ರಾಜಕೀಯ

ಶಿವಾಜಿನಗರದ 'ಗೂಂಡಾರಾಜ್' ಇಮೇಜ್ ಬದಲಿಸುವುದೇ ನನ್ನ ಪ್ರಮುಖ ಉದ್ದೇಶ: ರಿಜ್ವಾನ್ ಅರ್ಷದ್

ಬಿಜೆಪಿ ಭದ್ರಕೋಟೆಯಾಗಿರುವ ಸಂಪಂಗಿರಾಮನಗರದ ಎರಡು ಬೂತ್‌ಗಳಲ್ಲಿ ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಶಿವಾಜಿನಗರದ ಇಮೇಜ್ ಬದಲಾವಣೆಯೇ ನನ್ನ ಮೊದಲ ಆದ್ಯತೆ ಎಂದು ದೇವಾಂಗ ಸಮುದಾಯದವರಿಗೆ ಭರವಸೆ ನೀಡಿದರು.

ಶಿವಾಜಿನಗರದ 'ಗೂಂಡಾರಾಜ್' ಇಮೇಜ್ ಬದಲಿಸುವುದೇ ನನ್ನ ಪ್ರಮುಖ ಉದ್ದೇಶ: ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್
Published On :

ಬೆಂಗಳೂರು: ಬಿಜೆಪಿ ಭದ್ರಕೋಟೆಯಾಗಿರುವ ಸಂಪಂಗಿರಾಮನಗರದ ಎರಡು ಬೂತ್‌ಗಳಲ್ಲಿ ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಶಿವಾಜಿನಗರದ ಇಮೇಜ್ ಬದಲಾವಣೆಯೇ ನನ್ನ ಮೊದಲ ಆದ್ಯತೆ ಎಂದು ದೇವಾಂಗ ಸಮುದಾಯದವರಿಗೆ ಭರವಸೆ ನೀಡಿದರು.

ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯೊಂದಿಗೆ ಶಿವಾಜಿನಗರವನ್ನು ಜನರಿಗೆ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ನೀಡಲು ನಾನು ಬಯಸುತ್ತೇನೆ. ಮೂಲ ಸೌಕರ್ಯಗಳ ಸಮಸ್ಯೆಯೂ ಇದೆ, ಅವುಗಳನ್ನು ಪರಿಹರಿಸಬೇಕಾಗಿದೆ ಎಂದು ಅವರು ಹೇಳಿದರು.

ಪ್ರಚಾರದ ವೇಳೆ  ತಮ್ಮ ಬೆಂಬಲಿಗರೊಂದಿಗೆ ಧರ್ಮರಾಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಶಿವಾಜಿನಗರದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ನಾನು ಬಯಸುತ್ತೇನೆ. ಶಿಕ್ಷಣಕ್ಕಾಗಿ ಕಳೆದ ಮೂರು ವರ್ಷಗಳಿಂದ ಪ್ರಮುಖ ಕೆಲಸಗಳನ್ನು ಮಾಡಲಾಗಿದೆ.

ನಾವು ಶಾಸಕರಾಗಿ ಕೆಲಸ ಮಾಡುವುದನ್ನು ಮುಂದುವರಿಸಿದರೆ, ಉತ್ತಮ ಶಿಕ್ಷಣ, ಮೂಲಸೌಕರ್ಯ ಮತ್ತು ಗುಣಮಟ್ಟದ ಜೀವನ ಸಿಗಲಿದೆ. ಗೂಂಡಾರಾಜ್ ಮತ್ತು ಸಮಾಜವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ, ಇದು ಕ್ಷೇತ್ರದ ಘನತೆಗೆ ಮಸಿ ಬಳಿಯುತ್ತದೆ ಎಂದು ಅವರು ಹೇಳಿದರು.

ಹಲಸೂರು ಕೆರೆ, ಸೋಮೇಶ್ವರ ದೇವಸ್ಥಾನ, ಸೇಂಟ್ ಮೇರಿಸ್ ಬೆಸಿಲಿಕಾ, ದಂಡು ಮಾರಿಯಮ್ಮ ದೇವಸ್ಥಾನ ಮತ್ತು ಐಕಾನಿಕ್ ರಸೆಲ್ ಮಾರುಕಟ್ಟೆ ಹೊಂದಿರುವ ಕ್ಷೇತ್ರದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ತಮಿಳಿಗರು, ತೆಲುಗು ಮತ್ತು ಕನ್ನಡ ಭಾಷಿಕರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.