ರಾಜಕೀಯ

ನಟ ದರ್ಶನ್ ವಿವಾದ; ಇತ್ತೀಚಿಗೆ ಇಂದ್ರಜಿತ್ ಲಂಕೇಶ್‌ರನ್ನು ಭೇಟಿಯಾಗಿಲ್ಲ ಎಂದ ಎಚ್ ಡಿ ಕುಮಾರಸ್ವಾಮಿ

ಇತ್ತೀಚಿಗೆ ಇಂದ್ರಜಿತ್ ಲಂಕೇಶ್‌ರನ್ನು ಭೇಟಿಯಾಗಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿಕುಮಾರಸ್ವಾಮಿ ಫೋಟೋ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ನಟ ದರ್ಶನ್ ವಿವಾದ; ಇತ್ತೀಚಿಗೆ ಇಂದ್ರಜಿತ್ ಲಂಕೇಶ್‌ರನ್ನು ಭೇಟಿಯಾಗಿಲ್ಲ ಎಂದ ಎಚ್ ಡಿ ಕುಮಾರಸ್ವಾಮಿ
ಇಂದ್ರಜಿತ್ ಲಂಕೇಶ್-ಹೆಚ್ ಡಿ ಕುಮಾರಸ್ವಾಮಿ
Published On :

ಬೆಂಗಳೂರು: ಇತ್ತೀಚಿಗೆ ಇಂದ್ರಜಿತ್ ಲಂಕೇಶ್‌ರನ್ನು ಭೇಟಿಯಾಗಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್ ಡಿಕುಮಾರಸ್ವಾಮಿ ಫೋಟೋ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಚಿತ್ರನಟ ದರ್ಶನ್‌ ರಿಂದ ದಲಿತ ಸಪ್ಲೈರ್ ಮೇಲಿನ ಹಲ್ಲೆ ಸುದ್ದಿ ಸದ್ದಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಯಾಗಿರುವ ಫೋಟೋ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ತಾವು ಇತ್ತೀಚಿಗೆ ಇಂದ್ರಜಿತ್ ಲಂಕೇಶ್‌ರನ್ನು  ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌.ಡಿ.ಕುಮಾರಸ್ವಾಮಿ, 'ಏಕೆ ಈ ಪ್ರಕರಣದಲ್ಲಿ ನನ್ನ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸ ಇವೆ. ನಾನು ರಾಜಕೀಯ ಮಾಡಿದರೆ ನೇರವಾಗಿ ಮಾಡುತ್ತೇನೆ.ಕದ್ದು ಮುಚ್ಚಿ ರಾಜಕಾರಣ ನಾನು ಮಾಡುವುದಿಲ್ಲ ಎಂದು ಹೇಳಿದರು.

ನನ್ನ ರೀತಿ ವಿಷಯವನ್ನು ಮುಕ್ತವಾಗಿ ಪ್ರಸ್ತಾಪ ಮಾಡುವವರು ಈ ದೇಶದಲ್ಲಿ ಯಾರೂ ಇಲ್ಲ. ಮುಕ್ತವಾಗಿ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಈ ಫೋಟೋ ಬಿಡುಗಡೆ ಮಾಡಿರುವ ಹಿಂದಿನ ಉದ್ದೇಶ ಏನು ಎಂದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ. ಈ ಹಿಂದೆ  ಅನೇಕ ಬಾರಿ ಇಂದ್ರಜಿತ್ ಲಂಕೇಶ್ ನನ್ನನ್ನು ಭೇಟಿಯಾಗಿ ಸಂದರ್ಶನ ತೆಗೆದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ನಾನು ಇಂದ್ರಜಿತ್ ಲಂಕೇಶ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ ಪ್ರತಿ ನಿತ್ಯ ನೂರಾರು ಜನ ನನ್ನನ್ನು ಭೇಟಿ ಆಗುತ್ತಾರೆ. ಯುವಕರು, ವಯಸ್ಸಾಗಿರುವವರು ಫೊಟೋ ತೆಗೆದುಕೊಳ್ಳುತ್ತಾರೆ.ಆದರೆ ಇತ್ತೀಚಿಗೆ ನಾನು  ಇಂದ್ರಜಿತ್ ರನ್ನು ಭೇಟಿಯಾಗಿಲ್ಲ. ಈ ಫೋಟೋ ‌ಈಗ ಯಾರು ಉಪಯೋಗ ಮಾಡಿಕೊಳ್ಳಲು ಹೋಗುತ್ತಿದ್ದಾರೆ ಎನ್ನುವ ಸತ್ಯವನ್ನು ಇಂದ್ರಜಿತ್ ಲಂಕೇಶ್ ತಿಳಿಸಲಿ ಎಂದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.