ರಾಜಕೀಯ

ಬಿಎಸ್ ವೈಗೆ ವಯಸ್ಸಾಗಿಲ್ಲ, ಅವರಿಗೆ ಮದುವೆ ಮಾಡಿದ್ರೆ ಇಬ್ಬರು ಮಕ್ಕಳಾಗ್ತಾರೆ, ಜನತೆ ಈ ರಾಜೀನಾಮೆ ಸಹಿಸಲ್ಲ: ಸಿ.ಎಂ ಇಬ್ರಾಹಿಂ

ಯಡಿಯೂರಪ್ಪ ಅವರ ರಾಜೀನಾಮೆ ಕುರಿತು ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ಈ ಬದಲಾವಣೆಯನ್ನು ರಾಜ್ಯದ ಆರುವರೆ ಕೋಟಿ ಮಂದಿ ಸಹಿಸಲ್ಲ ಎಂದು ಹೇಳಿದ್ದಾರೆ.

ಬಿಎಸ್ ವೈಗೆ ವಯಸ್ಸಾಗಿಲ್ಲ, ಅವರಿಗೆ ಮದುವೆ ಮಾಡಿದ್ರೆ ಇಬ್ಬರು ಮಕ್ಕಳಾಗ್ತಾರೆ, ಜನತೆ ಈ ರಾಜೀನಾಮೆ ಸಹಿಸಲ್ಲ: ಸಿ.ಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ-ಯಡಿಯೂರಪ್ಪ
Published On :

ಬೆಂಗಳೂರು: ಯಡಿಯೂರಪ್ಪ ಅವರ ರಾಜೀನಾಮೆ ಕುರಿತು ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ಈ ಬದಲಾವಣೆಯನ್ನು ರಾಜ್ಯದ ಆರುವರೆ ಕೋಟಿ ಮಂದಿ ಸಹಿಸಲ್ಲ ಎಂದು ಹೇಳಿದ್ದಾರೆ. 
 

ರಾಜಕೀಯ ಒತ್ತಡ ಹಾಕಿ ರಾಜೀನಾಮೆ ಪಡೆಯೋದು ಸರಿಯಲ್ಲ ಎಂದು ಹೇಳಿರುವ ಸಿಎಂ ಇಬ್ರಾಹಿಂ, ಕೇರಳದಲ್ಲಿ 80 ವರ್ಷದ ವೃದ್ಧ ಶ್ರೀಧರನ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಗೆ 75 ವರ್ಷ ಆಗಿದೆ ಎಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿಲ್ಲ. ಮದುವೆ ಮಾಡಿದ್ರೆ ಇಬ್ಬರು ಮಕ್ಕಳಾಗ್ತಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದಿರುವುದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಜೂನ್-ಜುಲೈ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತೆ ಎಂದು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಕೇಶವಕೃಪಾಕ್ಕೂ, ಬಸವಕೃಪಾಕ್ಕೂ ಹೊಂದಾಣಿಕೆ ಇಲ್ಲ ಎಂಬುದು ತಿಳಿದಿದೆ. ಆದರೆ ವಯಸ್ಸಿನ ಕಾರಣ ನೀಡಿ ರಾಜೀನಾಮೆ ಪಡೆದಿದ್ದು ಸರಿಯಲ್ಲ ಯಡಿಯೂರಪ್ಪ ಅವರು ಲವಲವಿಕೆಯಿಂದ ಇದ್ದಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.