ರಾಜಕೀಯ

ಪಾಟೀಲ್ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆ ಎದೆಗೆ ಗುಂಡು: ಒಕ್ಕಲಿಗರ ಮುಗಿಸುವ ಸೂಚನೆಯೇ ಕಮಂಗಿ ಕಾಂಗ್ರೆಸ್ ನವರೇ?

ಎಂಬಿ ಪಾಟೀಲರ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆ ಎದೆಗೆ ಗುಂಡಿಟ್ಟ ಸಿದ್ದರಾಮಯ್ಯ ಒಕ್ಕಲಿಗರನ್ನು ಮುಗಿಸಲು ಹೊರಟಿರುವ ಸೂಚನೆಯೇ ಕಮಂಗಿ ಕಾಂಗ್ರೆಸ್ ನವರೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಪಾಟೀಲ್ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆ ಎದೆಗೆ ಗುಂಡು: ಒಕ್ಕಲಿಗರ ಮುಗಿಸುವ ಸೂಚನೆಯೇ ಕಮಂಗಿ ಕಾಂಗ್ರೆಸ್ ನವರೇ?
ಡಿಕೆಶಿ, ಎಂಬಿ ಪಾಟೀಲ್ ಮತ್ತು ಸಿದ್ದರಾಮಯ್ಯ
Published On :

ಮೈಸೂರು: ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಹೆಚ್.ಡಿ. ದೇವೇಗೌಡರನ್ನ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ ಅದು ನನಗೆ ಬೇಡ ಸರ್ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಎಂಬಿ ಪಾಟೀಲರ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆ ಎದೆಗೆ ಗುಂಡಿಟ್ಟ ಸಿದ್ದರಾಮಯ್ಯ ಒಕ್ಕಲಿಗರನ್ನು ಮುಗಿಸಲು ಹೊರಟಿರುವ ಸೂಚನೆಯೇ ಕಮಂಗಿ ಕಾಂಗ್ರೆಸ್ ನವರೇ  ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನನ್ನು ಎಳಸು ಎಂದ್ರೂ ಬೇಸರವಿಲ್ಲ, ನನ್ನನ್ನ ಚೈಲ್ಡ್ ಅಂತಾನೆ ಕರೆಯಿರಿ ಬೇಜಾರು ಇಲ್ಲ, ಆದರೆ ರಾಜ್ಯದಲ್ಲಿ ಸಂಪನ್ಮೂಲ ಕ್ರೋಢಿಕರಣ ಮಾಡುವುದು ಹೇಗೆ ತಿಳಿಸಿ? ಪ್ರತಾಪ್ ಸಿಂಹ ಹರಿಹಾಯ್ದರು.

ಅಕ್ಕಿ ಕೊಡುವ ಘೋಷಣೆ ಮಾಡುವ ಮುನ್ನ ಮೋದಿ ಜಿ ಅವರನ್ನ ಕೇಳಿದ್ರಾ?. ಕಾಂಗ್ರೆಸ್ ಅಧಿಕಾರಕ್ಕೆ ತರಲು ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಡಿಕೆ ವಿರುದ್ಧ ಎಂ.ಬಿ. ಪಾಟೀಲ್ ರನ್ನ ಎತ್ತಿ ಕಟ್ಟಿದ್ದೀರಿ. ಇದನ್ನೆಲ್ಲಾ ಮೈಚುರಿಟಿ ಎನ್ನುವುದಾದ್ರೆ ಇದ್ಯಾವ್ಯೂದು ನಮಗೆ ಬೇಡ ಸರ್ ಎಂದು ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಅವರಿಗೆ ಕುಟುಕಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನ ಪ್ರತಾಪ್ ಸಿಂಹ ಹಾಡಿ ಹೊಗಳಿದ್ದಾರೆ. ಡಿಸೈನ್‌ಬಾಕ್ಸ್ ಏಜೆನ್ಸಿ ಮೂಲಕ ಗ್ಯಾರಂಟಿ ಯೋಜನೆ ರೂಪಿಸಿದವರು ಡಿ.ಕೆ.ಶಿವಕುಮಾರ್‌, ಡಿಕೆಶಿ ಒಬ್ಬ ಫೈಟರ್. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆಶಿ ಅವರ ಹೋರಾಟ ಪ್ರಮುಖ ಕಾರಣವಾಗಿದೆ. ಅವರು ನಮ್ಮ ಎದುರಾಳಿ ಇರಬಹುದು. ನಾನು ರಾಜಕೀಯ ಕಾರಣಕ್ಕೆ ಈ ರೀತಿ ಹೇಳುತ್ತಿಲ್ಲ. ಡಿಕೆಶಿ ಅವರು ಮುಖ್ಯಮಂತ್ರಿ ಆಗಬೇಕಿತ್ತು ಅಂತ ಹೇಳಿದ್ದಾರೆ.

ಸೀನಿಯರ್ ರಾಜಕಾರಣಿ ಆಗಿರುವ ನೀವು ಜಿ ಪರಮೇಶ್ವರ್‌ರನ್ನು ಮುಗಿಸಿ ಸಿಎಂ ಆದರಲ್ಲ. ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ. ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಹೆಚ್ ಡಿ ದೇವೇಗೌಡರನ್ನ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ ಅದು ನನಗೆ ಬೇಡ. ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯ ರೂಪಿಸಲು ಮುಂದಾಗುವುದು ಪ್ರಬುದ್ಧತೆಯಾದರೆ ಅಂತಹ ಪ್ರಬುದ್ಧತೆ ನನಗೆ ಬೇಡ ಎಂದು ಸಿಂಹ ಕಿಡಿಕಾರಿದ್ದಾರೆ. ವಿಶ್ವದ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ಗ್ಯಾರಂಟಿಗೆ ಬೇಕಾದ 59 ಸಾವಿರ ಕೋಟಿ ಹಣ ಎಲ್ಲಿಂದ ತರುತ್ತೀರಾ ಹೇಳಿ ಎಂದು  ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.