ರಾಜಕೀಯ

'ಚಾರ್ಲಿ'ಗೆ ಕಣ್ಣೀರು ಹಾಕುವ ಸಿಎಂಗೆ ರಾಜ್ಯದ ಜನತೆಗೆ ನೆರವಾಗುವ ಹೃದಯವಂತಿಕೆ ತೋರಲು ಕಷ್ಟವೇ?: ಕಾಂಗ್ರೆಸ್

ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಗ 5 ರೂ. ಮತ್ತು ಡೀಸೆಲ್ ಗೆ 3 ರೂಪಾಯಿ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

'ಚಾರ್ಲಿ'ಗೆ ಕಣ್ಣೀರು ಹಾಕುವ ಸಿಎಂಗೆ ರಾಜ್ಯದ ಜನತೆಗೆ ನೆರವಾಗುವ ಹೃದಯವಂತಿಕೆ ತೋರಲು ಕಷ್ಟವೇ?: ಕಾಂಗ್ರೆಸ್
ಕಾಂಗ್ರೆಸ್ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್ ಗ 5 ರೂ. ಮತ್ತು ಡೀಸೆಲ್ ಗೆ 3 ರೂಪಾಯಿ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಚಾರ್ಲಿ 777 ಸಿನಿಮಾ ವೀಕ್ಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಅಗಲಿದ ತಮ್ಮ  ಪ್ರೀತಿಯ ನಾಯಿಯನ್ನು  ನೆನೆದು ಭಾವುಕರಾಗಿದ್ದರು. ಇದಕ್ಕೆ ವ್ಯಂಗ್ಯವಾಡಿರುವ ಕಾಂಗ್ರೆಸ್, ಚಾರ್ಲಿಗೆ ಕಣ್ಣೀರು ಹಾಕುವ ತಮಗೆ ರಾಜ್ಯದ ಜನತೆಗೆ ನೆರವಾಗುವ ಕನಿಷ್ಠ ಹೃದಯ ವಂತಿಕೆ ತೋರಲು ಕಷ್ಟವೇ? ಎಂದು ಪ್ರಶ್ನಿಸಿದೆ. 

ಮಹಾರಾಷ್ಟ್ರದ ಬಿಜೆಪಿ ಬೆಂಬಲಿತ ಸರ್ಕಾರ ಇಂಧನ ತೆರಿಗೆ ಇಳಿಸಿದೆ ಎಂದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಎಂದು ಪ್ರಶ್ನೆ ಮಾಡಿದೆ.

ಪಿಎಸ್ ಐ ಹಗರಣ ಕೊಲೆಗಿಂತಲೂ ಮಿಗಿಲಾದದ್ದು, ಕೊಲೆಯಾದರೆ ಒಬ್ಬನ ಪ್ರಾಣ ಹೋಗುತ್ತದೆ. ಇಲ್ಲಿ 50,000 ಜನರು ತೊಂದರೆಗೆ ಸಿಲುಕಿದ್ದಾರೆ. ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ರಾಜ್ಯದ 50,000 ಯುವಕರ ಜೀವನವನ್ನು ರಾಜ್ಯ ಬಿಜೆಪಿ ಸರ್ಕಾರ ಕೊಲೆ ಮಾಡಿದೆ. ಈ ಕೊಲೆಗೆ ಅಂದಿನ ಗೃಹ ಸಚಿವರೇ ಹೊಣೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.