ಕಾಂಗ್ರೆಸ್ ನಿಂದ 'ಭಾರತ್ ಜೋಡೋ', ಬಿಜೆಪಿಯಿಂದ 'ಜನಸಂಕಲ್ಪ' ಯಾತ್ರೆ: ಕರ್ನಾಟಕದಲ್ಲಿ ಹೆಚ್ಚಿದ ರಾಜಕೀಯ ಕಿಚ್ಚು!
ರ್ನಾಟಕದಲ್ಲಿ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆಯ ಹೊತ್ತು. ಇದಕ್ಕೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿವೆ. ರಾಜಕೀಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆಯ ಹೊತ್ತು. ಇದಕ್ಕೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿವೆ. ರಾಜಕೀಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಅದಕ್ಕೆ ಕಾರಣ ಕಾಂಗ್ರೆಸ್ ನ ಭಾರತ್ ಜೋಡೋ ಮತ್ತು ಬಿಜೆಪಿಯ ಜನಸಂಕಲ್ಪ ಯಾತ್ರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಅಂತಿಮ ಹಂತಕ್ಕೆ ತಲುಪಿದೆ. ಹಳೆ ಮೈಸೂರು, ಮಂಡ್ಯ ಭಾಗ ಮುಗಿಸಿ ಈಗ ಕಲ್ಯಾಣ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ. ಯಾತ್ರೆಯ ಉದ್ದೇಶ ಮತ ಕೇಳುವುದಲ್ಲ, ಕಾರ್ಯಕರ್ತರನ್ನು ಹುರಿದುಂಬಿಸುವುದು, ನಾಯಕರಲ್ಲಿ ಒಗ್ಗಟ್ಟು ಮೂಡಿಸುವುದು ಮತ್ತು ಸಂಘಟನೆಯನ್ನು ಹುರುಪುಗೊಳಿಸುವುದು ಎಂದು ತೋರುತ್ತದೆ. ರಾಹುಲ್ ಗಾಂಧಿಯವರ ಚಿತ್ರಣವನ್ನು ಬಿಂಬಿಸಲು ಯಾತ್ರೆಯು ರಾಜ್ಯದಾದ್ಯಂತ ಸಂಚರಿಸುತ್ತಿದ್ದಂತೆ, ಪಕ್ಷದ ಕಾರ್ಯಕರ್ತರಿಂದ ಉತ್ಸಾಹಭರಿತ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ.
ಮಾರ್ಗದುದ್ದಕ್ಕೂ, ರಾಹುಲ್ ಗಾಂಧಿ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. 2023 ರ ಚುನಾವಣೆಯಲ್ಲಿ ಗೆಲ್ಲಲು ನಾಯಕರು ಪರಸ್ಪರರ ಶಕ್ತಿಯನ್ನು ಪೂರೈಸುವ ಮೂಲಕ ರಾಜ್ಯದಲ್ಲಿ ಪಕ್ಷವು ಒಂದು ಸುಸಂಘಟಿತ ಘಟಕವಾಗಿದೆ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ರಾಹುಲ್ ಮೋಡಿ ಮಾಡಿದ್ದಾರಾ ಎಂಬುದು ಟಿಕೆಟ್ ಹಂಚಿಕೆ ವೇಳೆ ಮಾತ್ರ ಗೊತ್ತಾಗಲಿದೆ.
