ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ: ಮೆಚ್ಚಿನ ನಾಯಕನ ಜೊತೆ ಬೆಂಬಲಿಗರ ದಣಿವರಿಯದ ಯಾತ್ರೆ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೇರಳದಿಂದ ಸುಮಾರು 117 ಪಾದಯಾತ್ರಿಗಳು ಆಗಮಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕೇರಳದಿಂದ ಸುಮಾರು 117 ಪಾದಯಾತ್ರಿಗಳು ಆಗಮಿಸಿದ್ದಾರೆ.
ಕಾಶ್ಮೀರದಿಂದ- ಕನ್ಯಾಕುಮಾರಿ ವರೆಗಿನ 3500 ಕಿಮೀ ದೂರದ ಪಾದಯಾತ್ರೆ ಸುಮಾರು 150 ದಿನಗಳ ಕಾಲ ನಡೆಯಲಿದೆ, ಇದೊಂದು ಕಠಿಣ ಪಾದಯಾತ್ರೆಯಾಗಿದ್ದು ದಿಗ್ವಿಜಯ್ ಸಿಂಗ್ ಭವಿಷ್ಯ ನುಡಿದಂತೆ ಪಾದಯಾತ್ರೆ ನಂತರ ರಾಹುಲ್ ಗಾಂಧಿಹೊಸ ಅವತಾರದಲ್ಲಿ ಬರಲಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಯಾತ್ರಿಗಳು ವಿಶಿಷ್ಟ ಅನುಭವ ಪಡೆಯುತ್ತಿದ್ದಾರೆ. 35 ದಿನಗಳಲ್ಲಿ 800 ಕಿಮೀ ಕ್ರಮಿಸಿರುವ ಯಾತ್ರಿಗಳು ಕುಟುಂಬಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ, ಆದರೆ ಯಾರು ಯಾತ್ರೆ ಕೈ ಬಿಡಲು ಸಿದ್ಧರಿಲ್ಲ.
ಮುಂಜಾನೆಯಿಂದ ಮುಸ್ಸಂಜೆಯವರೆಗೆ ರಾಹುಲ್ ಗಾಂಧಿ ಜೊತೆ ಇರುವ 60 ಯಾತ್ರಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕಂಟೈನರ್ಗಳಲ್ಲಿ ತಲಾ 12 ಹಾಸಿಗೆಗಳನ್ನು ಟ್ರಕ್ಗಳಲ್ಲಿ ಜೋಡಿಸಲಾಗಿದೆ. ವಿವಿಧ ರಾಜ್ಯಗಳ ಯಾತ್ರಿಗಳನ್ನು ಒಟ್ಟಿಗೆ ಸೇರಿಸಲಾಗುತ್ತದೆ, ಅವರು ಊಟದ ಸಮಯದಲ್ಲಿ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ 'ರಾಗಾ' ಪಾದಯಾತ್ರೆಯದ್ದೇ ಅಬ್ಬರ: ವಾಟ್ಸಾಪ್ ಡಿಪಿಯಿಂದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಫೋಟೋ ಟ್ರೆಂಡ್!
ನಾವು ಮನೆಯಿಂದ ದೂರವಾಗಿದ್ದೇವೆ ಎಂದು ನಮಗೆ ಅನಿಸುವುದಿಲ್ಲ ಮತ್ತು ಮನೆ ಕೆಲಸದ ಪ್ರಶ್ನೆಯೇ ಇಲ್ಲ. ನಾವು ಇಲ್ಲಿ ಕುಟುಂಬದವರಾಗಿದ್ದೇವೆ ಎಂದು ರಾಜಸ್ಥಾನದ ಸೀತಾರಾಮ್ ಲಾಂಬಾ ಹೇಳಿದರು.
ಹಳ್ಳಿಯೊಂದರ ‘ಸರ್ಪಂಚ್’ ಆಗಿರುವ ಪಂಜಾಬ್ನ ಅಮೃತಸರದ ಮನೋಜ್ ಸಿಂಗ್ ಅವರಿಗೆ ಇದು ‘ಭಾರತ ದರ್ಶನ ಯಾತ್ರೆ’ ಎಂದು ಅನಿಸಿದೆ. ಕೇರಳದ ಕೆ ಟಿ ಬಿನಿ, ಸಹ ಪ್ರಯಾಣಿಕರಾಗಿದ್ದಾರೆ ಇಬ್ಬರೂ ಉತ್ತಮ ಬಾಂಧವ್ಯವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ನಾನು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದೇನೆ ಎಂಬ ಭಾವನೆ ಉಂಟಾಗಿದೆ ಎಂದು ಮಣಿಪುರದ ಪಕ್ಷದ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಕಿಮ್ ಹೇಳಿದ್ದಾರೆ.
ಯಾತ್ರಿಗಳು ಮಧ್ಯಂತರದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಸಂವಹನ ನಡೆಸಲು ಅವಕಾಶ ಸಿಗುತ್ತಿದೆ. ವಿವಿಧ ವಿಷಯಗಳ ಬಗ್ಗೆ, ವಿಶೇಷವಾಗಿ ಮಹಾತ್ಮ ಗಾಂಧಿಯವರ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಭಾರತೀಯ ಯುವ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ರಾಹುಲ್ ರಾವ್ ಹೇಳಿದ್ದಾರೆ. ಒಂದು ದಶಕದ ಹಿಂದೆ ರಾಹುಲ್ ಗಾಂಧಿ ಹರಿಯಾಣ ಯುವ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು.
ರಾಹುಲ್ ಗಾಂಧಿ ಬಳಿ ಇದೇ ರೀತಿಯ ಕಂಟೈನರ್ ಇದೆ ಆದರೆ ನಾಯಕರನ್ನು ಭೇಟಿ ಮಾಡಲು ಸೌಲಭ್ಯವಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ಕಾಂಗ್ರೆಸ್ನ ಪ್ರಮುಖ ನಾಯಕರು ಕಂಟೈನರ್ಗಳಲ್ಲಿ ಮಲಗುತ್ತಾರೆ ಮತ್ತು ಯಾತ್ರಿಗಳಿಗೆ ಅವರೊಂದಿಗೆ ಸಂವಹನ ನಡೆಸಲು ಅವಕಾಶವಿದೆ.
ಯಾತ್ರಿಗಳು ಮುಂಜಾನೆ 4 ಗಂಟೆಗೆ ಏಳುತ್ತಾರೆ, ತಣ್ಣೀರಿನ ಸ್ನಾನ ಮಾಡಿ ಮತ್ತು ದ್ವಜ ವಂದನೆ, ರಾಷ್ಟ್ರಗೀತೆ ಮತ್ತು ವಂದೇ ಮಾತರಂಗೆ ಸಿದ್ಧರಾಗುತ್ತಾರೆ, ನಂತರ ಬೆಳಿಗ್ಗೆ 6.30 ರ ಸುಮಾರಿಗೆ ರಾಹುಲ್ ಅವರೊಂದಿಗೆ ರಸ್ತೆಗೆ ಇಳಿಯುತ್ತಾರೆ. ರಾತ್ರಿ 10.30ರ ಸುಮಾರಿಗೆ ಅವರು ಮಲಗುತ್ತಾರೆ ಎಂದು ವಿವರ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


