'ದಲಿತರ ಮನೆಯ ಊಟ' ಪ್ರಹಸನ, ಸಂಘ ಪರಿವಾರದ ಅಸಲಿ ಮನಸ್ಥಿತಿ ಅನಾವರಣ: ಕಾಂಗ್ರೆಸ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 'ದಲಿತರ ಮನೆಯ ಊಟ' ಪ್ರಹಸನದಲ್ಲಿ ಸಂಘಪರಿವಾರದ ಅಸಲಿ ಮನಸ್ಥಿತಿ ಅನಾವರಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ದಲಿತರ ಮನೆಯಲ್ಲಿ ಊಟದ ಹೆಸರಿನಲ್ಲಿ ಬ್ರಾಂಡೆಡ್ ನೀರು, ಟೀ ಪೌಡರ್ ತರಿಸುವ ಮೂಲಕ ಅವರಿಗೆ ಅವರಿಗೆ ಅವಮಾನಿಸಲಾಗಿದೆ. ಇದಕ್ಕಾಗಿಯೇ ಪೇ ಸಿಎಂ ದಲಿತರ ಮನೆಗೆ ಹೋದ್ರ ಎಂದು ಪ್ರಶ್ನಿಸಲಾಗಿದೆ.
ಬಿಜೆಪಿಗೆ ದಲಿತರ ಮನೆಯ ಊಟ ಅವಮಾನಕರವಾಗಿತ್ತು, ಈಗ ಅನುಮಾನಕರವಾಗಿದೆ. ಬಿಜೆಪಿಗೆ ದಲಿತರೆಂದರೆ ಅಷ್ಟೊಂದು ಅನುಮಾನವೇ? ಎಂದು ಕೇಳಿದೆ. ದಲಿತರ ಹಿತಬೇಡ, ಅವರ ಏಳಿಗೆ, ಸಮಾನತೆ, ಅಧಿಕಾರ, ದಲಿತರ ನಿಗಮಗಳಿಗೆ ಹಣ, ಶಿಕ್ಷಣ, ರಕ್ಷಣೆ, ವಿದ್ಯಾರ್ಥಿ ವೇತನ ಬೇಡ. ದಲಿತರ ಮತ ಮಾತ್ರ ಬೇಕೆ? ಎಂದು ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


