ಬಿಜೆಪಿ ಪಾಲಿಗೆ ರಾಜಕೀಯವೆಂದರೆ ಕಳ್ಳದಂಧೆ; ಮೋದಿ ಅಣತಿಯಂತೆ ಭ್ರಷ್ಟಾಚಾರ ನಡೆಯುತ್ತಿರುವುದು ಸ್ಪಷ್ಟ: ಕಾಂಗ್ರೆಸ್
ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ, ಆಪರೇಷನ್ ಕಮಲಕ್ಕಾಗಿ ಹಣ ಹೂಡಿದ್ದೇಕೆ ಎಂದು ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ, ಆಪರೇಷನ್ ಕಮಲಕ್ಕಾಗಿ ಹಣ ಹೂಡಿದ್ದೇಕೆ ಎಂದು ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ಸಿಪಿ ಯೋಗೀಶ್ವರ್ ಆಪರೇಷನ್ ಕಮಲಕ್ಕಾಗಿ 9 ಕೋಟಿ ಸಾಲ ಮಾಡಿದ್ದರು ಎಂಬ ಅಂಶ ಬಯಲಾಗಿತ್ತು, ಸಾಲ ಮಾಡಿದ್ದೇಕೆ? ಯಾಕಾಗಿ ಈ ಬಂಡವಾಳ ಹೂಡಿಕೆ? ಬಿಜೆಪಿ ಪಾಲಿಗೆ ರಾಜಕೀಯವೆಂದರೆ 'ಕಳ್ಳದಂಧೆ'ಯಾಗಿದೆ.
ಈ ಎಲ್ಲಾ ಭ್ರಷ್ಟಾಚಾರಗಳು ಮೋದಿಯವರ ಅಣತಿಯಂತೆ ನಡೆಯುತ್ತಿರುವುದು ಸ್ಪಷ್ಟ. ಪೆಟ್ರೋಲ್ ಡೀಸೆಲ್‌ಗಳ ಬೆಲೆ ಏರಿಕೆಯಿಂದ ಇಡೀ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ, ಬಹುತೇಕ ವಸ್ತುಗಳ ಬೆಲೆ ಏರಿಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಲಿದೆ. ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳಲಿವೆ. ಆದರೆ ಬಿಜೆಪಿ ಸರ್ಕಾರ ತೆರಿಗೆ ಇಳಿಸುವ ಸಣ್ಣ ಮನಸ್ಸನ್ನೂ ಮಾಡದೆ ನಿರ್ದಯವಾಗಿ ನಡೆದುಕೊಳ್ಳುತ್ತಿದೆ ಭ್ರಷ್ಟ ಬಿಜೆಪಿ ಸರ್ಕಾರ ಎಂದು ಟಾಂಗ್ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


