಕೆಯಲ್ಲಿ MAI ಆತಂಕ ವ್ಯಕ್ತಪಡಿಸಿದೆ.
'ಸರ್ಕಾರ ತೆರಿಗೆ ತರ್ಕಬದ್ಧಗೊಳಿಸುವಿಕೆ ಮತ್ತು ಸುಲಭವಾಗಿ ವ್ಯಾಪಾರ ನಡೆಸುವ ವಾತಾವರಣವನ್ನು ಕಲ್ಪಿಸುವತ್ತ ಗಮನಹರಿಸುತ್ತಿರುವ ಈ ಸಮಯದಲ್ಲಿ, ಸಿನಿಮಾ ಟಿಕೆಟ್‌ಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವುದು ಪ್ರತಿಕೂಲ ಪರಿಣಾಮ ಬೀರುತ್ತದೆ. ಅದು ಅಂತಿಮವಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಉಂಟುಮಾಡುತ್ತದೆ. ಸಿನಿಮಾ ಇದೀಗ ಲಕ್ಷಾಂತರ ಕುಟುಂಬಗಳು ಮತ್ತು ಯುವಜನರು ಆನಂದಿಸುವ ಸಾಮೂಹಿಕ ಮನರಂಜನಾ ಮಾಧ್ಯಮವಾಗಿದ್ದು, ಪ್ರತಿಯೊಂದು ಹೆಚ್ಚುವರಿ ತೆರಿಗೆಯೂ ಈ ಅನುಭವವನ್ನು ದುಬಾರಿಯಾಗಿಸುತ್ತದೆ' ಎಂದು MAI ಅಧ್ಯಕ್ಷ ಕಮಲ್ ಗಿಯಾನ್‌ಚಂದಾನಿ ಹೇಳಿದ್ದಾರೆ.
ಪ್ರಸ್ತಾವಿತ ಸೆಸ್ ಪರೋಕ್ಷ ತೆರಿಗೆಗಳ ಮೇಲಿನ ಪರಿಣಾಮವನ್ನು ಹೋಗಲಾಡಿಸುವ ಜಿಎಸ್‌ಟಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ; ವಾಸ್ತವವಾಗಿ, ಸರಕು ಮತ್ತು ಸೇವಾ ತೆರಿಗೆಯನ್ನು (GST) ಜಾರಿಗೆ ತರುವ ಹಿಂದಿನ ಮೂಲಭೂತ ಉದ್ದೇಶಗಳಲ್ಲಿ ಇದೂ ಒಂದಾಗಿತ್ತು ಎಂದು ಅವರು ಹೇಳಿದರು.
ಎಲ್ಲ ಪರೋಕ್ಷ ತೆರಿಗೆಗಳನ್ನು ಒಂದೇ ವ್ಯವಸ್ಥೆಯಡಿ ತರಲು ಮತ್ತು ಉತ್ಪಾದನೆ ಅಥವಾ ಮಾರಾಟದ ಪ್ರತಿ ಹಂತದಲ್ಲೂ 'ತೆರಿಗೆಯ ಮೇಲೆ ತೆರಿಗೆ' ಪಾವತಿಸುವುದನ್ನು ತಡೆಯಲು ಜಿಎಸ್‌ಟಿ (GST)ಯನ್ನು ಜಾರಿಗೆ ತರಲಾಯಿತು.
'ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟಿರುವ ವಹಿವಾಟಿನ ಮೇಲೆ ಹೆಚ್ಚುವರಿ ಸೆಸ್ ವಿಧಿಸುವುದರಿಂದ, ಜಿಎಸ್‌ಟಿ ವ್ಯವಸ್ಥೆಯು ನಿರ್ಮೂಲನೆ ಮಾಡಲು ಉದ್ದೇಶಿಸಿದ್ದ 'ತೆರಿಗೆಯ ಮೇಲೆ ತೆರಿಗೆ' (tax-on-tax) ಬೀರುವ ಪರಿಣಾಮವೇ ಉಂಟಾಗುವ ಅಪಾಯವಿದೆ. ಬದಲಾಗಿ, ತೆರಿಗೆ ವ್ಯವಸ್ಥೆಯು ಗ್ರಾಹಕರು ಮತ್ತು ಉದ್ಯಮಗಳಿಗೆ ಹೆಚ್ಚಿನ ಸರಳತೆ, ಪಾರದರ್ಶಕತೆ ಮತ್ತು ಮುನ್ಸೂಚನೆ ನೀಡುವ ದಿಕ್ಕಿನಲ್ಲಿ ಸಾಗಬೇಕು ಎಂದು MAI ಅಭಿಪ್ರಾಯಪಡುತ್ತದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೃಜನಶೀಲ ಸಮುದಾಯದ ಕಲ್ಯಾಣವನ್ನು ಬೆಂಬಲಿಸುವ ಹಾಗೂ ಅದೇ ಸಮಯದಲ್ಲಿ ಗ್ರಾಹಕರಿಗೆ ಕೈಗೆಟುಕುವ ದರ ಮತ್ತು ಚಿತ್ರ ಪ್ರದರ್ಶನ ವಲಯದ ದೀರ್ಘಕಾಲೀನ ಬೆಳವಣಿಗೆಯನ್ನು ರಕ್ಷಿಸುವಂತಹ ಪರಿಹಾರವನ್ನು ಕಂಡುಕೊಳ್ಳಲು, ಕರ್ನಾಟಕ ಸರ್ಕಾರ ಮತ್ತು ಎಲ್ಲ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಬದ್ಧವಾಗಿರುವುದಾಗಿ MAI ತಿಳಿಸಿದೆ.
ರಾಜ್ಯದಲ್ಲಿನ ಸಿನಿಮಾ ಟಿಕೆಟ್‌ಗಳ ಮೇಲಿನ ಸದ್ಯದ ಸೆಸ್‌ನ ವಿವರಗಳನ್ನು ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



