ಅವನು ನಮ್ಮ ಹುಡುಗನೇ, ನನ್ನ ಸಂಬಂಧಿಕ ಕೂಡ, ಅದ್ಕೆ ಹೊಡೆದೆ: ಡಿಕೆ ಶಿವಕುಮಾರ್ ಸ್ಪಷ್ಟನೆ
ಪಕ್ಕದಲ್ಲಿ ಬಂದು ನಿಂತ ಜೆಡಿಎಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಈಗಾಗಲೇ ಬಿಜೆಪಿ ಟೀಕಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಇದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ಪಕ್ಕದಲ್ಲಿ ಬಂದು ನಿಂತ ಜೆಡಿಎಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಈಗಾಗಲೇ ಬಿಜೆಪಿ ಟೀಕಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಇದು ಚರ್ಚೆಗೆ ಗ್ರಾಸವಾಗಿದೆ.
ಈ ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಅವನು ನಮ್ಮ ಹುಡುಗನೇ, ನಮ್ಮ ಸಂಬಂಧಿಕ, ಅವನು ನನ್ನ ಹೆಗಲ ಮೇಲೆ ಕೈಹಾಕಲು ಬಂದ, ಆಗ ಏನು ಇಂಥ ನಡತೆ, ನೋಡಿದವರು, ಟಿ ವಿ ಮಾಧ್ಯಮದವರೆಲ್ಲ ಇದ್ದಾರೆ, ಹೆಗಲ ಮೇಲೆ ಕೈಹಾಕಲು ಬರ್ತಿದ್ದೀಯಾ ಎಂದು ಹೊಡೆದೆ, ನಮ್ಮ ಮನೆ ಹುಡುಗನಿಗೆ ಹೊಡೆಯುವ ರೀತಿಯಲ್ಲಿ ಕೈಯೆತ್ತಿ ಒಂದು ಏಟು ಹೊಡೆದೆ, ಅವನು ಬೈದರೆ ನಾನು ಬೈಸಿಕೊಳ್ಳುತ್ತೇನೆ, ನಾನು ಬೈದರೆ ಅವನು ಬೈಸಿಕೊಳ್ಳುತ್ತಾನೆ, ನನ್ನದು-ಅವನದು ಸಂಬಂಧ ಆ ರೀತಿ ಇದೆ ಎಂದು ವಿವಾದಕ್ಕೆ ತೆರೆ ಎಳೆಯಲು ಸಮಜಾಯಿಷಿ ನೀಡಿದ್ದಾರೆ.
ಹೊಡೆಸಿಕೊಂಡವರು ಕೈಹಾಕಿಲ್ಲ ಎನ್ನುತ್ತಿದ್ದಾರಲ್ಲವೇ ಎಂದು ಕೇಳಿದಾಗ, ಆಯ್ತಪ್ಪ, ಕೈ ಹಾಕಿಲ್ಲ ಎಂದುಕೊಳ್ಳೋಣ, ಕೈ ಯಾಕೆ ಬಂತು, ಈಗ ಯಾಕೆ ನಮ್ಮ ಹುಡುಗರ ಜೊತೆ ಚರ್ಚೆ, ನಾವು ತಪ್ಪು ಮಾಡ್ತೀವಿ, ಅವರೂ ತಪ್ಪು ಮಾಡ್ತಾರೆ, ಹೋಗ್ಲಿ ಬಿಡಿ ಅವ್ನನ್ನೇನು ಲೀಡರ್ ಮಾಡ್ತೀರ, ನಂದು-ಅವಂದು ಗಲಾಟೆ, ನಾವೇ ಸರಿ ಮಾಡಿಕೊಳ್ತೀವಿ ಎಂದು ನಗುತ್ತಾ ಮಾಧ್ಯಮಗಳಿಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಅಭಿಮಾನದಿಂದ ಹೋಗಿದ್ದೆ: ಇನ್ನು ಶಿವಕುಮಾರ್ ಅವರಿಂದ ಹೊಡೆಸಿಕೊಂಡಿರುವ ಜೆಡಿಎಸ್ ಕಾರ್ಯಕರ್ತ ಉಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಡಿ ಕೆ ಶಿವಕುಮಾರ್ ಅವರು ಜೆಡಿಎಸ್ ನಾಯಕ ಮಾದೇಗೌಡರನ್ನು ನೋಡಲು ಬಂದಿದ್ದರು, ನಾನು ಅವರ ಮೇಲಿನ ಅಭಿಮಾನದಿಂದ ಸಂಬಂಧಿಕರು ಎಂದು ಪ್ರೀತಿ, ವಿಶ್ವಾಸವಿಟ್ಟುಕೊಂಡು ಹೋದೆ. ಅದು ಬಿಟ್ಟರೆ ಪಕ್ಷದ ವತಿಯಿಂದ ನಾನು ಹೋದದ್ದಲ್ಲ.
ನಾನು ಅವರ ಹೆಗಲ ಮೇಲೆ ಕೈಹಾಕಿಲ್ಲ, ಹಾಕಿದ್ದರೆ ನಾನು ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ, ನಾನು ಅವರ ಪಕ್ಕ ಹೋಗಿ ನಿಂತು ಫೋಟೋ ತೆಗೆಸಿಕೊಳ್ಳಲು ನೋಡಿದ್ದಷ್ಟೆ, ಅವರಿಗೆ ಒಳ್ಳೆಯದಾಗಬೇಕೆಂದರೆ ಮುಂದಿನ ದಿನಗಳಲ್ಲಿ ಇಂತಹ ಸಿಟ್ಟು, ಗೂಂಡಾ ಸಂಸ್ಕೃತಿಯನ್ನು ಬಿಡಬೇಕು, ಅವರಿಗೆ ಶೋಭೆ ತರುವಂಥದ್ದಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


