ಕಮಿಷನ್ ರೂಪದಲ್ಲಿ ಹೆಣ್ಣು, ಹಣ; ಬಿಜೆಪಿ ಆಡಳಿತದಲ್ಲಿ ‘ಮಂಚ’ವೂ ಲಂಚದ ರೂಪ ಪಡೆದಿದೆ: ಕಾಂಗ್ರೆಸ್
ರಾಜ್ಯದ ಬಿಜೆಪಿ ಸರ್ಕಾರ ಲಂಚ-ಮಂಚದ ಸರ್ಕಾರ ಎಂದು ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ಕಟುವಾಗಿ ಟೀಕೆ ಮಾಡಿದೆ.

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಲಂಚ-ಮಂಚದ ಸರ್ಕಾರ ಎಂದು ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ಕಟುವಾಗಿ ಟೀಕೆ ಮಾಡಿದೆ.
ಈ ಕುರಿತು @BJP4Karnataka ಎಂಬ ಟ್ಯಾಗಿನೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ ಕಮಿಷನ್ ಭ್ರಷ್ಟಾಚಾರದ ವಿರಾಟ್ ರೂಪದಲ್ಲಿ ಹೆಣ್ಣು, ಹಣ, ಹೆಂಡಗಳೂ ಸ್ಥಾನ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಶಾಸಕರ ಖರೀದಿ, ಸಿಡಿಗಳ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿಯದ್ದು “ಲಂಚ-ಮಂಚದ ಸರ್ಕಾರ” ಎನ್ನವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಆಡಳಿತದಲ್ಲಿ ‘ಮಂಚ’ವೂ ಲಂಚದ ರೂಪ ಪಡೆದಿದೆ ಎಂದು ಆಪಾದಿಸಿದೆ.
ಗುತ್ತಿಗೆದಾರರಷ್ಟೇ ಅಲ್ಲ, ಬಡ ಪೌರ ಕಾರ್ಮಿಕರೂ ಸಹ ರಾಜ್ಯ ಸರ್ಕಾರದ ಕಮಿಷನ್ ದಾಹದ ಬಲಿಪಶುಗಳಾಗಿದ್ದಾರೆ.
ಒಂದೆಡೆ ಸಾಲು ಸಾಲು ನೇಮಕಾತಿ ಅಕ್ರಮಗಳು, ಮತ್ತೊಂದೆಡೆ ವ್ಯವಸ್ಥೆಯ ಎಲ್ಲಾ ಸ್ಥರಗಳಲ್ಲೂ ಕಮಿಷನ್ ಲೂಟಿ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಇನ್ನೊಮ್ಮೆ ಅಧಿಕಾರ ಸಿಗದು, ಈಗಲೇ ಸಾಧ್ಯವಾದಷ್ಟು ಬಾಚಿಕೊಳ್ಳೋಣ ಎಂಬ ಹಪಹಪಿತನವೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


