ರಾಜಕೀಯ

ದೋ ನಂಬರ್ ದಂಧೆ ಮಾಡುವವರೇ ಅದರ್ಶಪುರುಷರು: ಕ್ರಿಮಿನಲ್‌ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ!

ದೋ ನಂಬರ್ ದಂಧೆ ಮಾಡುವವರೇ ಬಿಜೆಪಿಗೆ ಅದರ್ಶಪುರುಷರು. ಕ್ರಿಮಿನಲ್‌ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ ಲಜ್ಜೆಗೇಡಿತನದ ಪರಮಾವಧಿಯನ್ನು ತಲುಪಿದೆ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.

ದೋ ನಂಬರ್ ದಂಧೆ ಮಾಡುವವರೇ ಅದರ್ಶಪುರುಷರು: ಕ್ರಿಮಿನಲ್‌ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ!
ಬಿಜೆಪಿ ನಾಯಕರ ಜೊತೆ ರೌಡಿ ಸುನೀಲ
Published On :

ಬೆಂಗಳೂರು:  ರೌಡಿ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ನಡೆದಿದೆ. ದೋ ನಂಬರ್ ದಂಧೆ ಮಾಡುವವರೇ ಅದರ್ಶಪುರುಷರು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಗಡಿಪಾರು ಆಗಿದ್ದ ವ್ಯಕ್ತಿಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ಪುಡಿ ರೌಡಿಗಳೆಲ್ಲ ದೇವರುಗಳಂತೆ ಕಾಣುವುದು ಸಹಜ ವಿಚಾರವೇ.. ದೋ ನಂಬರ್ ದಂಧೆ ಮಾಡುವವರೇ ಬಿಜೆಪಿಗೆ ಅದರ್ಶಪುರುಷರು. ಕ್ರಿಮಿನಲ್‌ಗಳನ್ನು ಸುಭಗರಂತೆ ಸಮರ್ಥಿಸುತ್ತಿರುವ ಬಿಜೆಪಿ ಲಜ್ಜೆಗೇಡಿತನದ ಪರಮಾವಧಿಯನ್ನು ತಲುಪಿದೆ ಎಂದು ಕರ್ನಾಟಕ ಕಾಂಗ್ರೆಸ್  ವಾಗ್ಧಾಳಿ ನಡೆಸಿದೆ.

ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಬಿಜೆಪಿ ಕಸಿಯುತ್ತಿದೆ, ಪೊಲೀಸರೇ ರೌಡಿಗಳಿಗೆ ಸೆಲ್ಯೂಟ್ ಹೊಡೆಯುವ ಪರಿಸ್ಥಿತಿ ನಿರ್ಮಿಸುತ್ತಿದೆ. ಮೊನ್ನೆಯಷ್ಟೇ ಸೈಲೆಂಟ್ ಸುನಿಲ್ ಎಂಬ ರೌಡಿಯನ್ನು ಹುಡುಕಿ ರೈಡ್ ಮಾಡಿದ್ದ ಪೊಲೀಸರೇ ಈಗ ಆತನ ಎದುರು ಸೈಲೆಂಟ್ ಆಗಿದ್ದಾರೆ. ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದೆ ಸರ್ಕಾರ? ಎಂದು ಪ್ರಶ್ನಿಸಿದೆ.

40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ತಯಾರಿ ನಡೆಸಿರುವಂತಿದೆ! ಬಿಜೆಪಿಯಲ್ಲಿ “ರೌಡಿ ಮೋರ್ಚಾ” ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ. ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ ಬಸವರಾಜ ಬೊಮ್ಮಾಯಿ ಅವರೇ? ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ? ಎಂದು ಕೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.