ಹೀಗಿರುವಾಗ ವಿವಿಧ ಬಣಗಳು ಮತ್ತು ಮುಖಂಡರು, ವಿಶೇಷವಾಗಿ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷಿಗಳು ತಮ್ಮ ಪಾಳೆಯದ ಅನುಯಾಯಿಗಳಿಗೆ ಟಿಕೆಟ್ ಪಡೆಯಲು ಪ್ರಭಾವಗೊಳಿಸುವ ಸಾಧ್ಯತೆಯಿದೆ. ರಾಹುಲ್ ಮತ್ತು ಅವರ ಪಡೆ ಕರ್ನಾಟಕದಲ್ಲಿ ಭಾರತ್ ಜೋಡೋ ಪ್ರವಾಸ ಮುಗಿಸಿ ಹೋದ ನಂತರವೂ ಇಲ್ಲಿನ ನಾಯಕರು ಒಗ್ಗಟ್ಟಿನಿಂದ ಉಳಿದು ಆವೇಗವನ್ನು ಉಳಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಸದ್ಯಕ್ಕೆ, ಒಗ್ಗಟ್ಟಿನಿಂದ ಚುನಾವಣೆ ಎದುರಿಸುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿ ಕಂಡುಬರುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ 'ಯಾತ್ರೆ'ಗಳದ್ದೇ ಕಾರುಬಾರು; ಭಾರತ್ ಜೋಡೋ ದರ್ಬಾರು; ಡಿಸೆಂಬರ್ ನಲ್ಲಿ ಕಾಂಗ್ರೆಸ್ ಯಾತ್ರೆ ಶುರು!
ಸರ್ಕಾರದ ವಿರುದ್ಧದ ಆರೋಪಗಳ ಸುರಿಮಳೆಯಿಂದಾಗಿ ಸ್ವಲ್ಪ ಸಮಯದವರೆಗೆ ಹಿನ್ನಡೆಯಾಗಿರುವಂತೆ ಕಂಡುಬಂದ ಬಿಜೆಪಿ ಇದೀಗ ಪ್ರತಿಪಕ್ಷಗಳನ್ನು ಮೀರಿಸಲು ಉತ್ಸಾಹ ತೋರಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ಪ್ರವಾಸವನ್ನು ಪ್ರಾರಂಭಿಸಿದ್ದಾರೆ. ಪಕ್ಷದ "ಸಂಕಲ್ಪ ಯಾತ್ರೆ" ರಾಜ್ಯಾದ್ಯಂತ ವಿಧಾನಸಭಾ ಕ್ಷೇತ್ರಗಳನ್ನು ದಾಟಿ ವರ್ಷಾಂತ್ಯದವರೆಗೆ ನಡೆಯಲಿದೆ.
ಇಬ್ಬರು ಉನ್ನತ ಲಿಂಗಾಯತ ನಾಯಕರು -- ಬೊಮ್ಮಾಯಿ ಮತ್ತು ಯಡಿಯೂರಪ್ಪ - ರಾಜ್ಯ ಪ್ರವಾಸದಲ್ಲಿ ಒಟ್ಟಿಗೆ ಹೋಗುವುದು ಗಮನಾರ್ಹವಾಗಿದೆ. ಪ್ರಾಯಶಃ, ಪ್ರಬಲ ಲಿಂಗಾಯತ ಸಮುದಾಯದಲ್ಲಿ ತನ್ನ ಬೆಂಬಲದ ನೆಲೆಯನ್ನು ಮರುಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮೀಸಲಾತಿಯನ್ನು ಶೇಕಡಾ 15 ರಿಂದ ಶೇಕಡಾ 17 ಕ್ಕೆ ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇಕಡಾ 3 ರಿಂದ ಶೇಕಡಾ 7 ಕ್ಕೆ ಹೆಚ್ಚಿಸುವ ಸರ್ಕಾರದ ಹೆಚ್ಚಿನ ನಿರ್ಧಾರವನ್ನು ಬಿಜೆಪಿ ಮಾಡಲಿದೆ. ನಿರ್ಧಾರವನ್ನು ಜಾರಿಗೆ ತರಲು ಸಮಯ ಹಿಡಿಯಬಹುದಾದರೂ, ಈ ಘೋಷಣೆಯು ಸಮುದಾಯದಲ್ಲಿ ಪಕ್ಷದ ಇಮೇಜ್ ನ್ನು ಹೆಚ್ಚಿಸಿದೆ. ಕೇಂದ್ರ ಮತ್ತು ಉತ್ತರ ಭಾಗಗಳಲ್ಲಿ ಎಸ್‌ಟಿ ಸಮುದಾಯದ ಬೆಂಬಲ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸಚಿವ ಬಿ ಶ್ರೀರಾಮುಲು ಅವರಂತಹ ನಾಯಕರಿಗೆ ಬಲವನ್ನು ಸೇರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


