'ಇಟಲಿ ಕಾಂಗ್ರೆಸ್ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ, ಅದು ಚೀನಾ ಮತ್ತು ಪಾಕಿಸ್ತಾನದ ಎಂಜಲು ತಿಂದು ಬಾಲ ಅಲ್ಲಾಡಿಸುತ್ತೆ'
ದೇಶಕ್ಕಾಗಿ ಬಿಜೆಪಿ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಬೆಳಗಾವಿ: ದೇಶಕ್ಕಾಗಿ ಬಿಜೆಪಿ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಈಗಿರೋದು ಇಟಲಿ ಕಾಂಗ್ರೆಸ್. ಇಟಲಿ ಕಾಂಗ್ರೆಸ್ ನಾಯಿ ಭಾರತದ ಪರವಾಗಿ ಬೊಗಳುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಆ ಕಾಂಗ್ರೆಸ್ ಶಕೆ ಮುಗಿದು, ಈಗ ಇರೋದು ಇಟಲಿ ಕಾಂಗ್ರೆಸ್ ಎಂದು ವ್ಯಂಗ್ಯ ಮಾಡಿದರು. ಇಟಲಿ ಕಾಂಗ್ರೆಸ್ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ. ಅದು ಚೀನಾ ಮತ್ತು ಪಾಕ್ ಪರ ಬೊಗಳುತ್ತೆ. ಇಟಲಿ ಕಾಂಗ್ರೆಸ್ ಒಂದೂ ನಾಯಿಯೂ ಇದುವರೆಗೆ ಭಾರತ ಪರ ಬಾಲ ಅಲ್ಲಾಡಿಸಿಲ್ಲ ಹಾಗೂ ಬೊಗಳಿಲ್ಲ. ಭಾರತದ ರಕ್ಷಣೆ ಕೆಲಸ ಮಾಡಿಲ್ಲ. ಅದು ಚೀನಾ, ಪಾಕಿಸ್ತಾನದ ಎಂಜಲು ತಿಂದಿದೆ ಎಂದು ವಾಗ್ದಾಳಿ ನಡೆಸಿದರು.
ಪಾಕ್ ಪರ ಬಾಲ ಅಲ್ಲಾಡಿಸಿ ಬೊಗಳುತ್ತೆ. ಆ ನಾಯಿಯನ್ನು ಇವತ್ತು ನೀವು ಸಾಕಿದ್ದು. ಈಗಿರೋದು ನಾಯಿ ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ನಾಯಿ ಅಲ್ಲ. ಈಗ ಇರುವ ಇಟಲಿ ಕಾಂಗ್ರೆಸ್ ನಾಯಿ ಚೀನಾ, ಪಾಕ್ ಪರ ಬಾಲ ಅಲ್ಲಾಡಿಸುತ್ತಾ ಭಾರತ ಹಾಗೂ ಭಾರತೀಯ ಸೈನ್ಯದ ವಿರುದ್ಧ ಬೊಗಳುತ್ತೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಕಾಲಕಾಲಕ್ಕೆ ತಕ್ಕಂತೆ ಕಾಂಗ್ರೆಸ್ ಬದಲಾವಣೆ ಆಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸ್ ಬೇರೆ, ಈಗಿರುವ ಕಾಂಗ್ರೆಸ್ ಬೇರೆ. ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂದು ಹೇಳುತ್ತದೆ. ಸ್ವಾತಂತ್ರ್ಯ ಕೊಡುಗೆ ಕೊಟ್ಟಿರೋದು ಭಾರತ ಲೂಟಿ ಮಾಡೋದಕ್ಕಾ.? ಮಾಜಿ ಸ್ಪೀಕರ್ ರಮೇಶ ಕುಮಾರ್ ಹೇಳಿದಂತೆ ಕಾಂಗ್ರೆಸ್ ನಾಯಕರು ನಾಲ್ಕೈದು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಿಗಳಿಗೆ ಸ್ವತಂತ್ರ ಭಾರತದಲ್ಲಿ ಫೈವ್‌ಸ್ಟಾರ್ ಸೌಲಭ್ಯ ಸಿಗಬೇಕು ಅಂತಾ ಲೂಟಿ ಹೊಡೆದಿದ್ದೀರಾ ಎಂದು ಪ್ರಶ್ನೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


