'ಪದೇ ಪದೇ ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನ ವಿಪಕ್ಷ ನಾಯಕ ಮಾಡುತ್ತಾರೆ ಅಂದುಕೊಂಡಿದ್ದೀರಾ?'
ವಿರೋಧ ಪಕ್ಷದ ನಾಯಕನಿಲ್ಲದೇ ವಿಧಾಸಭೆ ಅಧಿವೇಶನ ನಡೆಯುತ್ತಿದ್ದು, ಇದಕ್ಕೆ ಮಾತಿನಲ್ಲೇ ಆಡಳಿತರೂಢ ಕಾಂಗ್ರೆಸ್ ನಾಯಕರು, ಬಿಜೆಪಿ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.

ಬೆಂಗಳೂರು: ವಿರೋಧ ಪಕ್ಷದ ನಾಯಕನಿಲ್ಲದೇ ವಿಧಾಸಭೆ ಅಧಿವೇಶನ ನಡೆಯುತ್ತಿದ್ದು, ಇದಕ್ಕೆ ಮಾತಿನಲ್ಲೇ ಆಡಳಿತರೂಢ ಕಾಂಗ್ರೆಸ್ ನಾಯಕರು, ಬಿಜೆಪಿ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.
ಅದರಂತೆ ಇಂದು ಸದನದಲ್ಲಿ ಪದೇ ಪದೇ ಎದ್ದೆದ್ದು ಮಾತನಾಡುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ನಿಮ್ಮನ್ನು ವಿಪಕ್ಷ ನಾಯಕನಾಗಿ ಮಾಡುತ್ತಾರೆ ಅಂದುಕೊಂಡಿದ್ದೀರಾ ಎಂದು ಕಾಲೆಳೆದರು.
ನಿಲುವಳಿ ಪ್ರಸ್ತಾವ ಮಂಡನೆ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವೇಳೆ ಮಧ್ಯೆ ಪ್ರವೇಶದ ಸಿಎಂ ಸಿದ್ದರಾಮಯ್ಯ, ನಿಮ್ಮನ್ನು ವಿಪಕ್ಷ ನಾಯಕರಾಗಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಇಲ್ಲಿ ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನು ವಿಪಕ್ಷ ನಾಯಕ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೀರಾ? ಎಂದು ಟಾಂಗ್ ಕೊಟ್ಟರು.
ಸದನ ಆರಂಭವಾಗಿ 3 ದಿನ ಆದರೂ ವಿಪಕ್ಷ ನಾಯಕ ಆಯ್ಕೆಯಾಗಿಲ್ಲ. ಇಲ್ಲಿ ಬಂದು ಬುರುಡೆ ಹೊಡೆಯುತ್ತಿದ್ದೀರಿ. ಅಶೋಕ್ ಮಾತಾಡುವುದು ನೋಡಿದರೆ ಮಹಿಳೆಯರಿಗೆ ಫ್ರೀ ಕೊಟ್ಟಿರುವುದನ್ನೇ ವಿರೋಧಿಸುತ್ತಿರುವಂತೆ ಕಾಣುತ್ತಿದೆ ಎಂದು ಶಾಸಕ ಅಶೋಕ್ಗೆ ಕಿಚಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


