ರಾಜಕೀಯ

'ಹಮ್ ದೋ ಹಮಾರೆ ದೋ' ಸರ್ಕಾರದಲ್ಲಿ 'ಮೋದಿ ಮಿತ್ರರು' ಎಲ್ಲಾ ಬಗೆಯ ವ್ಯವಹಾರಗಳಿಗೂ ಇಳಿದರೆ?

ಗುಜರಾತಿನಲ್ಲಿ 3 ಸಾವಿರ ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿ ಬೆನ್ನಲ್ಲಾ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

'ಹಮ್ ದೋ ಹಮಾರೆ ದೋ' ಸರ್ಕಾರದಲ್ಲಿ 'ಮೋದಿ ಮಿತ್ರರು' ಎಲ್ಲಾ ಬಗೆಯ ವ್ಯವಹಾರಗಳಿಗೂ ಇಳಿದರೆ?
ನರೇಂದ್ರ ಮೋದಿ
Published On :

ಬೆಂಗಳೂರು: ಗುಜರಾತಿನಲ್ಲಿ 3 ಸಾವಿರ ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂಬ ವರದಿ ಬೆನ್ನಲ್ಲಾ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ದೇಶದೊಳಗೆ ನುಸುಳಲು ಮಾದಕವಸ್ತುಗಳ ಕಳ್ಳಸಾಗಾಣಿಕೆದಾರರಿಗೆ, ಭಯೋತ್ಪಾದಕರಿಗೆ ಗುಜರಾತ್ ಬಹುಪ್ರಿಯ ಸ್ಥಳ ದೊಡ್ಡಮಟ್ಟದ ಡ್ರಗ್ಸ್ ದೇಶದೊಳಗೆ ಬರುವುದು ಗುಜರಾತ್ ಮೂಲಕವೇ ಏಕೆ? ನರೇಂದ್ರ ಮೋದಿ ಅವರು ಕಳ್ಳರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆಯೇ? ಎಂದು ಪ್ರಶ್ನಿಸಿದೆ. 

ಗುಜರಾತಿನದ್ದು ಡ್ರಗ್ಸ್ ಮಾಡೆಲ್ ಎಂಬುದು ಈಗ ದೇಶದ ಜನತೆಗೆ ಈಗ ಅರಿವಾಗಿದೆ! ಗುಜರಾತಿನ ಅದಾನಿ ಪೋರ್ಟ್‌ನಲ್ಲಿ ಹಿಂದೆಂದೂ ಕಾಣದ ದಾಖಲೆ ಮೊತ್ತದ 3000 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಹಮ್ ದೋ ಹಮಾರೆ ದೋ ಸರ್ಕಾರದಲ್ಲಿ ಮೋದಿ ಮಿತ್ರರು ಎಲ್ಲಾ ಬಗೆಯ ವ್ಯವಹಾರಗಳಿಗೂ ಇಳಿದರೆ? ಈ ದೊಡ್ಡ ಮಟ್ಟದ ಡ್ರಗ್ಸ್ ಅಫಗಾನಿಸ್ತಾನದಿಂದ ಬಂದಿದ್ದು ಹೇಗೆ, ತಾಲಿಬಾನಿಗಳೊಂದಿಗೆ ಸಂಪರ್ಕ ಹೊಂದಿದವರಾರು ಈ ಬಗ್ಗೆ ಮೋದಿ ಮೌನವೇಕೆ? ಎಂದು ತಪರಾಕಿ ಹಾಕಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.