ಸ್ನೇಹಿತರೊಟ್ಟಿಗೆ ಸೇರಿ ಕುಡಿದು ತೇಲಾಡುತ್ತಿದ್ದವರು ಯಾರು? ಆರ್ ಎಸ್ ಎಸ್ ಮತ್ತು ಬಿಜೆಪಿಯದ್ದು ತಾಯಿ-ಮಕ್ಕಳ ಸಂಬಂಧ!
ಆರ್‌ಎಸ್‌ಎಸ್ ಎಂಬುದನ್ನು ಹೊರಗಿನಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಅದು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು ಎಂದಿದ್ದಾರೆ.

ಬೆಂಗಳೂರು: ಆರ್‌ಎಸ್‌ಎಸ್ ಅಂದರೇನು ಎಂಬುದು ನಿಮ್ಮ ಘನ ಹೃದಯಕ್ಕೆ ಅರ್ಥವಾಗಬೇಕಾದರೆ ಮೊದಲು ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಬರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.
ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಸಿ.ಟಿ ರವಿ ಆರ್‌ಎಸ್‌ಎಸ್ ಎಂಬುದನ್ನು ಹೊರಗಿನಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಅದು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು ಎಂದಿದ್ದಾರೆ.
ಈ ದೇಶ ಜಾತ್ಯಾತೀತ ತತ್ವಗಳ ಮೇಲೆ ನಿಂತಿದೆ, ಸಂಘ ಯಾರನ್ನೂ ಗುತ್ತಿಗೆ ಪಡೆದಿಲ್ಲ.
ನಿಮ್ಮ ಪಕ್ಷದ ಉಳಿಗೆ ಮಾನ್ಯ ಪದ್ಧತಿಯನ್ನು ನೀವು ತೋರಿಸಿಕೊಟ್ಟಿದ್ದೀರಿ. ದೇಶ ಸೇವೆ ಮಾಡಬೇಕೆಂದರೆ ರಾಜಕೀಯಕ್ಕೆ ಬರಬೇಕೆಂದಿಲ್ಲ ಸಿದ್ದರಾಮಯ್ಯನವರೇ.
ಬಲಹೀನರಿಗೆ ಬೆಳಕಾಗಲು ಸಂಘ ಕೊಟ್ಟ ಕೊಡುಗೆಗಳನ್ನು ನಾವು ತಿಳಿಸುತ್ತೇವೆ, ಒಮ್ಮೆ ಸಂಘದ ಶಾಖೆಗೆ ಬನ್ನಿ.
— C T Ravi
ನೀವು ಹತ್ತಿರಕ್ಕೆ ಬರದೇ ಸಂಘವನ್ನು ನೋಡುವುದು ʼಅಂಧ ಆನೆಯನ್ನು ಮುಟ್ಟಿ ವರ್ಣಿಸಿದಂತಾಗುತ್ತದೆʼ ಆಗುತ್ತದೆ. ಹೀಗಾಗಿ ನೀವು ಸಂಘದ ಶಾಖೆಗೆ ಬನ್ನಿ ಸಂಘದ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ.ಬಿಜೆಪಿ ಮತ್ತು ಆರ್ಎಸ್ಎಸ್ಗೂ ಏನು ಸಂಬಂಧ ಎಂದು ಕೇಳಿದ್ದೀರಲ್ಲವೇ? ತಾಯಿ ಮತ್ತು ಮಕ್ಕಳ ಸಂಬಂಧ. ಅದು ಕಾರ್ಖಾನೆಯಲ್ಲ. ದೇಶವನ್ನು ಸಂಘಟಿಸಲು ಮತ್ತು ಗಟ್ಟಿಯಾಗಿ ಭಾರತವನ್ನು ಕಟ್ಟಲು ಕಾರ್ಯಕರ್ತರನ್ನು ರೂಪಿಸುವ ಶಿಸ್ತುಬದ್ಧ ಗರಡಿ ಮನೆ. ಈ ದೇಶ ಜಾತ್ಯಾತೀತ ತತ್ವಗಳ ಮೇಲೆ ನಿಂತಿದೆ, ಸಂಘ ಯಾರನ್ನೂ ಗುತ್ತಿಗೆ ಪಡೆದಿಲ್ಲ ಎಂದಿದ್ದಾರೆ.
ಕೊನೆಯದಾಗಿ, ನಾನೇನು ಎಂಬುದು ಚಿಕ್ಕಮಗಳೂರಿನ ನನ್ನ ಜನರಿಗೆ, ನನ್ನ ಜೊತೆ ಇರುವ ಕಾರ್ಯಕರ್ತರಿಗೆ ಗೊತ್ತು. ʼಸ್ನೇಹಿತರೊಟ್ಟಿಗೆ ಸೇರಿ ಕುಡಿದು ತೇಲಾಡುತ್ತಿದ್ದವರು
ಯಾರು ಎಂದು ಮೈಸೂರಿನ ನಾಗರೀಕರು ಈಗಲೂ ಮರೆತಿರಲಿಕ್ಕಿಲ್ಲ. ಒಮ್ಮೆ ಕೇಳಿ ನೋಡಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.
ಕಣ್ಣಿಗೆ ಪೊರೆ ಬಂದರೆ ಕ್ಯಾಟರಾಕ್ಟ್ ಮಾಡಿಸಬಹುದು. ಕತ್ತಲಲ್ಲಿ ಕಾರು ಚಲಾಯಿಸಿದವರು ಯಾರು ಎಂಬ ಸತ್ಯ ಗೊತ್ತಿದ್ದೂ, ಸುಳ್ಳನ್ನೇ ಮನೆದೇವರು ಮಾಡಿಕೊಂಡಿರುವ ನಿಮ್ಮ ಮೆದುಳಿನ ಪೊರೆಗೆ ಮದ್ದೆಲ್ಲಿ ಸಿದ್ದರಾಮಯ್ಯನವರೆ? https://t.co/j3Z5gI1gnc
— C T Ravi
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


