ವಾರ್ ಆದ್ರೂ ಚಿಂತೆಯಿಲ್ಲ, ಡಿಸೆಂಬರ್ 14 ರ ನಂತರ ಡಿಕೆಶಿಗೆ ನಾನು ಏನೆಂಬುದನ್ನು ತೋರಿಸುತ್ತೇನೆ: ರಮೇಶ್ ಜಾರಕಿಹೊಳಿ
ವಾರ್ ಆದ್ರೂ ಚಿಂತೆಯಿಲ್ಲ. ಡಿಸೆಂಬರ್ 14ಕ್ಕೆ ನಾನು ಏನೆಂಬುದನ್ನು ತೋರಿಸುತ್ತೀನೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.

ಬೆಳಗಾವಿ: ವಾರ್ ಆದ್ರೂ ಚಿಂತೆಯಿಲ್ಲ. ಡಿಸೆಂಬರ್ 14ಕ್ಕೆ ನಾನು ಏನೆಂಬುದನ್ನು ತೋರಿಸುತ್ತೀನೆ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
ದೆಹಲಿಯಿಂದ ವಾಪಸಾದ ನಂತರ ಮಾಧ್ಯಮಗಳೊಂದಿಗ ಮಾತನಾಡಿದ ಅವರು, ಬೇರೆಯವರ ಹಾಗೆ ನಾನು ಹತಾಶ ಮನೋಭಾವದಿಂದ ಮಾತನಾಡುವುದಿಲ್ಲ. ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಡಿ. ಕೆ. ಶಿವಕುಮಾರ್ ವ್ಯಕ್ತಿತ್ವ ಹಾಗೂ ನನ್ನ ವ್ಯಕ್ತಿತ್ವ ಏನು ಎಂಬುದನ್ನು ಹೇಳುತ್ತೇನೆ ಎಂದರು. ಬೇಕಿದ್ದರೆ ವಾರ್ ಆಗಲಿ ಎಂದು ಸವಾಲು ಹಾಕಿದ್ದಾರೆ.
ನನ್ನ ಬಗ್ಗೆ ಡಿ. ಕೆ. ಶಿವಕುಮಾರ್ ಏನೇ ಆರೋಪ ಮಾಡಿದರೂ ನಾನು ಈಗ ಉತ್ತರ ಕೊಡುವುದಿಲ್ಲ. ನಾನು ಈಗ ಚುನಾವಣೆಯ ಮೂಡ್‌ನಲ್ಲಿದ್ದೇನೆ. ನನ್ನ ಶಕ್ತಿ ಏನೆಂದು ಡಿ. ಕೆ. ಶಿವಕುಮಾರ್ ಬೆಳಗಾವಿಗೆ ಬಂದು ಮಾತನಾಡಿದ್ದನ್ನು ತೆಗೆದು ನೋಡಿ ಎಂದು ರಮೇಶ್ ಜಾರಕಿಹೊಳಿ ನೆನಪಿಸಿದರು.
1985 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತೇನೆ. ಆಗ ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳುತ್ತೇನೆ. ಓಪನ್ ವಾರ್ ಆಗಲಿ ಅಂದು ರಮೇಶ್ ಜಾರಕಿಹೊಳಿ ಖಡಕ್ಕಾಗಿ ಹೇಳಿದರು. ಫಲಿತಾಂಶದ ದಿನವೇ ಎಲ್ಲಕ್ಕೂ ಉತ್ತರ ಕೊಡುತ್ತೇನೆ ಎಂದು ಖಾರವಾಗಿ ಉತ್ತರಿಸಿದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಕಣದಲ್ಲಿ 91 ಅಭ್ಯರ್ಥಿಗಳು; ಹೆಬ್ಬಾಳ್ಕರ್ ಸಹೋದರನನ್ನು ಸೋಲಿಸುವುದೇ ಗುರಿ- ಜಾರಕಿಹೊಳಿ
1 ಗಂಟೆ ಸುದ್ದಿಗೋಷ್ಠಿ ನಡೆಸಿ ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬದ ನಡುವೆ ಏನಿತ್ತು ಎಂಬುದರ ಬಗ್ಗೆ ಬಹಿರಂಗವಾಗಿ ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಮೇಲೆ ದಿಲ್ಲಿ ವರಿಷ್ಠರ ಆಶೀರ್ವಾದ ಇರುವುದರಿಂದ ಇಂದು ನಾನು ಜೀವಂತ ಇದ್ದೇನೆ. ಇಲ್ಲವಾದ್ರೆ ಇಷ್ಟೊತ್ತಿಗೆ ನನ್ನನ್ನು ಮುಗಿಸಿ ಬಿಡುತ್ತಿದ್ದರು. ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ದರು.
ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದೇನೆ ಎಂದ ರಮೇಶ್ ಜಾರಕಿಹೊಳಿ, ಬ್ಲ್ಯಾಕ್ ಮೇಲ್ ಯಾರು ಮಾಡ್ತಾರೆ ಎಂದು 14 ನೇ ತಾರೀಕು ಹೇಳುತ್ತೇನೆ. ಈಗ ಇರುವ ಎಂಎಲ್ಎಗಳನ್ನು ಉಳಿಸಿಕೊಳ್ಳಿ ಆಮೇಲೆ ನೋಡೊಣ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


