ಓವೈಸಿಗೂ ಜಿನ್ನಾಗೂ ಯಾವುದೇ ವ್ಯತ್ಯಾಸವಿಲ್ಲ: ಸಿ.ಟಿ.ರವಿ
ಓವೈಸಿಗೂ ಜಿನ್ನಾಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬೆಂಗಳೂರು: ಓವೈಸಿಗೂ ಜಿನ್ನಾಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಭಾರತ ಸರ್ಕಾರ ಸಿಎಎ ಕಾಯ್ದೆ ಹಿಂತೆಗೆದುಕೊಳ್ಳದಿದ್ದರೆ ರಕ್ತಪಾತವಾಗುತ್ತದೆ ಎಂಬ ಒವೈಸಿ ಹೇಳಿಕೆ ಖಂಡಿಸಿ ಬೆಂಗಳೂರಿನ ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಸಿ.ಟಿ.ರವಿ ಮಾತನಾಡಿದರು.
ಸಂವಿಧಾನದಲ್ಲಿ ನಂಬಿಕೆ ಇರುವವರು ಹಿಂಸೆ - ರಕ್ತಪಾತದಲ್ಲಿ ನಂಬಿಕೆ ಇಟ್ಟಿರುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ. ಇವರ ಈ ಮಾತು ಕೇಳಿದರೆ ಓವೈಸಿಗೂ ಜಿನ್ನಾ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.ಓವೈಸಿಗಳಾಡಿರುವ ಮಾತು ಹೊರದೇಶಗಳ ಮುಸಲ್ಮಾನರಿಗೂ ಪೌರತ್ವ ಕೊಡಬೇಕು ಎಂಬುದಾಗಿದೆ. ಎಲ್ಲರಿಗೂ ಪೌರತ್ವ ಕೊಡಬೇಕು ಎನ್ನುವುದಾದರೆ ಪಾಕಿಸ್ತಾನ,ಬಾಂಗ್ಲಾ, ಅಪ್ಘಾನಿಸ್ತಾನ ರಾಷ್ಟ್ರಗಳು ಇಸ್ಲಾಂ ರಾಷ್ಟ್ರ ಎಂದು ಘೋಷಿಸಿರುವುದನ್ನು ಕೈ ಬಿಡಬೇಕು.ಅಖಂಡ ಭಾರತ ಆಗಬೇಕು.ಆಗ ಎಲ್ಲರಿಗೂ ಪೌರತ್ವ ಸಿಗುತ್ತದೆ ಎಂದರು.
ಇದನ್ನೂ ಓದಿ: ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ವಿಡಿಯೋ ವೈರಲ್
ಸುಳ್ಳುಕೋರರಿಗೆ ಇಲ್ಲಿ ಜಾಗವಿಲ್ಲ. ಅವರ ಪರವಾಗಿ ಓವೈಸಿ ಮಾತನಾಡುತ್ತಿರುವುದು ಖಂಡನೀಯ. ಆ ರೀತಿಯ ರಕ್ತಪಾತಕ್ಕೆ ಇಲ್ಲಿ ಅವಕಾಶವಿಲ್ಲ.ರಕ್ತಪಾತ ನಡೆಯದಂತೆ ತಡೆಯುವ ಸಾಮರ್ಥ್ಯ ಭಾರತ ಸರ್ಕಾರಕ್ಕಿದೆ. ವಿರೋಧಾಭಾಸ ಎಂದರೆ ಇವರು ಸಮಾನ ನಾಗರಿಕಸಂಹಿತೆ ವಿರೋಧಿಸುತ್ತಾರೆ. ಅಂಬೇಡ್ಕರ್ ಅವರು ಸಮಾನ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಇವರು ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ತರಬಾರದೆಂದು ಹೇಳುತ್ಯಾರೆ. ಇಸ್ಲಾಮ್ ಕಾನೂನು ಪ್ರಕಾರ ಅವರಿಗೆ ಮೂರುಮೂರು ಮದುವೆ, ತಲಾಖ್ ಹೇಳುವುದಕ್ಕೆ ಇಸ್ಲಾಮ್ ಧರ್ಮಬೇಕು, ಸಮಾನ ನಾಗರಿಕ ಸಂಹಿತೆ ಮಾತ್ರ ಬೇಡವಾಗಿದೆ ಎಂದು ಸಿ.ಟಿ.ರವಿ ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


